ಸಾಣೇಹಳ್ಳಿಯಲ್ಲಿ ಏ.12 ರಿಂದ `ಮಕ್ಕಳ ಹಬ್ಬ’ಕ್ಕೆ ಆಹ್ವಾನ

ಸಾಣೇಹಳ್ಳಿಯಲ್ಲಿ ಏ.12 ರಿಂದ  `ಮಕ್ಕಳ ಹಬ್ಬ’ಕ್ಕೆ ಆಹ್ವಾನ

ಸಾಣೇಹಳ್ಳಿ, ಮಾ.27- ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ   ಏಪ್ರಿಲ್ 12 ರಿಂದ 30ರವರೆಗೆ   `ಮಕ್ಕಳ ಹಬ್ಬ’ (ಬೇಸಿಗೆ ಶಿಬಿರ) ವನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಕೋಲಾಟ, ಚಿತ್ರಕಲೆ, ಮಣ್ಣಾಟ, ವೀರಗಾಸೆ, ಯೋಗಾಸನ, ರಂಗಾಟಗಳು, ದಿನಕ್ಕೊಂದು ಪದ್ಯ ರಚನೆ, ಮುಖವಾಡ ತಯಾರಿ, ಕಥೆ ಹೇಳುವ ಮತ್ತು ಕಥೆ ಕಟ್ಟುವ ತರಗತಿ, ಮಕ್ಕಳ ಸಿನಿಮಾ ವೀಕ್ಷಣೆ, ಮಕ್ಕಳ ತೇರು, ಪರಿಸರದ ಮೇಲಿನ ಉಪನ್ಯಾಸ, 3 ಅಥವಾ 4 ನಾಟಕಗಳ ತಯಾರಿ ಹಾಗೂ ಪ್ರದರ್ಶನ ಮುಂತಾದ ಚಟುವಟಿಕೆಗಳಿರುತ್ತವೆ. ಶಿಬಿರದ ಅವಧಿಯಲ್ಲಿ ಮಕ್ಕಳು ಸಾಣೇಹಳ್ಳಿಯಲ್ಲಿಯೇ ಇರುವುದು ಕಡ್ಡಾಯವಾಗಿದ್ದು, ಅವರಿಗೆ ಊಟ-ವಸತಿಯ ಸೌಲಭ್ಯವಿದೆ.  10 ರಿಂದ 14  ವರ್ಷ  ವಯಸ್ಸಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದು. ವಿವರಕ್ಕೆ ಸಂಪರ್ಕಿಸಿ : 8861043553, 9972007015. 

error: Content is protected !!