ದೇಶ ರೂಪಿಸುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ

ದೇಶ ರೂಪಿಸುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ

ರಾಣೇಬೆನ್ನೂರು, ಏ. 18 – ದೇಶದ ಭವಿಷ್ಯ ರೂಪಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಅವರ ಆದರ್ಶ ತತ್ವಗಳನ್ನು ಸರ್ವರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಅಂಬೇಡ್ಕರ್ ಅವರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಮುಖ್ಯೋಪಾಧ್ಯಾಯ ಐ.ಎಚ್. ಮೈದೂರ ಹೇಳಿದರು. ತಾಲ್ಲೂಕಿನ ಚೌಡಯ್ಯ ದಾನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಡಾ. ಬಿ ಆರ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ. ಬಿ.ಆರ್. ಆಂಬೇಡ್ಕರವರು ಕಡು ಬಡತನದಲ್ಲಿ ಶೋಷಣೆಗೊಳಗಾಗಿ ಸಾಕಷ್ಟು ನೋವು ನಲಿವು ಅನುಭವಿಸಿ, ಜೀವನದಲ್ಲಿ ಶಿಕ್ಷಣದಿಂದ ಮಾತ್ರ ನಾವು ಪ್ರಗತಿಯನ್ನು ಸಾಧಿಸಲು ಸಾಧ್ಯ, ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ನಮ್ಮ ದೇಶದ ಭವಿಷ್ಯ ರೂಪಿಸುವ ಸಂವಿಧಾನ ಶಿಲ್ಪಿಯಾಗಿ ಹೊರಹೊಮ್ಮಿದರು ಎಂದರು. ಶಾಲೆಯ ಸಹ ಶಿಕ್ಷಕರಾದ ವಿಜಯ ಪೂಜಾರ, ಎಸ್ ಎನ್ ಹಲವಾಗಲ, ರವಿಕುಮಾರ ಪಾಟೀಲ, ಸೈಯದ್ ಜುಲ್ಫಿಕರ್, ಭರಮೇಶ ಹಿರೆಕೇರೂರ, ಎಸ್ ಎಸ್ ಮುಳಗುಂದ, ನವೀನ್ ಅಂಬಿಗೇರ, ಅಜ್ಜಪ್ಪ ಪಸಗಿ ಸೇರಿದಂತೆ ಶಾಲಾ ಸಿಬ್ಬಂದಿವರ್ಗ ಹಾಗೂ ಮಕ್ಕಳು ಇದ್ದರು.

error: Content is protected !!