ಹೊನ್ನಾಳಿ ತಾ.ನಲ್ಲಿ ದಾಖಲೆಗಳಿಲ್ಲದ 17 ಮೊಬೈಲ್‍ಗಳು, 4 ಲಕ್ಷ ರೂ. ವಶ

ಹೊನ್ನಾಳಿ ತಾ.ನಲ್ಲಿ ದಾಖಲೆಗಳಿಲ್ಲದ  17 ಮೊಬೈಲ್‍ಗಳು, 4 ಲಕ್ಷ ರೂ. ವಶ

ಹೊನ್ನಾಳಿ, ಮಾ. 20 – ತಾಲ್ಲೂಕಿನ ಹೊಳೆಹರಳಹಳ್ಳಿ ಕ್ರಾಸ್‍ನ ಚೆಕ್ ಪೋಸ್ಟ್ ಬಳಿ ಮಧ್ಯಾಹ್ನ ಎಸ್.ಎಸ್.ಟಿ. ತಂಡದವರು ಖಾಸಗಿ ಬಸ್ ತಪಾಸಣೆ ಮಾಡಿದ ಸಮಯದಲ್ಲಿ ಅಬ್ದುಲ್ ಖಲೀಲ್ ಎಂಬಾತನ ಬ್ಯಾಗಿನಲ್ಲಿ ಯಾವುದೇ ದಾಖಲೆಗಳಿಲ್ಲದ ಜಿಯೋ ಕಂಪೆನಿಯ 17 ಟಚ್ ಪ್ಯಾಡ್  ಮತ್ತು ಸ್ಯಾಮ್‍ಸಂಗ್ ಕಂಪನಿಯ ಗುರು ಮ್ಯೂಸಿಕ್ ಮಾಡೆಲ್‍ನ 4 ಮೊಬೈಲ್‌ಗಳು ಸೇರಿದಂತೆ ಒಟ್ಟು 17 ಮೊಬೈಲ್‍ಗಳನ್ನು ಮತ್ತು ನಂದಿ ಗುಡಿಯ ಪ್ರೌಢಶಾಲಾ ಶಿಕ್ಷಕ ಎಚ್.ಡಿ. ಗಡೆಕಟ್ಟೆ ಅವರ ದ್ವಿಚಕ್ರ ವಾಹನವನ್ನು ತಪಾಸಣೆ ಮಾಡಿದಾಗ ಯಾವುದೇ ದಾಖಲೆಗಳಿಲ್ಲದ 3,98,000 ರೂ. ಹಣವನ್ನು ವಶಕ್ಕೆ ಪಡೆದು ಖಜಾನಾಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಅಭಿಷೇಕ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನ್ಯಾಮತಿ ತಹಶೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ, ಹೊನ್ನಾಳಿ ತಹಶೀಲ್ದಾರ್ ಪುರಂದರ ಹೆಗ್ಡೆ, ಫ್ಲೈಯಿಂಗ್ ಸ್ಕ್ವಾಡ್ ಕೃಷಿ ಅಧಿಕಾರಿ ಅತೀಕ್ ಉಲ್ಲಾ, ಎಸ್.ಎಸ್.ಟಿ. ತಂಡದ ಉಪನ್ಯಾಸಕ ಎಚ್. ದೊಡ್ಡಸ್ವಾಮಿ, ಎಚ್.ಎಲ್. ಬಸವರಾಜ್, ಪೊಲೀಸ್ ಸಿಬ್ಬಂದಿ ಎಚ್.ಎಲ್. ಉಮೇಶ್, ಗ್ರಾಮ ಆಡಳಿತಾಧಿಕಾರಿ ಭರ್ಮಪ್ಪ ಅಂಚಿನಮನೆ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!