3.5 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮ್ಮನಹಟ್ಟಿ ಕೆರೆ ಅಭಿವೃದ್ಧಿ

3.5 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮ್ಮನಹಟ್ಟಿ ಕೆರೆ ಅಭಿವೃದ್ಧಿ

ಜಗಳೂರು ಶಾಸಕ ಬಿ. ದೇವೇಂದ್ರಪ್ಪ

ಜಗಳೂರು, ಮಾ.15 – ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ  ಕೆರೆಗೆ ತಡೆಗೋಡೆ ನಿರ್ಮಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ತಾಲ್ಲೂಕಿನ ಶಾಸಕರ ಸ್ವಗ್ರಾಮ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ  ಕೆರೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ನಮ್ಮ ಊರು ನಮ್ಮ ಕೆರೆ ಯೋಜನೆಯಡಿ, 9‌ಎಕರೆ ವಿಸ್ತೀರ್ಣದಲ್ಲಿ ಗೋಕಟ್ಟೆ ಸುಂದರ ವಿನ್ಯಾಸದೊಂದಿಗೆ ಕೆರೆ ರೂಪುಗೊಂಡಿದ್ದು. ಇದೀಗ ರೂ. 3.5 ಕೋಟಿ ವೆಚ್ಚದಲ್ಲಿ ಕೆರೆಗೆ ತಡೆಗೋಡೆ ನಿರ್ಮಿಸಿ  ಅಭಿವೃದ್ಧಿ ಪಡಿಸಲಾಗುವುದು ಎಂದರು.

57 ಕೆರೆ ತುಂಬಿಸುವ ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ಪ್ರಗತಿಯ ಲ್ಲಿದ್ದು ಈ ಕೆರೆಗೂ  ನೀರು ಹರಿಸಲಾಗುವುದು. ಇದರಿಂದಾಗಿ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಗುತ್ತಿಗೆದಾರರು ಇಂಜಿನಿಯರ್ ಬಳಿ ಚರ್ಚಿಸಿ ಸುಸಜ್ಜಿತ, ಶಾಶ್ವತ  ಗುಣಮಟ್ಟದ ತಡೆಗೋಡೆ‌ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಕಟ್ಟಡ ಕಾಮಗಾರಿಗೆ  ಅಗತ್ಯವಿರುವ ನೀರಿನ‌ ಪೂರೈಕೆ ಗ್ರಾಮಸ್ಥರು ಸಹಕರಿಸಬೇಕು. ಭವಿಷ್ಯದ ಪೀಳಿಗೆಗೆ  ಕೆರೆ ವರದಾನವಾಗಲಿದೆ ಎಂದು  ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಗ್ರಾ.ಪಂ‌. ಅಧ್ಯಕ್ಷೆ ಲಕ್ಷಮ್ಮ ಮಾರಪ್ಪ, ಉಪಾಧ್ಯಕ್ಷೆ ಸುಧಾಮಣಿ ಕಾಟಪ್ಪ, ಸದಸ್ಯ ಕೆಂಗಮ್ಮ, ಓ. ಮಂಜಣ್ಣ, ಕೆರೆ ಅಭಿವೃದ್ದಿ ಸಮಿತಿಯ, ನಾಗರಾಜ್, ರಂಗಪ್ಪ, ಕಾಟಪ್ಪ, ತಿಪ್ಪೇಸ್ವಾಮಿ, ಹನುಮಂತಪ್ಪ, ಓಬಣ್ಣ, ಪಿಡಿಓ ವಾಸುದೇವ, ಕಾಂಗ್ರೆಸ್ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ವರಪ್ಪ, ಗುತ್ತಿಗೆದಾರ ಸುರೇಶ್ ಬಾಬು ಮುಂತಾದವರು ಇದ್ದರು.

error: Content is protected !!