ಎಲ್ಲರ ಮನೆಯಲ್ಲಿ ಮಾನವರು ಹುಟ್ಟುತ್ತಾರೆ, ಮನುಷ್ಯತ್ವ ಹುಟ್ಟುವುದಿಲ್ಲ : ಬಸವಪ್ರಭು ಶ್ರೀ

ಎಲ್ಲರ ಮನೆಯಲ್ಲಿ ಮಾನವರು ಹುಟ್ಟುತ್ತಾರೆ, ಮನುಷ್ಯತ್ವ ಹುಟ್ಟುವುದಿಲ್ಲ : ಬಸವಪ್ರಭು ಶ್ರೀ

ಚಿತ್ರದುರ್ಗ, ಮಾ. 6  – ಎಲ್ಲರ ಮನೆಯಲ್ಲು ಮಾನವರು ಹುಟ್ಟುತ್ತಾರೆ. ಆದರೆ ಮನುಷ್ಯತ್ವ ಹುಟ್ಟುವುದಿಲ್ಲ. ಪ್ರತಿ ಮನೆಯಲ್ಲಿ ಮಾನವೀಯತೆ ಕಾರ್ಯಗಳು ನಡೆದಾಗ ಆ ಮನೆಯ ಮಾನವ ನಿಜವಾದ ಮಾನವ. ಇಲ್ಲವಾದರೆ ದಾನವನಾಗುತ್ತಾನೆ ಎಂದು ಶ್ರಿ ಬಸವಪ್ರಭು ಸ್ವಾಮೀಜಿ ನುಡಿದರು.

ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಮೂವತ್ನಾಲ್ಕನೇ ವರ್ಷದ ಮೂರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಇಂದಿನ ದಿನಗಳಲ್ಲಿ ಮದುವೆ ಆದ ನಂತರ ಅತ್ತೆ-ಮಾವ, ತಂದೆ-ತಾಯಿಯನ್ನು ದೂರವಿಡುತ್ತಾರೆ. ದೂರವಿಡಬಾರದ ಮನೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಕುತ್ತಾರೆ. ಅವುಗಳ ಮೇಲೆ ತೋರಿಸುವ ಪ್ರೀತಿ-ಕರುಣೆಯನ್ನು ಹಿರಿಯ ಜೀವಗಳ ಮೇಲೆ ತೋರಿಸಬೇಕು. ಅವರೊಟ್ಟಿಗೆ ಕೂಡಿ ಬಾಳುವುದರಿಂದ ಕುಟುಂಬದಲ್ಲಿ ನೆಮ್ಮದಿ ಸಾಧ್ಯವಾಗುತ್ತದೆ. ನಾವು ಮಾನವರಾಗಿ ಹುಟ್ಟುತ್ತೇವೆ. ಮಾನವರ ಜತೆ ಮಾನವತೆಯ ಪ್ರೀತಿಯಿರಬೇಕು. ಆಗ ಅವನ ಜೀವನ ಸಾರ್ಥಕವೆಂದರು. ಮಾನವತೆಯಿಲ್ಲದಾಗ ಅವನು ದಾನವನಾಗುತ್ತಾನೆ. ಜಗತ್ತಿನಲ್ಲಿ ಮಾನವೀಯತೆ ದೊಡ್ಡದು. ವಧು-ವರರು ಹಿರಿಯರನ್ನು ಮಾನವೀಯ ಗುಣಗಳಿಂದ ಕಾಣಬೇಕೆಂದರು.

ಶ್ರೀ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಚಿತ್ರದುರ್ಗ ಮುರುಘಾ ಮಠದಲ್ಲಿ ಬಡವರ ಕಲ್ಯಾಣ ನಡೆಸಿಕೊಡುವುದರ ಮುಖೇನ ಆರ್ಥಿಕವಾಗಿ ದುರ್ಬಲರಾಗಿರುವ ಬಡವರ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿರುವುದು ಸ್ಮರಣೀಯ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಎಂ.ಕೆ. ತಾಜ್‌ಪೀರ್ ಮಾತನಾಡಿದರು. ಕಾರ್ಯಕ್ರಮದಲ್ಲಿ 8 ಜೋಡಿಗಳ ವಿವಾಹ ನೆರವೇರಿಸಲಾಯಿತು.

ಜಮುರಾ ಕಲಾ ಲೋಕದ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

error: Content is protected !!