ಕೋವಿಡ್ ಪರೀಕ್ಷೆ!

ಹಲೋ ನಿನ್ನ ಫೋನ್ ಹ್ಯಾಂಡ್ ಸೆಟ್ ಮೇಡ್ ಇನ್ ಚೈನಾನಾ?

ಇಲ್ಲಾ ಅನ್ಸುತ್ತೆ ಯಾಕೆ?

ಬಿಸಾಕೋಕೆ.

ಹೌದು. ದೇಶದಲ್ಲೆಲ್ಲಾ ಚೈನಾ ಮೇಡ್ ವಸ್ತುಗಳನ್ನು ಇನ್ಮೇಲೆ ರಿಜೆಕ್ಟ್ ಮಾಡಬೇಕು ಅಂತಾ ಎಲ್ಲಾ ಡಿಸೈಡ್ ಮಾಡಿದಾರೆ. ಈ ಚೈನಾದವರ ಕಾಟ ಜಾಸ್ತಿ ಆಯ್ತು ಬ್ರೋ. ಈಗ್ಲಿಂದಲೇ ಈ ಚೈನಾದಿಂದ ಬರುವ ಎಲ್ಲಾ ವಸ್ತುಗಳನ್ನು ರಿಜೆಕ್ಟ್ ಮಾಡಬೇಕು.

ನಾನೂ ಅದೇ ಡಿಸೈಡ್ ಮಾಡಿದೀನಿ. ಎಲ್ಲಾ ಮೇಡ್ ಇನ್ ಚೈನಾ ವಸ್ತುಗಳನ್ನು ನಾವು ರಿಜೆಕ್ಟ್ ಮಾಡಬಹುದು. ಆದರೆ, ಬಾರ್ನ್ ಇನ್ ಚೈನಾ ವಸ್ತುವನ್ನು ರಿಜೆಕ್ಟ್ ಮಾಡೋಕೆ ಜಗತ್ತಿನಲ್ಲಿಯೇ ಎಲ್ಲರಿಂದ ಆಗ್ತಾ ಇಲ್ಲ.

ಅದು ಯಾವುದು ಬಾಸು?

ಕೊರೊನಾ!

ಕೋವಿಡ್ ಪರೀಕ್ಷೆ! - Janathavani

ಅಯ್ಯೋ ಅದರ ಹೆಸರು ಎತ್ತಬೇಡ. ಎಲ್ಲರೂ ಅದರ ಹೆದರಿಕೆಯಲ್ಲಿ ಮೂರು ತಿಂಗಳು ಮನೇಲಿ ಮುದುರಿಕೊಂಡು ಮುಂಡಾ ಮೋಚ್ಕೆಂಡು ಹೋಗಿದೀವಿ. ಅಲ್ಲಾ ಬ್ರೋ ಈ ಚೈನಾದಿಂದ ಬಂದ ಕೋವಿಡ್‌ಗೇ ಥಂಡಾ ಹೊಡೆದಿದ್ದೀವಿ. ಸಾಲದೂ ಅಂತಾ ಅಲ್ಲಿ ಸೈನ್ಯದವರು ನಮ್ಮ ಬಾರ್ಡರ್‌ನಲ್ಲಿ ಕ್ಯಾತೆ ತೆಗೆದಿದಾರೆ. ಅವರಿಗೆ ಬುದ್ಧಿ ಹೇಳೋರು ಯಾರು ಇಲ್ವಾ?

ಸಾವಿರಾರು ವರ್ಷಗಳ ಹಿಂದೆ ನಮ್ಮ ದೇಶದಿಂದ ಹೋಗಿರೋ ಬುದ್ಧನೇ ಅವರಿಗೆ ಬುದ್ಧಿ ಹೇಳಬೇಕು ನೋಡು.

ನಿಜ. ಬುದ್ಧಿ ಅಂದ ತಕ್ಷಣ ನೆನಪಾಯ್ತು. ಹೌದೂ ಈಗ ಎಸ್ಸೆಸ್ಸೆಲ್ಸಿ ಪರೀಕ್ಷೇಲಿ ನಮ್ಮ ಸ್ಟೂಡೆಂಟ್ಸ್ ಯಾವ ರೀತಿ ಬುದ್ಧಿ ಉಪಯೋಗಿಸಬಹುದು? ಮೂರು ತಿಂಗಳು ಮನೇಲಿ ಇದ್ದು ಇದ್ದೂ ಓದಿರ್ತಾರೆ ಅಂತಿಯಾ?

ಬ್ರೋ ಪರೀಕ್ಷೆ ಬರೆಯೋಕೆ ಚೆನ್ನಾಗಿ ಓದಿರಬೇಕು. ಆಗ ಮಾತ್ರ ಬುದ್ಧಿ ಉಪಯೋಗಿಸಬಹುದು.

ಓದಿರಲಿಲ್ಲಾ ಅಂದ್ರೇ?

ನಾನೂ ಒಬ್ಬ ಸ್ಟೂಡೆಂಟ್‌ಗೆ ಇದೇ ಪ್ರಶ್ನೆ ಕೇಳಿದೆ. ಓದಿಲ್ಲಾ ಅಂದ್ರೇ ಹೆಂಗೆ ಪರೀಕ್ಷೆ ಬರಿತೀ ಅಂತಾ. ಅದಕ್ಕೆ ಅವನು ತಂತ್ರ ಉಪಯೋಗಿಸ್ತೀವಿ ಅಂದ.

ಯಾವ ತಂತ್ರ?

ಕುತಂತ್ರ!

ಅಂದ್ರೇ!?

ಕಾಪಿ ಹೊಡೆಯೋದು!

ಅದು ಹೆಂಗೆ?

ಹಾಕ್ಕೊಳ್ಳೋ ಮಾಸ್ಕ್‌ನಲ್ಲಿ ಕಾಪಿ ಚೀಟಿ ಇಟ್ಕೊಂಡು ಹೋಗೋದು.

ಇನ್ ವಿಜಿಲೇಟರ್ ಚೆಕ್ ಮಾಡೋಕೆ ಬಂದ್ರೇ?

ಒಂದು ಎಂಟು ಸಾರಿ ಕೆಮ್ಮೋದು!!

ಅಲ್ಲಾ ಬ್ರೋ ನಿಜವಾಗ್ಲೂ ಈ ಪರೀಕ್ಷೆಗಳಿಂದಾಗಿ ವಿದ್ಯಾರ್ಥಿಗಳಿಗೆ ಕೋವಿಡ್ ಬಂದ್ರೇ!?

ಹೊಸ ಫಲಿತಾಂಶ ಪ್ರಕಟವಾಗುತ್ತೆ.

ಏನಂತಾ?

ಕೋವಿಡ್ ಪಾಸು! ಶಿಕ್ಷಣ ಇಲಾಖೆ ಫೇಲು!!

 

 

ಕೋವಿಡ್ ಪರೀಕ್ಷೆ! - Janathavani

ಆರ್.ಟಿ. ಅರುಣ್‌ಕುಮಾರ್
[email protected]

error: Content is protected !!