ಜನರು ಜಾಗೃತರಾದರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ

ಜನರು ಜಾಗೃತರಾದರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ - Janathavaniಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ತಂಡದಲ್ಲಿರುವ ಡಾ. ಇ.ಎಂ.ಸುರೇಂದ್ರ

ಮಲೇಬೆನ್ನೂರು, ಜು.12- ಕಳೆದ 3-4 ತಿಂಗಳುಗಳಿಂದ ಮಹಾಮಾರಿ ಸಾಂಕ್ರಾಮಿಕ ರೋಗವಾಗಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲಾಡಳಿತ ಹಾಗೂ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯವರು, ಪೌರ ಕಾರ್ಮಿ ಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಇವರೆಲ್ಲರೂ ಹಗಲು-ರಾತ್ರಿ ಎನ್ನದೇ ಮನೆಯನ್ನು ತೊರೆದು, ತಮ್ಮ ಜೀವವನ್ನು ಒತ್ತೆಯಿಟ್ಟು ಜನರ ಆರೋಗ್ಯ ಕಾಪಾಡಲು ಕೆಲಸ ಮಾಡುತ್ತಿದ್ದಾರೆ. ಆದರೆ, ಸಾರ್ವ ಜನಿಕ ರಾದ ನಾವು ಮಾತ್ರ ಕೊರೊನಾ ಸೋಂಕಿಗೂ ನಮಗೂ ಸಂಬಂಧವೇ ಇಲ್ಲವೆಂಬಂತೆ ನಿರ್ಲಕ್ಷ್ಯ ವಹಿಸಿದ್ದೇವೆ.

ಜನರ ನಿರ್ಲಕ್ಷ್ಯ ಕುರಿತು ದಾವಣಗೆರೆ ಸಿ.ಜಿ ಆಸ್ಪತ್ರೆಯಲ್ಲಿ (ಕೋವಿಡ್ ಆಸ್ಪತ್ರೆ) ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ತಂಡದಲ್ಲಿರುವ ನುರಿತ ತಜ್ಞ ವೈದ್ಯರಾದ ನಿಟ್ಟೂರಿನ ಡಾ. ಇ.ಎಂ.ಸುರೇಂದ್ರ ಅವರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಹೆಮ್ಮಾರಿ ಕೊರೊನಾ ವೈರಸ್ ನಮ್ಮ ದೇಶ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಮಾಡಿರುವ ಅವಾಂತರಗಳನ್ನು ನೋಡಿದ್ದರೂ ಜನ ಮಾತ್ರ ಇನ್ನೂ ಜಾಗೃತರಾಗದಿರುವುದು ತುಂಬಾ ಬೇಸರ ತಂದಿದೆ. ಇದುವರೆಗೂ ನಾವು-ನೀವೆಲ್ಲರೂ ಅನೇಕ ಮಾರಕ ರೋಗಗಳನ್ನು ನೋಡಿದ್ದೇವೆ. ಆದರೆ, ಈ ಸೋಂಕು ಮಾತ್ರ ಆ ಎಲ್ಲಾ ರೋಗಗಳನ್ನು ಮೀರಿಸಿದೆ ಎಂದರೆ ತಪ್ಪಾಗಲಾರದು.

ಒಬ್ಬರಿಂದ ಮತ್ತೊಬ್ಬರಿಗೆ ಬಹಳ ಬೇಗ ಹರಡುವ ಈ ಕಾಯಿಲೆಗೆ ಇದುವರೆಗೂ ಲಸಿಕೆ ಸಿಕ್ಕಿಲ್ಲ. ಆದರೂ ನಮ್ಮ ಜನ ಮಾತ್ರ ನಮಗೆ ಏನೂ ಆಗಲ್ಲ. ಅವರು ನಮ್ಮ ಆತ್ಮೀಯರೆಂದು ಜೊತೆಯಲ್ಲೇ ಬೇರೆಯುತ್ತಾರೆ. ಅಂತರ ಕಾಯ್ದುಕೊಳ್ಳುವುದಿಲ್ಲ. ಕಡ್ಡಾ ಯವಾಗಿ ಮಾಸ್ಕ್ ಬಳಸುತ್ತಿಲ್ಲ. ಆಗಾಗ ಕೈಗಳಿಗೆ ಸ್ಯಾನಿಟೈಸ್‌ ಅಥವಾ ಸಾಬೂನು ಬಳಸಿ ಕೈ ತೊಳೆಯುತ್ತಿಲ್ಲ, ಜನರು ವಹಿಸುವ ಈ ನಿರ್ಲಕ್ಷ್ಯದಿಂದ ಅವ ರೊಬ್ಬರಿಗೆ ಮಾತ್ರ ತೊಂದರೆ ಆಗುವುದಿಲ್ಲ. ಇಡೀ ಕುಟುಂಬ ಮತ್ತು ಆತ ಸಂಪರ್ಕ ಬಳಸಿದ ಎಲ್ಲರಿಗೂ ಸೋಂಕು ಹರಡುತ್ತದೆ ಎಂಬ ಅರಿವು ಇರಬೇಕು. ಇಲ್ಲದಿದ್ದರೆ ಮುಂ ದೊಂದು ದಿನ ನಿಮಗೆ ಚಿಕಿತ್ಸೆ ಕೊಡಲು ವೈದ್ಯರು, ಸೇವೆ ಮಾಡಲು ಶುಶ್ರೂಷಕರು ಸಿಗಲ್ಲ. ಮಲಗಲು ಬೆಡ್‌ ಸಿಗಲ್ಲ. ಅಂತಹ ಪರಿಸ್ಥಿತಿ ನಿರ್ಮಾಣ ವಾದರೂ ಆಶ್ಚರ್ಯವಿಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಳ್ಳ ಬೇಕೆಂದು  ಸುರೇಂದ್ರ ಎಚ್ಚರಿಸಿದ್ದಾರೆ.

ನಿಯಂತ್ರಣ ಹೇಗೆ ಸಾಧ್ಯ : ಪ್ರತಿಯೊ ಬ್ಬರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಮತ್ತು ಕೈಗಳನ್ನು ಸ್ಯಾನಿಟೈಸ್ ಮಾಡುವುದರಿಂದ ಸೋಂಕಿತ ವ್ಯಕ್ತಿ ನಮ್ಮ ಜೊತೆ ಇದ್ದರೂ ಸೋಂಕು ಹರಡದಂತೆ ತಡೆಗಟ್ಟಬಹುದು.

ಕನಿಷ್ಟ 2 ಮೀಟರ್ ದೂರದಲ್ಲಿ ನಿಂತು ಮಾತನಾಡಬೇಕು. ಅನವಶ್ಯಕವಾಗಿ ಮನೆ ಯಿಂದ ಹೊರಗೆ ಬರಬಾರದು. ಪ್ರಯಾಣ ಮಾಡಬಾರದು, ಸಭೆ-ಸಮಾರಂಭ, ಮದು ವೆಗಳಿಗೆ ಹೋಗಬಾರದು. ಅನಿವಾರ್ಯತೆ ಇದ್ದರೆ ಜಾಗೃತಿ ವಹಿಸಿ, ಮೇಲಿನ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ನಿಮ್ಮ ಜೀವ ನಿಮ್ಮ ಕೈಯಲ್ಲಿ : ಸದ್ಯದ ಪರಿಸ್ಥಿತಿಯಲ್ಲಿ ಜನರಾಗಲೀ, ಕೊರೊನಾ ವಾರಿಯರ್ಸ್‌ಗಳಾಗಲೀ ಕೊರೊನಾ ಸೋಂಕಿನ ಬಗ್ಗೆ ಅಸಡ್ಡೆ ತೋರಿದರೆ, ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ, ನೂರು ವರ್ಷ ಆಯಸ್ಸು ಎಂಬಂತೆ ಈಗ ಬಂದಿರುವ ಕೊರೊನಾ ಎಂಬ ಸಂಕಷ್ಟದಿಂದ ನಾವೆಲ್ಲರೂ ಪಾರಾಗಬೇಕೆಂದರೆ, ಜಾಗೃತಿ, ಅರಿವು ಬಹಳ ಮುಖ್ಯವಾಗಿದೆ. ನಮ್ಮ ಜೀವ ನಮ್ಮ ಕೈಯ್ಯಲ್ಲಿದೆ. ಅದನ್ನು ಉಳಿಸುವುದು, ಬಿಡುವುದು ನಮಗೆ ಸೇರಿದೆ.

ಭಯ ಹುಟ್ಟಿಸಬೇಡಿ : ವಿಶೇಷವಾಗಿ ಟಿವಿ ಮಾಧ್ಯಮದವರು ಜನರಲ್ಲಿ ಕೊರೊನಾದ ಬಗ್ಗೆ ಭಯ ಹುಟ್ಟಿಸುವಂತಹ ಸುದ್ದಿ ತೋರಿಸುವ ಬದಲಾಗಿ, ಜನರಿಗೆ ಅರಿವು ಮೂಡಿಸುವ ಸುದ್ದಿಗಳನ್ನು ತೋರಿಸಿ ಜಾಗೃತಿ ತರಬೇಕೆಂದು ಡಾ.   ಸುರೇಂದ್ರ ಮನವಿ ಮಾಡಿದ್ದಾರೆ.
____________________________________________________________________________________________

ಜಿಗಳಿ ಪ್ರಕಾಶ್
944815228
[email protected]

error: Content is protected !!