ಒಂದೇ ದಿನ 66 ಜನ ಗುಣಮುಖ : ಜಿಲ್ಲೆಯಲ್ಲಿ 400 ದಾಟಿದ ಬಿಡುಗಡೆಯಾದವರ ಸಂಖ್ಯೆ

ರಾಣೇಬೆನ್ನೂರಿನಲ್ಲಿ ಕೊರೊನಾ ಶಂಕಿತ ಮಹಿಳೆಯ ಶವಸಂಸ್ಕಾರಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.

ದಾವಣಗೆರೆ, ಜು. 12 – ಜಿಲ್ಲೆಯಲ್ಲಿ ಭಾನುವಾರ 66 ಜನರು ಕೊರೊನಾದಿಂದ ಗುಣ ಮುಖರಾಗಿ ಬಿಡುಗಡೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಇಷ್ಟು ಪ್ರಮಾಣದ ಜನರು ಒಂದೇ ದಿನ ಗುಣಮುಖರಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 104ಕ್ಕೆ ಗಣನೀಯವಾಗಿ ಇಳಿಕೆಯಾಗಿದೆ.

ಇದೇ ದಿನದಂದು ಜಿಲ್ಲೆಯಲ್ಲಿ 20 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಭಾನುವಾರ ಜಿಲ್ಲೆಯಲ್ಲಿ ಮೂವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಕೊರೊ ನಾದಿಂದ ಮೃತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ 534 ಸೋಂಕಿತರು ಕಂಡು ಬಂದಿದ್ದಾರೆ. ಇವರ ಪೈಕಿ 410 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಣೇಬೆನ್ನೂರಿನ 53 ವರ್ಷದ ವ್ಯಕ್ತಿ ನಗರದ ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯಲ್ಲಿ ಮೃತಪಟ್ಟಿ ದ್ದಾರೆ. ಹರಿಹರದ 55 ವರ್ಷದ ಮಹಿಳೆ ಹಾಗೂ ಹಾವೇರಿ ಜಿಲ್ಲೆಯ ಕನವಳ್ಳಿಯ 60 ವರ್ಷದ ವ್ಯಕ್ತಿ ನಗರದ
ಸಿ.ಜಿ. ಆಸ್ಪತ್ರೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ 50 ವರ್ಷ ಮೀರಿದವರಾಗಿದ್ದು, ಅವರು ಸಕ್ಕರೆ ಕಾಯಿಲೆ ಹಾಗೂ ಅತಿ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರು.

ದಾವಣಗೆರೆಯ ಮಿಲ್ಲತ್ ಕಾಲೋನಿ, ನಿಟುವಳ್ಳಿ, ಭಗತ್ ಸಿಂಗ್ ನಗರ, ಎಂ.ಸಿ.ಸಿ. ಬಿ ಬ್ಲಾಕ್, ಕೆ.ಬಿ. ಬಡಾವಣೆ,  ಅಹಮದ್ ನಗರ, ಸಿದ್ದವೀರಪ್ಪ ಬಡಾವಣೆ, ಕುವೆಂಪು ನಗರ, ಭರತ್ ಮಿಲ್ ಕಾಂಪೌಂಡ್ ಹಾಗೂ ತಾಲ್ಲೂಕಿನ ದೊಡ್ಡಬಾತಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ತಾಲ್ಲೂಕಿನಲ್ಲಿ ಒಟ್ಟು ಹದಿನಾಲ್ಕು ಪ್ರಕರಣಗಳು ಕಂಡು ಬಂದಿವೆ.

ಹರಿಹರದಲ್ಲಿ ಎರಡು ಕೊರೊನಾ ಪ್ರಕರಣಗಳು ಕಂಡು ಬಂದಿವೆ.

ಜಗಳೂರಿನಲ್ಲಿ ಎರಡು ಮತ್ತು  ಹೊನ್ನಾಳಿ ತಾಲ್ಲೂಕಿನ ಚಿನ್ನಿಕಟ್ಟೆ, ಬಿದರಹಳ್ಳಿಗಳಲ್ಲಿ ತಲಾ ಒಂದು ಸೋಂಕು ಪ್ರಕರಣ ಕಂಡು ಬಂದಿದೆ.

error: Content is protected !!