ಹಿರೇಎಮ್ಮಿಗನೂರಿಲ್ಲಿ ನಾಳೆ ಶ್ರೀ ಕಲ್ಲೇಶ್ವರ ಸ್ವಾಮಿ ರಥೋತ್ಸವ

ಹಿರೇಎಮ್ಮಿಗನೂರಿಲ್ಲಿ ನಾಳೆ  ಶ್ರೀ ಕಲ್ಲೇಶ್ವರ ಸ್ವಾಮಿ ರಥೋತ್ಸವ

ಹೊಳಲ್ಕೆರೆ ತಾಲ್ಲೂಕಿನ ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ರಥೋತ್ಸವವು ನಾಳೆ ದಿನಾಂಕ 19ರ ಶುಕ್ರವಾರ ಸಂಜೆ 5 ಗಂಟೆಗೆ ನಡೆಯಲಿದೆ. ನಂತರ ಓಕುಳಿ ಏರ್ಪಾಡಾಗಿದೆ. ಹಿರೇಎಮ್ಮಿಗನೂರಿನ ಶ್ರೀ ಕಲ್ಲೇಶ್ವರ ವೀರಗಾಸೆ ಸಂಘದಿಂದ ವೀರಗಾಸೆ ಕುಣಿತ ನಡೆಯಲಿದೆ. ಈ ಪ್ರಯುಕ್ತ ಇಂದು ಬೆಳಿಗ್ಗೆ ಉತ್ಸವ, ನಂತರ 5 ಕ್ಕೆ ಕೆಂಡದ ಅರ್ಚನೆ, ಸಂಜೆ ಶ್ರೀ ಸ್ವಾಮಿ ಮುಹೂರ್ತ, ನಂತರ ಶ್ರೀ ಮಹಿಷಾ ಸುರ ಮರ್ದಿನಿ ದೇವಿಗೆ ಪೂಜೆ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ.

error: Content is protected !!