ಕುಡಿಯಲು ನೀರಿಲ್ಲ, ಫ್ಯಾನ್‌ಗೆ ಕರೆಂಟ್ಇಲ್ಲ !

 ದಾವಣಗೆರೆ ಮಾ 26 – ಬೇಸಿಗೆಯ ತಾಪದ ನಡುವೆ ರಂಜಾನ್ ತಿಂಗಳು ಮುಸ್ಲಿಂ ಬಾಂಧವರ ಉಪವಾಸ ಆಚರಣೆ, ಇಂತಹ ಸಂದರ್ಭದಲ್ಲಿ ದಕ್ಷಿಣ ಕ್ಷೇತ್ರದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ಈ ನಡುವೆ ಕರೆಂಟ್ ಕೂಡ ಕೈಕೊಡುತ್ತಿದ್ದು  ಮೊನ್ನೆ ಸುಮಾರು 4 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಅಡಚಣೆ ಉಂಟಾಗಿತ್ತು. ಬಾಯಾರಿಕೆಗೆ ನೀರಿಲ್ಲ, ತಂಪು ಗಾಳಿಯನ್ನು ಸೇವಿಸಬೇಕೆಂದರೆ ಫ್ಯಾನ್ ಇಲ್ಲ ಎನ್ನುವಂತಾಗಿದೆ ಎಂದು ಉಪವಾಸ ನಿರತ ಮುಸ್ಲಿಂ ಬಾಂಧವರು ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚೆಗೆ ಹಿರಿಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದ ಸಂದರ್ಭದಲ್ಲಿ ಮೂಲಭೂತ ಸಮಸ್ಯೆ ಉಲ್ಬಣಿಸದಂತೆ ಸ್ಥಳೀಯ ಮಟ್ಟದಲ್ಲಿ ಮೂಲ ಸೌಕರ್ಯ ಸೇವೆಗಳನ್ನು ನೀಡಬೇಕೆಂದು ಹಿರಿಯ ಮುಖಂಡರು ಜಿಲ್ಲಾಡಳಿತಕ್ಕೆ ಕೋರಿ ಕೊಂಡಿದ್ದರು.

ನಗರದ ಹಳೇ ಪ್ರದೇಶ ವಾಗಿರುವ ಬೇತೂರು ರಸ್ತೆ, ಆಜಾದ್ ನಗರ, ಭಾಷಾನಗರ, ಸೇರಿದಂತೆ ಆಜುಬಾಜಿನ ಪ್ರದೇಶದಲ್ಲಿ ನಿನ್ನೆ ಸಾಯಂಕಾಲ 6 ಗಂಟೆಗೆ ಹೋದ ಕರೆಂಟ್ ರಾತ್ರಿ10-30ಕ್ಕೆ ಬಂತು. ಹೀಗಾಗಿ ತೀವ್ರ ತೊಂದರೆ ಅನುಭವಿಸು ತ್ತಿರುವ ಮುಸ್ಲಿಂ ಬಾಂಧವರು, ಜಿಲ್ಲಾಡಳಿತ, ಜಿಲ್ಲಾ ಮಂತ್ರಿಗಳು ಈ ಭಾಗದಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಸೂಕ್ತ ಪರಿಹಾರ ನೀಡಲು ಮುಂದಾಗಬೇಕೇಂದು ಕೋರಿದ್ದಾರೆ.  

error: Content is protected !!