ನಗರದ ಗಡಿ ಚೌಡೇಶ್ವರಿ ದೇವಿಯ ವಾರ್ಷಿಕೋತ್ಸವ

ದಾವಣಗೆರೆ, ಫೆ. 8- ನಗರದ ಕುಂದುವಾಡ ರಸ್ತೆಯ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಬನ್ನಿಮಹಾಂಕಾಳಿ, ಶ್ರೀ ವಿನಾಯಕ, ಶ್ರೀ ಈಶ್ವರ, ಶ್ರೀ ಬಸವೇಶ್ವರ ಹಾಗೂ ಶ್ರೀ ಗಡಿಚೌಡೇಶ್ವರಿ ದೇವಿಯ 19 ನೇ ವಾರ್ಷಿಕೋತ್ಸವ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ 15 ನೇ ವಾರ್ಷಿಕೋತ್ಸವ ಕಾರ್ಯಕ್ರಮಗಳು ಇದೇ ದಿನಾಂಕ 10. 11 ಹಾಗೂ 12 ರಂದು ಮೂರು ದಿನಗಳ ಕಾಲ ಜರುಗಲಿವೆ. 10 ರಂದು ಬೆಳಿಗ್ಗೆ 6.30 ಕ್ಕೆ ಪಂಚಾಮೃತ ಅಭಿಷೇಕದೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, 11 ರಂದು ಭಾನುವಾರ ಬೆಳಿಗ್ಗೆ 6.30 ಕ್ಕೆ ಪಂಚಾಮೃತ ಅಭಿಷೇಕ, 12 ರಂದು ಸೋಮವಾರ ಬೆಳಿಗ್ಗೆ 5.30 ಕ್ಕೆ ಕಾಕಡಾರತಿ ನಂತರ 8.30 ಕ್ಕೆ ಪ್ರಸಾದ ವಿನಿಯೋಗವಿದೆ.

error: Content is protected !!