ಅನಾಥ ಮಕ್ಕಳಿಗೆ ವಸತಿ, ಶಿಕ್ಷಣ ಪ್ರಾರಂಭ

ದಾವಣಗೆರೆ, ಜೂ.5- ನಗರದ `ಪ್ರೇಮಾಲಯ ನಿರ್ಗತಿಕ ಹೆಣ್ಣುಮಕ್ಕಳ ಕುಟೀರ’ದಲ್ಲಿ ಜಿಲ್ಲೆಯ ನಿರ್ಗತಿಕ ಹೆಣ್ಣುಮಕ್ಕಳಿಗೆ ಉಚಿತ ವಸತಿ ಮತ್ತು ಶಿಕ್ಷಣ ಪಡೆಯಬಹುದಾಗಿದೆ. ಈ ಕುಟೀರ ದಲ್ಲಿ ತಂದೆ/ತಾಯಿಯಿಲ್ಲದ ಅಥವಾ ಅನಾಥರಾಗಿರುವ ಹೆಣ್ಣು ಮಕ್ಕಳಿಗೆ ಅವಕಾಶವಿದೆ. ವಯೋ ಮಿತಿ 12 ರಿಂದ 18 ವರ್ಷದವ ರಾಗಿರಬೇಕು. 

ಜಿಲ್ಲೆಯ ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆಯಲು ತಿಳಿಸಿದೆ. ವಿವರಗಳಿಗೆ ಸಂಪರ್ಕಿಸಿ : 99641 14869, 98444 05553.

error: Content is protected !!