ಮೇ ಅಂತ್ಯದವರೆಗೂ ಭದ್ರಾ ನೀರು ಹರಿಸಿ

ಮೇ ಅಂತ್ಯದವರೆಗೂ ಭದ್ರಾ ನೀರು ಹರಿಸಿ - Janathavaniದಾವಣಗೆರೆ, ಮೇ 17- ಭದ್ರಾ ನೀರನ್ನು  ಈ ತಿಂಗಳ ಅಂತ್ಯದವರೆಗೂ ಮುಂದುವರಿ ಸುವಂತೆ   ಸಂಸದ  ಜಿ.ಎಂ.ಸಿದ್ದೇಶ್ವರ ಜಲಸಂಪ ನ್ಮೂಲ ಇಲಾಖೆ ಕಾರ್ಯದರ್ಶಿ  ಹಾಗೂ ಕಾಡಾ ಆಡಳಿತಾಧಿ ಕಾರಿಗೆ  ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಬೇಸಿಗೆ ಹಂಗಾಮಿಗೆ ಈಗಾಗಲೇ ಸತತವಾಗಿ ನೀರು ಹರಿಸಿ, ಇದೇ ದಿನಾಂಕ 18 ರಂದು ನಾಲೆಯಲ್ಲಿ ನೀರು ನಿಲ್ಲಿಸುವ ಕುರಿತು ಕಾಡಾದಿಂದ ತೀರ್ಮಾನ ತೆಗೆದುಕೊಂಡಿರುವುದರಿಂದ ಕೊನೆ ಭಾಗದ ರೈತರಿಗೆ ಸಾಕಷ್ಟು ಅನಾನುಕೂಲವಾಗಲಿದೆ.  ಹರಿಹರ ತಾಲ್ಲೂಕಿನ ಯಲವಟ್ಟಿ, ಲಕ್ಕಶೆಟ್ಟಿಹಳ್ಳಿ, ಹೊಳೆಸಿರಿಗೆರೆ, ಕಡರನಾಯ್ಕನಹಳ್ಳಿ, ಧೂಳೆಹೊಳೆ, ಬಿಳಸನೂರು, ಕಮಲಾಪುರ, ಹೊಳೆಸಿರಿಗೆರೆ, ರಾಮತೀರ್ಥ, ಭಾನುವಳ್ಳಿ ಹೀಗೆ ಹಲವಾರು ಗ್ರಾಮಗಳು ಭದ್ರಾ ನಾಲೆಯ ಅಂಚಿನಲ್ಲಿವೆ, ಈ ಗ್ರಾಮಗಳ ರೈತರ ಭತ್ತಗಳು ಈಗ ತಾನೇ ಕಾಳುಗಟ್ಟುತ್ತಿವೆ, ಭತ್ತ ಕಟಾವಿಗೆ ಬರಲು ಇನ್ನೂ ಸಮಯಾವಕಾಶ ಬೇಕಾಗಿದೆ. 

ದಾವಣಗೆರೆ ತಾಲ್ಲೂಕಿನ ಕೊನೇ ಭಾಗದ ರೈತರಿಗೆ ಕೂಡ ನಾಲೆಯಲ್ಲಿ ನೀರು ಮುಂದುವರೆಸುವುದು ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೊನೆ ಭಾಗದ ರೈತರ ಹಿತದೃಷ್ಟಿಯಿಂದ ದಿನಾಂಕ 30.05.2023 ರವರೆಗೆ ಭದ್ರಾ ನಾಲೆಯಲ್ಲಿ ನೀರನ್ನು ಮುಂದುವರೆಸುವಂತೆ ಸಂಸದರು ಮನವಿ ಮಾಡಿದ್ದಾರೆ. ಅಲ್ಲದೇ ಮುಖ್ಯ ಇಂಜಿನಿಯರ್‍ರವರಿಗೆ ದೂರವಾಣಿ ಮೂಲಕ ಮಾತನಾಡಿ ಸೂಚನೆ ನೀಡಿದ್ದಾರೆ.  

error: Content is protected !!