ವೈಯಕ್ತಿಕ ಸಂತೋಷಕ್ಕಾಗಿ ಹಬ್ಬದಾಚರಣೆ

ವೈಯಕ್ತಿಕ ಸಂತೋಷಕ್ಕಾಗಿ ಹಬ್ಬದಾಚರಣೆ

ಹರಪನಹಳ್ಳಿ : ಜಾಗೃತಿ ಸಭೆಯಲ್ಲಿ ಪಿಎಸ್‌ಐ ಶಂಭುಲಿಂಗ ಹಿರೇಮಠ

ಹರಪನಹಳ್ಳಿ, ಮಾ. 24 – ಹಬ್ಬಗಳು ನಮ್ಮ ವೈಯಕ್ತಿಕ ಸಂತೋಷಕ್ಕಾಗಿ ಇವೆಯೇ ಹೊರತು, ಇನ್ನೊಬ್ಬರಿಗೆ ಕಿರುಕುಳ ಕೊಡುವುದಕ್ಕೆ ಅಲ್ಲ ಎಂದು ಪಿ.ಎಸ್.ಐ. ಶಂಭುಲಿಂಗ ಹಿರೇಮಠ ಹೇಳಿದರು.

ಪಟ್ಟಣದ ವಾಲ್ಮೀಕಿ ನಗರದ ದೊಡ್ಡ ಗರಡಿ ಕೇರಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹೋಳಿ ಹಬ್ಬದ ಪ್ರಯುಕ್ತ ಇಂದು ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. 

ಇಲ್ಲಿ ಶ್ರಮಿಕ ವರ್ಗದವರು, ರೈತರು, ಜನಸಾಮಾನ್ಯರು ಹೆಚ್ಚು ಇದ್ದಾರೆ. ಲೋಕಸಭಾ ಚುನಾವಣೆ ಹಿನ್ನೆ ಲೆಯಲ್ಲಿ  ನೀತಿ ಸಂಹಿತೆ ಜಾರಿಯಲ್ಲಿದ್ದು, ಕಾನೂನು ಇತಿಮಿತಿಯಲ್ಲಿ ಹಬ್ಬ ಆಚರಣೆ ಮಾಡಬೇಕು. ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗು ತ್ತಿದ್ದು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಕೊಡದೆ ಸರಳವಾಗಿ ಹಬ್ಬ ಆಚರಣೆ ಮಾಡಬೇಕು. ಎಲ್ಲರಿಗೂ ಕಾನೂನು ಒಂದೇ  ನಾವು ಕಾನೂನು ಕಾಪಡಿದರೆ ಕಾನೂನು ನಮ್ಮನ್ನು ಕಾಪಾಡುತ್ತದೆ. ಸಿಟ್ಟಿನಲ್ಲಿ ನೀವು ಯಾರಿಗಾದರೂ ತೊಂದರೆ ಮಾಡಬೇಡಿ ಎಂದು ಸಲಹೆ ನೀಡಿದರು.

ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, ಹೋಳಿ ಹಬ್ಬ ಭಾರತದಾದ್ಯಂತ ಆಚರಿಸಲಾಗುವ ವರ್ಣರಂಜಿತ ಮತ್ತು ರೋಮಾಂಚಕ ಹಬ್ಬವಾಗಿದೆ ಎಂದರು. 

ಈ ವೇಳೆ ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ಮಂಡಕ್ಕಿ ಸುರೇಶ,  ಪೊಲೀಸ್ ಇಲಾಖೆಯ ಕುಮಾರ್, ಇಮಾಮ್ ಸಾಹೇಬ್, ದೊಡ್ಡಗರಡಿ ದೈವಸ್ಥರಾದ ಪಟ್ನಾಮದ ಹಾಲಸಿದ್ದಪ್ಪ, ರಾಯದುರ್ಗದ ದುರುಗಪ್ಪ, ದ್ಯಾಮಜ್ಜಿ ಹನುಮಂತಪ್ಪ, ಡಿ. ದಂಡ್ಯೆಪ್ಪ, ಕೆ. ಅಂಜಿನಪ್ಪ, ಗಿಡ್ಡಳ್ಳಿ ಮೈಲಪ್ಪ, ಬಾಲದಂಡೆಪ್ಪ, ಕಾವಲರ ನಾಗಪ್ಪ, ಹಳೇಬ್ಯಾಡರ ಕೆಂಚಪ್ಪ, ಮ್ಯಾಕಿ ಶ್ರೀನಿವಾಸ, ಕಮ್ಮಾರ  ಪುತ್ರೇಶ, ಕಳ್ಳಿ ನಾಗಪ್ಪ  ಸೇರಿದಂತೆ ಇತರರು ಇದ್ದರು.

error: Content is protected !!