ಟೈಲರ್‌ಗಳ ಜೀವನ ಭದ್ರತೆಗೆ ಕೇರಳ, ತಮಿಳುನಾಡಿನಂತೆ ಸೌಲಭ್ಯ ನೀಡಲು ಆಗ್ರಹ

ಟೈಲರ್‌ಗಳ ಜೀವನ ಭದ್ರತೆಗೆ ಕೇರಳ, ತಮಿಳುನಾಡಿನಂತೆ ಸೌಲಭ್ಯ ನೀಡಲು ಆಗ್ರಹ

ಹೊನ್ನಾಳಿ, ಮಾ. 20 – ಕಳೆದ 25 ವರ್ಷಗಳ ಹಿಂದೆ ಟೈಲರ್ ಕೆಲಸ ಮಾಡುವ ಸ್ತ್ರೀ-ಪುರುಷರ ಜೀವನ ಭದ್ರತೆಗಾಗಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇ ಷನ್ ಎಂದು ರಾಜ್ಯಮಟ್ಟದ ಸಂಘಟನೆ ರಚನೆಗೊಂ ಡಿದ್ದು, ನಮ್ಮ ಜೀವನ ಸುಧಾರಣೆಗಾಗಿ ಸರ್ಕಾರ ಟೈಲರ್ ಕ್ಷೇಮನಿಧಿ ಮಂಡಳಿ ರಚಿಸಬೇಕಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಿ.ಎ. ನಾರಾಯಣ್ ಹೇಳಿದರು.

ಹೊನ್ನಾಳಿ ತಾಲ್ಲೂಕು ಟೈಲರ್ ಸಂಘವು ಕಿತ್ತೂರುರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಮಾತನಾಡಿ ಕೇರಳ, ತಮಿಳು ನಾಡಿನಲ್ಲಿ ಟೈಲರ್ ಸಂಘವು ಸಂಘಟನೆಗೊಂಡು ಹತ್ತು ವರ್ಷಗಳಿಂದ ಮದುವೆ, ಹೆರಿಗೆ, ಆರೋಗ್ಯ, ಜೀವನ ಭದ್ರತೆಯಂತಹ ಅನೇಕ ಸೌಲಭ್ಯಗಳ ಪಡೆಯುತ್ತಿದ್ದು ರಾಜ್ಯದಲ್ಲಿ ಯೋಜನೆ ಜಾರಿಗೊಳ್ಳಬೇಕಾದರೆ 80 ರೂ.ಗಳ ಸದಸ್ಯತ್ವ ಪಡೆದು ಸಂಘಟನೆ ಹೆಚ್ಚು ಬಲಗೊಳ್ಳಬೇಕಿದೆ ಎಂದರು.

ತಾಲ್ಲೂಕು ಟೈಲರ್ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ, ನಮ್ಮ ಸಂಘದ ಪದಾಧಿಕಾರಿಗಳು ಭವಿಷ್ಯ ನಿಧಿ ಪಿಂಚಣಿ ಯೋಜನೆ ಆರೋಗ್ಯ ವಿಮೆಯಂತಹ ಸರ್ಕಾರದ ಯೋಜನೆಗಳನ್ನು ಪಡೆಯುವುದು ಮುಖ್ಯ ಉದ್ದೇಶವಾಗಿದ್ದು, ತಾಲ್ಲೂಕಿನಲ್ಲಿ 10,000ಕ್ಕೂ ಹೆಚ್ಚು ಟೈಲರ್‌ಗಳಿದ್ದು 200 ಟೈಲರ್‍ಗಳು ಮಾತ್ರ ಸದಸ್ಯತ್ವ ಪಡೆದಿರುವರು. ಸ್ಮಾರ್ಟ್ ಕಾರ್ಡ್ ಹಾಗೂ ಇ-ಶ್ರಮ ಮತ್ತು 18 ವರ್ಷದ ಮೇಲ್ಪಟ್ಟ ವೃತ್ತಿ ಕಸುಬುದಾರರು ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬೇಕಿದೆ ಎಂದರು.

ರಾಜ್ಯ ಖಜಾಂಚಿ ರಾಮಚಂದ್ರಪ್ಪ, ತಾಲ್ಲೂಕು ಉಪಾಧ್ಯಕ್ಷ ರಾಜು, ಕಾರ್ಯದರ್ಶಿ ಬಸವರಾಜ್, ಖಜಾಂಚಿ ವಸಂತ್ ಕುಮಾರ್, ಈಶ್ವರಾ ಚಾರಿ, ಶಿವಪ್ಪ ಸಾಸಿವೆಹಳ್ಳಿ, ಕಾವ್ಯ ಹನಗವಾಡಿ, ರಾಜು ಇನ್ನಿತರರಿದ್ದರು.

error: Content is protected !!