ಹೊಸಪಾಳ್ಯ : ಸಂಭ್ರಮದ ಗ್ರಾಮದೇವತೆ ಹಬ್ಬ

ಹೊಸಪಾಳ್ಯ : ಸಂಭ್ರಮದ ಗ್ರಾಮದೇವತೆ ಹಬ್ಬ

ಮಲೇಬೆನ್ನೂರು, ಮೇ 23- ಹೊಸಪಾಳ್ಯ ಗ್ರಾಮದ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ದೇವಿಗೆ ಗ್ರಾಮದ ಮಹಿಳೆಯರು ಉಡಿ ತುಂಬಿ ಭಕ್ತಿ ಸಮರ್ಪಿಸಿದರು.

ರಾತ್ರಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ವಿವಿಧ ಕಲಾ-ಮೇಳಗಳು ಮೆರವಣಿಗೆಗೆ ಮೆರಗು ತಂದವು. ಪಟಾಕಿ ಸಿಡಿತ ಗಮನ ಸೆಳೆಯಿತು. ಬುಧವಾರ ಬೆಳಗಿನಜಾವ ಹಿಟ್ಟಿನ ಕೋಣ ವಧೆ ನಂತರ ಚರಗ ಹಾಕಲಾಗುವುದು.

error: Content is protected !!