ಸಿದ್ಧಗಂಗಾ ಕಾಲೇಜಿಗೆ ಜೆಇಇ ಮೇನ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ 64ನೇ ರ‍್ಯಾಂಕ್

ಸಿದ್ಧಗಂಗಾ ಕಾಲೇಜಿಗೆ ಜೆಇಇ ಮೇನ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ 64ನೇ ರ‍್ಯಾಂಕ್

ದಾವಣಗೆರೆ, ಏ. 25 – 2023-24ನೇ ಸಾಲಿನ ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಸಿದ್ದಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಮನು ಎಲ್.ಜೆ.ಅದ್ವಿತೀಯ ಸಾಧನೆ ಮಾಡಿ ಅಖಿಲ ಭಾರತ ಮಟ್ಟದ 64ನೇ ರ‍್ಯಾಂಕ್ ಪಡೆದಿರುತ್ತಾನೆ. ವಿದ್ಯಾರ್ಥಿಯ ಈ ಸಾಧನೆಗೆ ಸಂಸ್ಥೆಯ ಮುಖ್ಯಸ್ಥ ಡಾ. ಜಸ್ಟಿನ್ ಡಿಸೋಜಾ ಅಭಿನಂದಿಸಿದರು. 

ಕಾಲೇಜಿನ ನಿರ್ದೇಶಕರಾದ ಡಾ. ಜಯಂತ್, ಅಧ್ಯಕ್ಷ ಪ್ರಶಾಂತ್ ಡಿ.ಎಸ್‌., ಕಾರ್ಯದರ್ಶಿ ಹೇಮಂತ್ ಡಿ.ಎಸ್‌ ಹಾಗೂ ಕಾಲೇಜು ಸಿಬ್ಬಂದಿ ವರ್ಗ ವಿದ್ಯಾರ್ಥಿಯ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!