ನೀತಿ ಸಂಹಿತೆ : 14.32 ಕೋಟಿ ವಿವಿಧ ವಸ್ತುಗಳು ಸೇರಿದಂತೆ ನಗದು ವಶ

ದಾವಣಗೆರೆ, ಏ. 25 – ಲೋಕಸಭಾ ಚುನಾವಣೆಯ ನೀತಿ ಸಂಹಿತೆಯು ಮಾರ್ಚ್ 16 ರಿಂದ ಜಾರಿಯಲ್ಲಿದ್ದು, ಏಪ್ರಿಲ್ 24 ರ ವರೆಗೆ ನೀತಿ ಸಂಹಿತೆ ಉಲ್ಲಂಘನೆಯಡಿ ರೂ. 14,32,07,731 ಮೌಲ್ಯದ ವಿವಿಧ ವಸ್ತುಗಳು, ಮದ್ಯ, ಮಾದಕ ವಸ್ತು ಸೇರಿದಂತೆ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ. 

ಜಿಲ್ಲೆಯಾದ್ಯಂತ 32 ಚೆಕ್ ಪೋಸ್ಟ್, 21 ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವಲೆನ್ಸ್ ತಂಡ, ಅಬಕಾರಿ ಜಾಗೃತ ದಳ, ವಾಣಿಜ್ಯ ತೆರಿಗೆ ಇಲಾಖೆ ತಂಡ ಸೇರಿದಂತೆ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಎಫ್‍ಎಸ್‍ಟಿಯಿಂದ ರೂ. 75,62,100 ನಗದು ವಶ, ಎಸ್‍ಎಸ್‍ಟಿಯಿಂದ ರೂ. 95,35,536 ನಗದು ವಶ, ಎಫ್.ಎಸ್.ಟಿ.ಯಿಂದ 400 ಟವರ್ ಫ್ಯಾನ್, 56.36 ಗ್ರಾಂ ಚಿನ್ನ, 579 ಸೀರೆಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ರೂ.8,26,530 ಗಳಾಗಿರುತ್ತದೆ. ಚೆಕ್‍ಪೋಸ್ಟ್‍ಗಳಲ್ಲಿ 17 ಮೊಬೈಲ್, 300 ಜೀನ್ಸ್ ಪ್ಯಾಂಟ್, ರೂ. 12,52,02,115 ಮೌಲ್ಯದ 20.874 ಕೆ.ಜಿ. ಬಂಗಾರ ಸೇರಿ ರೂ. 12,60,98,095 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.  

ಇದಲ್ಲದೇ, ಅಬಕಾರಿ ಇಲಾಖೆಯಿಂದ ರೂ. 573013 ಮೌಲ್ಯದ 1570.41 ಲೀ ಮದ್ಯ ವಶಪಡಿಸಿಕೊಂಡಿದೆ. ಪೊಲೀಸ್ ಇಲಾಖೆಯಿಂದ ರೂ.210703.45 ಮೌಲ್ಯದ 542.494 ಲೀ ಮದ್ಯ ಹಾಗೂ ರೂ.12000 ಮೌಲ್ಯದ 158 ಗ್ರಾಂ ಗಾಂಜಾವಶ ಪಡಿಸಿಕೊಂಡಿದೆ. ಇಲ್ಲಿಯವರೆಗೆ ವೆಚ್ಚಕ್ಕೆ ಸಂಬಂಧಿಸಿದ 3 ಎಫ್‍ಐಆರ್ ಹಾಗೂ 2 ಎಫ್‍ಎಸ್‍ಟಿಯಿಂದ ಹಾಗೂ ಅಬಕಾರಿ ಕಾಯಿದೆಯಡಿ 728 ಪ್ರಕರಣಗಳು ದಾಖಲಿಸಲಾಗಿವೆ. 

error: Content is protected !!