ಕಾಂಗ್ರೆಸ್‌ಗೆ ಮತ ನೀಡಿದರೆ ನಷ್ಟ, ಬಿಜೆಪಿಗೆ ಕೊಟ್ಟರೆ ಲಾಭ

ಕಾಂಗ್ರೆಸ್‌ಗೆ ಮತ ನೀಡಿದರೆ ನಷ್ಟ, ಬಿಜೆಪಿಗೆ ಕೊಟ್ಟರೆ ಲಾಭ

ಹರಿಹರದ ರೋಡ್ ಶೋನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಹರಿಹರ, ಏ.25- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ದೇಶದಲ್ಲಿ ಕಾಂಗ್ರೆಸ್ ಪಕ್ಷವು ಕೇವಲ 45 ಸ್ಥಾನ ಗಳಿಸುವುದರಿಂದ ದಾವಣ ಗೆರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸಂಸದರನ್ನಾಗಿ ಆಯ್ಕೆ ಮಾಡಿದರೆ ಕೊನೆಯ ಭಾಗದಲ್ಲಿ ಕುಳಿತುಕೊಂಡು ಧ್ವನಿ ಎತ್ತಲು ಆಗದಂತಹ ಪರಿಸ್ಥಿತಿ ಬರುವುದಲ್ಲದೇ, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ. ಕಾರಣ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಜಿ.ಎಂ.ಸಿದ್ದೇಶ್ವರ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆದ್ದರೆ ದಾವಣಗೆರೆ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಎನ್.ಡಿ.ಎ ಅಭ್ಯರ್ಥಿ ಗಾಯತ್ರಿ ಜಿ.ಎಂ. ಸಿದ್ದೇಶ್ವರ ಅವರ ಪರವಾಗಿ ಇಂದು ನಡೆದ ಬೃಹತ್ ರೋಡ್ ಶೋ ಮೂಲಕ ಮತಯಾಚನೆ ಮಾಡಿ, ನಂತರ ಅವರು ಮಾತನಾಡಿದರು.

ಲೋಕಸಭಾ ಚುನಾವಣೆ ಜಿ.ಪಂ, ತಾ.ಪಂ ಚು ನಾವಣೆ ಎಂಬ ರೀತಿಯ ಚುನಾವಣೆ ಎಂದು ಭಾವಿಸಿ ಕೊಳ್ಳದೇ,  ದೇಶವನ್ನು ಸುಭದ್ರವಾಗಿ ಕಟ್ಟುವ ಹಾಗೂ
ದೇಶದ ಭವಿಷ್ಯ ರೂಪಿಸುವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ, ಸುರಕ್ಷತೆ ಯ ದೃಷ್ಟಿಯಿಂದ ನಡೆಯುವಂ ತಹ ಚುನಾವಣೆಯಾಗಿದೆ ಎಂದು ಭಾವಿಸಿ ಕೊಂಡು, ನರೇಂದ್ರ ಮೋದಿಯವ ರನ್ನು ಮತ್ತೊಮ್ಮೆ ಪ್ರಧಾನಿ ಯನ್ನಾಗಿ ಮಾಡುವ ದೃಷ್ಟಿಯಿಂದ ದಾವಣಗೆರೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಜೆಡಿಸ್ ಮತ್ತು ಬಿಜೆಪಿ ಒಟ್ಟಾಗಿದ್ದ ರಿಂದ ಕಾಂಗ್ರೆಸ್ ಪಕ್ಷವು ಆತಂಕಕ್ಕೆ ಒಳಗಾಗಿದೆ. ಇದರಿಂದ ವಿಚಲಿತರಾಗಿ ಅವರಿಗೆ ಸೋಲಿನ ಭೀತಿ ಆವರಿಸಿದೆ. ಕೇಂದ್ರದಲ್ಲಿ 10 ವರ್ಷಗಳ ಕಾಲ ಆಡಳಿತ ಮಾಡಿದ ಬಿಜೆಪಿ ಸರ್ಕಾರ ಯಾವುದೇ ರೀತಿಯ ಭ್ರಷ್ಟಾಚಾರ ಮಾಡದೇ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ ಜನಪರವಾದ ಆಡಳಿತ ಕೊಟ್ಟಿದೆ ಎಂದು ಹೇಳಿದರು.

ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮಾತನಾಡಿ, ಹರಿಹರ ಕ್ಷೇತ್ರದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ಮಲತಾಯಿ ಧೋರಣೆ ಮಾಡುತ್ತಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ.   ಕಾಂಗ್ರೆಸ್‌ನ ಸ್ಥಳೀಯ ನಾಯಕರಿಗೆ ಚುನಾವಣೆ ಬಂದಾಗ ಬೈರನಪಾದ, ಅಗಸನಕಟ್ಟಿ ನೆನಪಾಗುತ್ತದೆ ಮತ್ತು ಮೆಡಿಕಲ್ ಕಾಲೇಜು, ಕೈಗಾರಿಕಾ ಕಾರಿಡರ್, ಮಾಡುವುದಾಗಿ ಹೇಳಿ ಜನರನ್ನು ಮರಳು ಮಾಡಿದ್ದಾರೆ ಎಂದು ಕಿಡಿ ಕಾರಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಹಿಂದೆ  ಹೆಚ್.ಶಿವಪ್ಪನವರೊಂದಿಗೆ ರೋಡ್ ಶೋ ಮಾಡಿದ್ದು ಬಿಟ್ಟರೆ, ಇದುವರೆಗೂ ನಾವು ಜೆಡಿಎಸ್‌ನ  ಶಿವಶಂಕರ್ ಜೊತೆಗೆ ಯಾವುದೇ ರೀತಿಯ ರೋಡ್ ಶೋ ಮಾಡಿರಲಿಲ್ಲ. ಆದರೆ, ಈಗ ಮತ್ತೊಮ್ಮೆ ಆ ಅವಕಾಶ ಬಂದಿದ್ದು, ಕ್ಷೇತ್ರದಲ್ಲಿ ಎರಡು ಪಕ್ಷವು ಜೊತೆಯಲ್ಲಿ ಕೆಲಸವನ್ನು ಮಾಡುತ್ತಿರುವುದರಿಂದ ಮತದಾರರಿಗೆ ಹುರುಪು ಹೆಚ್ಚಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಶ್ವಿನಿ ಜಿ.ಎಂ.ಸಿದ್ದೇಶ್ವರ, ಜಿಲ್ಲಾ ಬಿಜೆಪಿ ಸಂಚಾಲಕ ಹನಗವಾಡಿ ಎಸ್.ಎಂ. ವೀರೇಶ್, ಜಿಲ್ಲಾ ಜೆಡಿಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ತಾಲ್ಲೂಕು ಅಧ್ಯಕ್ಷ ಪರಮೇಶ್ವರಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಕಾರ್ಯದರ್ಶಿ ಅಣ್ಣಪ್ಪ ಐರಣಿ, ತಾಲ್ಲೂಕು ಅಧ್ಯಕ್ಷ ಲಿಂಗರಾಜ್, ನಗರ ಅಧ್ಯಕ್ಷ ಅಜಿತ್ ಸಾವಂತ್, ನಗರಸಭೆ ಸದಸ್ಯರಾದ ಗುತ್ತೂರು ಜಂಬಣ್ಣ, ಅಶ್ವಿನಿ ಕೃಷ್ಣ, ಹನುಮಂತಪ್ಪ, ಪಿ.ಎನ್.ವಿರೂಪಾಕ್ಷಪ್ಪ, ದಿನೇಶ್ ಬಾಬು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರಾದ ಎನ್.ಜಿ. ನಾಗನಗೌಡ್ರು, ಪೂಜಾರ್ ಚಂದ್ರಶೇಖರ್, ಹಲಸಬಾಳು ಶಿವಾನಂದಪ್ಪ, ಬೆಳ್ಳೂಡಿ ರಾಮಚಂದ್ರಪ್ಪ, ದೀಟೂರು ಶೇಖರಪ್ಪ, ಅಡಕಿ ಕುಮಾರ್, ಹೆಚ್.ಮಂಜನಾಯ್ಕ್, ತುಳಜಪ್ಪ ಭೂತೆ, ರಾಜು ರೋಖಡೆ, ಸುನಿಲ್, ಮಾರುತಿ ಶೆಟ್ಟಿ, ಅಮರಾವತಿ ನಾಗರಾಜ್, ಗಂಗನಹರಸಿ ಅಬ್ಲೂರಪ್ಪ, ಉಮೇಶ್, ದಿಟೂರು ವಾಮದೇವ್, ಗಿರೀಶ್ ಗೌಡ, ಮುದ್ದೇರ್ ಹನುಮಂತಪ್ಪ, ಕಾಳೇರ್ ಮಂಜುನಾಥ್, ಕಲ್ಕಯ್ಯ, ಲತಾ ಕೊಟ್ರೇಶ್, ಮಮತಾ ಬೆಲ್ಲದ, ರೂಪಾ ಕಾಟ್ವೆ, ಲಕ್ಷ್ಮೀ ರಾಜಾಚಾರ್, ಸುನಂದಾ, ರಾಗಿಣಿ, ಮಮತಾ, ರೂಪಾ ಶಶಿಕಾಂತ್, ಸಾಕ್ಷಿ ಶಿಂದೆ, ಅಂಬುಜಾ ಪಿ.ರಾಜೋಳ್ಳಿ, ಮಲೇಬೆನ್ನೂರು ವಿಜಯಕುಮಾರ್, ದೇವೇಂದ್ರಪ್ಪ, ಪೂಜಾರ್ ಈರಣ್ಣ, ರೇವಣಸಿದ್ದಪ್ಪ, ಯೋಗೀಶ್ ಅಮರಾವತಿ, ಪ್ರಶಾಂತ್, ರಶ್ಮಿ ಮೆಹರ್ವಾಡೆ, ಸುಧಾ ಸೋಳಂಕಿ, ಶಿವಪ್ರಕಾಶ್ ಶಾಸ್ತ್ರಿ ಇತರರು ಹಾಜರಿದ್ದರು.

error: Content is protected !!