ಒಂದೇ ಬೆಳೆ ಬೆಳೆಯುವ ಬದಲಿಗೆ ಅಂತರ ಬೆಳೆಯಾಗಿ ತೊಗರಿ ಬಿತ್ತನೆಯಲ್ಲಿ ಹೆಚ್ಚಿನ ಆದಾಯ ಗಳಿಸಬಹುದು

ಜಗಳೂರಿನ ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ಕೃಷಿನಿರ್ದೇಶಕ ಆರ್. ತಿಪ್ಪೇಸ್ವಾಮಿ

ಜಗಳೂರು, ಮೇ 30- ರೈತರು ಒಂದೇ ಬೆಳೆ ಬೆಳೆಯುವ ಬದಲಿಗೆ ಅಂತರ ಬೆಳೆಯಾಗಿ ತೊಗರಿ ಬಿತ್ತನೆ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು ಎಂದು ಜಿಲ್ಲಾ ಉಪ ಕೃಷಿನಿರ್ದೇಶಕ ಆರ್. ತಿಪ್ಪೇಸ್ವಾಮಿ ತಿಳಿಸಿದರು.

ಬಿಸ್ತುವಳ್ಳಿ ಹಾಗೂ ಮಲೆ ಮಾಚಿಕೆರೆ ಗ್ರಾಮಕ್ಕೆ ಭೇಟಿ ನೀಡಿದ ಅವರು, ಪೂರ್ವ ಮುಂಗಾರಿನಲ್ಲಿ ಚನ್ನಾಗಿ ಮಳೆಯಾಗಿರುವುದರಿಂದ  ರೈತರಿಗೆ ಬಿತ್ತನೆ ಮಾಡುವ ಕುರಿತು ತೊಗರಿ ಅಂತರ ಬೆಳೆಯಾಗಿ 8:1 ಬೆಳೆಯುವುದು, ಔಡಲ ಬೆಳೆ ಬಾರ್ಡರ್‌ ರೋ ಆಗಿ ಹಾಕುವುದು, ರಸಗೊಬ್ಬರ ಬಳಕೆ, ಕೀಟ ಮತ್ತು ರೋಗ ಹತೋಟಿಯನ್ನು ಮಾಡುವ ಮಾಹಿತಿಯನ್ನು ನೀಡಿದರು. 

ಜಿಲ್ಲೆಯಲ್ಲಿ ತೊಗರಿ ಬೆಳೆ ಬಿತ್ತನೆ ಪ್ರದೇಶದ ವಿಸ್ತರಣೆ ಮಾಡಲು ನಿರ್ಧರಿಸಲಾಗಿದ್ದು, ತೊಗರಿ ಬೆಳೆಯುವ ರೈತರಿಗೆ ಕೃಷಿ ಇಲಾಖೆ ಹಂತ ಹಂತವಾಗಿ ತಜ್ಞರನ್ನು ಗ್ರಾಮಗಳಿಗೆ ಕರೆತಂದು ಕ್ಷೇತ್ರ ಭೇಟಿ ಮಾಡಿಸಿ ರೈತರಿಗೆ ಮಾರ್ಗದರ್ಶನ ನೀಡಲಾ ಗುವುದು ಎಂದರು.  ನಂತರ ಬಿಳಿ ಚೋಡು ಪರಿಕರ ಮಾರಾಟ ಮಳಿಗೆ ಗಳಿಗೆ ಭೇಟಿ ನೀಡಿ  ಗುಣಮಟ್ಟ ಖಾತರಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲು ಬಿತ್ತನೆ ಬೀಜ, ರಸಗೊ ಬ್ಬರ ವಿತರಣೆ ಕುರಿತು ಪರಿಶೀಲಿಸಿ, ಬೀಜ ಮತ್ತು ರಸಗೊಬ್ಬರ ಮಾದರಿ ಗಳನ್ನು ಶೇಖರಣೆ ಮಾಡಿದರು.

ಈ ಸಂದರ್ಭದಲ್ಲಿ ಸಹಾಯ ನಿರ್ದೇಶಕ ಶ್ರೀನಿವಾಸುಲು, ಹರ್ಷ, ಕಸಬಾ ಕೃಷಿ ಅಧಿಕಾರಿ ಗಳು, ರೇಣುಕುಮಾರ್ ಬಿಟಿಎಂ ಉಪಸ್ಥಿತರಿದ್ದರು.

error: Content is protected !!