ಅಭಿಮಾನ ಶೂನ್ಯತೆಯಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ

ಹರಿಹರ, ಫೆ.21- ಅಭಿಮಾನ ಶೂನ್ಯತೆಯಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹಾಗೂ ರಾಜ್ಯ ಸ್ಕೌಟ್ ಅಂಡ್ ಗೈಡ್ಸ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಬೇಸರ ವ್ಯಕ್ತಪಡಿಸಿದರು.

ನಗರದ ಜೀಜಾಮಾತಾ ಕಾಲೋನಿಯಲ್ಲಿ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಾಗೂ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜರ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿ  ಯಾಗಿ ಭಾಗವಹಿಸಿ ಅವರು ಮಾತನಾಡಿದರು. 

ನಮ್ಮ ಶ್ರೀಮಠದ ಸ್ವಾಮೀಜಿಯವರು ಭಗವದ್ಗೀತೆಯನ್ನು ಹಲವಾರು ರಾಗಗಳ ಮೂಲಕ ಹಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಪಡೆದವರು ಎಂದು ಹೇಳಿದರು.  ನಮ್ಮ ಶ್ರೀಮಠಕ್ಕೆ ಬಹಳ ದೊಡ್ಡ ಇತಿಹಾಸವಿದೆ. ಆದ್ದರಿಂದ ಸಮಾಜದ ಬಂಧುಗಳು ಈ ಮಠಕ್ಕೆ ಭೇಟಿ  ನೀಡಲಿ ಎಂದು ಸಮಾಜದವರಿಗೆ ಕರೆ ನೀಡಿದರು.

60 ವರ್ಷಗಳ ಹಿಂದೆ ಲವಂಗ ಶ್ರೀಗಳ ಕೀರ್ತನೆಗಳನ್ನು ಕೇಳಲು ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದರು. ಪ್ರತಿ ಮನೆಯಲ್ಲಿ ಶಿವಾಜಿ ಪುಸ್ತಕವನ್ನು ಇಟ್ಟು ಕೊಳ್ಳಬೇಕೆಂದು ಸಲಹೆ ನೀಡಿದರು. ಇದರಿಂದ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ಸಿಗುತ್ತದೆ ಎಂದು ತಿಳಿಸಿದರು. ಶ್ರೀಮಠವನ್ನು ನಾವೆಲ್ಲರೂ ಗೌರವ, ಅಭಿಮಾನದಿಂದ ಕಾಣಬೇಕು. ನೀವು ಮರಾಠ ಅಂತ ಹೇಳಿಕೊಳ್ಳಲು ಅಭಿಮಾನವಿರಬೇಕು ಎಂದು ಹೇಳಿದರು.

ಶಾಸಕ ಎಸ್. ರಾಮಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಮರಾಠ ಸಮಾಜವು ಸಣ್ಣ ಸಮಾಜ. ಈ ಸಮಾಜವು ಒಗ್ಗಟ್ಟಿನಿಂದ,  ಪ್ರೀತಿ-ವಿಶ್ವಾಸದಿಂದ ಇರಬೇಕು ಎಂದು ತಿಳಿಸಿದರು. ಸಮಾಜಕ್ಕೆ ನನ್ನ ಅನುದಾನದಲ್ಲಿ ನಾನು ಈ ಬಾರಿ ಹಣವನ್ನು ಹಾಕಿ ಕೊಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ 27 ಮಳಿಗೆ ಗಳನ್ನು ಸಮಾಜದ ಶ್ರೀಗಳು ಉದ್ಘಾಟಿಸಿದರು.

ಸಮಾರಂಭದ ಸಾನ್ನಿಧ್ಯವನ್ನು ಜಗದ್ಗುರು ವೇದಾಂತಚಾರ್ಯ ಶ್ರೀ ಮಂಜುನಾಥ ಸ್ವಾಮೀಜಿ ಗೋಸಾಯಿ ಮಹಾಸಂಸ್ಥಾನ ಭವಾನಿ ಪೀಠ, ಗವಿಪುರಂ (ಬೆಂಗಳೂರು) ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ ಇಂದ್ರಾಣಿ, ಸ್ವಾಗತವನ್ನು  ಟೇಕೋಜಿರಾವ್ ಮಾಡಿದರು. ಅಧ್ಯಕ್ಷೀಯ ನುಡಿಗಳನ್ನು ಸಮಾಜದ ಅಧ್ಯಕ್ಷ ಮರಿಯೋಜಿರಾವ್ ನಡೆಸಿಕೊಟ್ಟರು. 

ವೇದಿಕೆಯಲ್ಲಿ ಶಾಸಕರಾದ ಅರವಿಂದ ಜಾಧವ್, ಶ್ರೀನಿವಾಸ್ ಮಾನೆ, ಸುರೇಶ್ ರಾವ್ ಸಾಟೆ, ಕಾಡೋಜಿರಾವ್ ಸಾಟೆ, ಡಾ. ಜೀಯೋಜಿ ರಾವ್, ಯಶವಂತರಾವ್ ಜಾಧವ್, ಮಾಲತೇಶ್‌, ಆಶಾ ಮರಿಯೋಜಿ ರಾವ್, ವೀಣಾ, ಕಮಲಾಕ್ಷಿ, ನಂದಿಗಾವಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!