ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನದಿಗೆ ಬ್ಯಾರೇಜ್

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನದಿಗೆ ಬ್ಯಾರೇಜ್

ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಡಾ. ಪ್ರಭಾ ಭರವಸೆ

 ಹೊನ್ನಾಳಿ, ಏ.11- ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಿಸುವ ಮೂಲಕ ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ   ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ  ಗ್ರಾಮಗಳಲ್ಲಿ  ಇಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜತೆಗೂಡಿ ಸುಡುವ ಬಿಸಿಲಿ ನಲ್ಲಿಯೂ ಚುನಾವಣಾ ಪ್ರಚಾರ ನಡೆಸಿದರು.

ಮುಕ್ತೇನಹಳ್ಳಿ, ಬನ್ನಿಕೋಡು, ಕೂಲಂಬಿ, ಕುಂಬಳೂರು, ಕುಂದೂರು, ತಿಮ್ಮಲಾಪುರ, ತರಗನಹಳ್ಳಿ, ಗಂಟ್ಯಾಪುರ, ಕಮ್ಮಾರಗಟ್ಟೆ, ತಕ್ಕನಹಳ್ಳಿ, ಮಾಸಡಿ, ಅರಕೆರೆ, ಕೋಣನತಲೆ, ಹಿರೇಗೋಣಿಗೆರೆ, ಬೇಲಿಮಲ್ಲೂರು, ಗೊಲ್ಲರಹಳ್ಳಿ, ಬಿದರಗಡ್ಡೆ, ಟಿ.ಬಿ.ಸರ್ಕಲ್, ಹರಳಹಳ್ಳಿ, ಗೋವಿನಕೋವಿ ಗ್ರಾಮಗಳಲ್ಲಿ  ಪ್ರಚಾರ ಸಭೆ ನಡೆಸಿ, ಗ್ರಾಮಸ್ಥರನ್ನುದ್ದೇಶಿಸಿ  ಡಾ. ಪ್ರಭಾ ಅವರು ಮಾತನಾಡಿದರು.

 ಈ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಬವಣೆ ತೀವ್ರವಾಗಿ ಕಂಡು ಬಂದಿದ್ದು, ಇದನ್ನು ಹೋಗಲಾಡಿಸಲು ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಿಸುವ ತುರ್ತು  ಅವಶ್ಯಕತೆ ಇದೆ.  ಈ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ತಮಗೆ ಚುನಾಯಿಸಿದರೆ, ಕೇಂದ್ರ ಸರ್ಕಾರದಿಂದ  ವಿಶೇಷ ಅನುದಾನ ತಂದು ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ನೀರು ಮತ್ತು  ರಸ್ತೆ ಸಂಪರ್ಕ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಜಾತಿ, ಧರ್ಮಕ್ಕೆ ಸೀಮಿತಗೊಳಿಸದೇ ಉಪಯುಕ್ತ ಯೋಜನೆ ಗಳನ್ನು ಜಾರಿಗೆ ತಂದಿದ್ದು, ಶಕ್ತಿ ಯೋಜನೆ ಮೂಲಕ ಮಹಿಳೆಯರು ಈ ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲು ಅನುಕೂಲವಾಗಿದೆ ಎಂದು ತಿಳಿಸಿದರು.

ಶಾಸಕ  ಡಿ.ಜಿ.ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತ ನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದು, ಜಿಲ್ಲೆಯಲ್ಲಿ ಮತ್ತು ಹೊನ್ನಾಳಿ ತಾಲ್ಲೂಕಿನಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಗೊಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ನಾಗಪ್ಪ,  ಮುಖಂಡರಾದ ಡಿ.ಜಿ ವಿಶ್ವನಾಥ್,  ಸಿದ್ದಪ್ಪ, ಉಮಾಪತಿ, ಕೆಂಗಲಹಳ್ಳಿ ಷಣ್ಮುಖಪ್ಪ  ಮತ್ತಿತರರು  ಉಪಸ್ಥಿತರಿದ್ದರು.

error: Content is protected !!