ನಗರದ ಕವಯತ್ರಿ ಸೌಮ್ಯ ದಯಾನಂದ ಅವರ `ಸಂಜೆ ಐದರ ಸಂತೆ’ ಕೃತಿ ಬಿಡುಗಡೆ

ನಗರದ ಕವಯತ್ರಿ ಸೌಮ್ಯ ದಯಾನಂದ ಅವರ `ಸಂಜೆ ಐದರ ಸಂತೆ’ ಕೃತಿ ಬಿಡುಗಡೆ

ದಾವಣಗೆರೆ, ಫೆ. 9 – ಸ್ಥಳೀಯ ಉದಯೋ ನ್ಮುಖ ಕವಯತ್ರಿ ಸೌಮ್ಯ ದಯಾನಂದ ಅವರು ರಚಿ ಸಿರುವ ‘ಸಂಜೆ ಐದರ ಸಂತೆ’ ಕವನ ಸಂಕಲನವನ್ನು ಇತ್ತೀಚಿಗೆ ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಬಿಡುಗಡೆ ಮಾಡಿದರು.

ಬೆಂಗಳೂರಿನ ಸನ್ ಸ್ಟಾರ್ ಪಬ್ಲಿಷರ್ ಸಂಸ್ಥೆ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸೌಮ್ಯ ದಯಾನಂದ ಅವರ ಕವನ ಸಂಕಲನ ಬಿಡುಗಡೆ ಮಾಡಿದ ಜಗದ್ಗುರುಗಳು ಮಾತನಾಡಿ, ಕೃತಿಯ ಕುರಿತಂತೆ ಸಂಕಲನದಲ್ಲಿನ ‘ಮೌನ’ ಎಂಬ ಕವಿತೆಯ ಸಾಲುಗಳನ್ನು ಪ್ರಸ್ತಾಪಿಸಿ, ಮೌನದ ಮೌಲ್ಯದ ಬಗ್ಗೆ ವಿವರಿಸಿದರು. ಈ ಹೊತ್ತಿನ ಮಾತಿನ ದುಂದುಗಾರಿಕೆ ಮತ್ತು ಮೌನದ ಅಗತ್ಯತೆಯ ಬಗ್ಗೆ ತಿಳಿಸಿದ ಅವರು, ಒಬ್ಬ ವ್ಯಕ್ತಿಗೆ ತನಗೆ ತಾನು ಸಿಗುವುದು ಮೌನದಲ್ಲಿಯೇ ಎಂಬುದನ್ನು ಉದಾಹರಿಸಿದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಸಾರ್ವಜ ನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ, ಸನ್ ಸ್ಟಾರ್ ಪಬ್ಲಿಷರ್ ಸಂಸ್ಥೆ ನಿರ್ದೇಶಕ ಡಿ. ಎನ್. ಶೇಖರ್ ರೆಡ್ಡಿ, ಖ್ಯಾತ ಸಾಹಿತಿ ಡಾ. ಸಿ. ಎನ್. ರಾಮಚಂದ್ರನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ರಾಜಕುಮಾರ್, ಖ್ಯಾತ ಲೇಖಕರಾದ ಷಡಕ್ಷರಿ, ಶ್ರೀಮತಿ ಪ್ರಮೀಳಮ್ಮ, ಖ್ಯಾತ ಲೇಖಕ ಶೆಣೈ, ಸಂಸ್ಕೃತ ವಿದ್ವಾಂಸ ಸತೀಶ್ ಹೆಗ್ಗಡೆ, ಮತ್ತು ಕವಯತ್ರಿ ಸೌಮ್ಯ ಮತ್ತು ಎಲ್. ದಯಾನಂದ ಉಪಸ್ಥಿತರಿದ್ದರು.

ದಾವಣಗೆರೆ ನಗರದಲ್ಲಿ ವಾಸವಾಗಿರುವ, ಪ್ರಸ್ತುತ ಜಗಳೂರು ತಾಲ್ಲೂಕು ದಿದ್ದಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿರುವ ಸೌಮ್ಯ ಅವರು ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೂವಿನ ಹೊಳೆ ಗ್ರಾಮದವರು. ಇವರ ಹಲವಾರು ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕವಿತೆಯ ಜೊತೆಗೆ ಪುಟ್ಟ ಕಥೆಗಳನ್ನು ಬರೆಯುತ್ತಾ ಬಂದಿರುವ ಸೌಮ್ಯ ಅವರಿಗೆ ಕವಿತೆ ಬರೆಯುವುದು ಇಷ್ಟದ ಪ್ರಕಾರ. ‘ಸಂಜೆ ಐದರ ಸಂತೆ’ ಇವರ ಪ್ರಥಮ ಸಂಕಲನವಾಗಿದೆ.

ಸೌಮ್ಯ ಅವರ ಪತಿ ಎಲ್. ದಯಾನಂದ ವಕೀಲರಾಗಿದ್ದಾರೆ. ಪತಿ, ಗೆಳೆಯರು ಮತ್ತು ಸಹೋದ್ಯೋಗಿಗಳ ಸಹಕಾರವನ್ನು ಸ್ಮರಿಸುವ ಸೌಮ್ಯ ಅವರು ‘ಮಾಸ್ತಿಯವರ ಸಣ್ಣಕಥೆಗಳಲ್ಲಿ ಸ್ತ್ರೀ ಸಂವೇದನೆ’ ವಿಷಯ ಕುರಿತು  ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ ಪದವಿ ಪಡೆಯಲು ಸಿದ್ಧತೆ ನಡೆಸಿದ್ದಾರೆ.

‘ಸಂಜೆ ಐದರ ಸಂತೆ’ ಕವನ ಸಂಕಲನದ ಕವಿತೆಗಳ ಓದು ಮತ್ತು ವಿಮರ್ಶೆಯು ಕೂಡ ದಾವಣಗೆರೆ ವಿಶ್ವವಿದ್ಯಾನಿಲಯದ ಡಾ. ಎಂ. ಚಿದಾನಂದಮೂರ್ತಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ವಿಭಾಗದಿಂದ ಇತ್ತೀಚೆಗಷ್ಟೇ ನಡೆಯಿತು.  ವಿಭಾಗದ ಅಧ್ಯಕ್ಷರಾದ ಡಾ. ಜಯರಾಮಯ್ಯ ವಿ., ಮಾರ್ಗದರ್ಶಕರಾದ ಡಾ. ಮಲ್ಲಿಕಾರ್ಜುನ ಕೆ., ಡಾ. ಮಹಾಂತೇಶ ಪಾಟೀಲ ಮೊದಲಾದ ಎಲ್ಲಾ ಪ್ರಾಧ್ಯಾಪಕರ ಸಮ್ಮುಖದಲ್ಲಿ ನಡೆದ ಈ ಚರ್ಚೆಯಲ್ಲಿ ಕವಯತ್ರಿಯ ಕವನಗಳು ಹೇಗೆ ಹೊಸ ಕಾಲಕ್ಕೆ ಮುಖಾಮುಖಿಯಾಗಿವೆ ಎಂಬುದರ ಬಗ್ಗೆಯೂ ವಿಶ್ಲೇಷಿಸಲಾಯಿತು.

error: Content is protected !!