ಇದು ಚರಿತ್ರೆ ಸೃಷ್ಟಿಸೊ ಅವತಾರ….

‘ಕ’ ರೋನ. ಕರೋನ.. ಕರೋನ…

ಎಲ್ಲಿ ನೋಡಿದರು ಕರೋನ, ವಾಟ್ಸಾಪ್, ಫೇಸ್ಬುಕ್, ಟ್ವಿಟರ್, ಟಿಕ್ ಟಾಕ್ ಎಲ್ಲಾ ಕಡೆನು ಈ ಕರೋನದ್ದೇ ಕಾರುಬಾರು, ಕಾಲರ, ಪ್ಲೇಗ್, ಏಡ್ಸ್  ಇತ್ಯಾದಿ ಇವೆ ಭಯಾನಕ, ಹಾಗು ಮಾರಣಾಂತಿಕ ಖಾಯಿಲೆಗಳೆಂದು ಇದುವರೆಗು ಭಾವಿಸಿದ್ದೆವು, ಅದರೆ ಇವೆಲ್ಲವನ್ನೂ ಮೀರಿ ಈ `ಕರೋನ ವೈರಸ್’ ಎಂಬುದು ಮಾನವನ ಜೀವದೊಡನೆ ಆಟವಾಡಲು ರಾಕ್ಷಸನಂತೆ ಉದ್ಭವಿಸಿದೆ.

ಚೀನಾ, ಇಟಲಿಯಲ್ಲಿ ಕಾಣಿಸಿಕೊಂಡ ಈ ವೈರಸ್ ಈಗ ಭಾರತಕ್ಕೂ ಬರಸಿಡಿಲು ಬಡಿದಂತೆ ಬಂದಿದೆ, ಇಲ್ಲಿ ಅಷ್ಟಾಗಿ ಸೋಂಕಿತರಿಲ್ಲದಿದ್ದರೂ ಮುಂಜಾಗ್ರತಾ ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಂಡು ರೈಲ್ವೆ ಸೇವೆ, ಸಾರಿಗೆ ವ್ಯವಸ್ಥೆಯನ್ನು ಕೂಡ ಸ್ಥಗಿತಗೊಳಿಸಿ, ಎಲ್ಲಾ ಅಂಗಡಿ-ಮಹಲ್‌ಗಳನ್ನು ಮುಚ್ಚಿಸಿ ಸೋಂಕು ನಿಯಂತ್ರಿಸುವ ಸಲುವಾಗಿ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಮಾಡುತಾ ಶಕ್ತಿ ಮೀರಿ ಶ್ರಮಿಸುತ್ತಿದೆ.

ಹಾಗು ನಮ್ಮ ವೈದ್ಯರು, ಪೊಲೀಸರ ಸೇವೆಯಂತು ಹೇಳ ತೀರದು ಹಗಲಿರುಳು ರೋಗಿಗಳ, ಸಾರ್ವಜನಿಕರ ಸೇವೆಯಲ್ಲಿರುತ್ತಾರೆ ಅವರಿಗೆ ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರು ಕಡಿಮೆಯೆ, ಬರಿ ವೈದ್ಯರಷ್ಟೇ ಅಲ್ಲ ವೈದ್ಯಕೀಯ ಸಿಬ್ಬಂದಿ ಕೂಡ ಕಾಳಜಿ ವಹಿಸುತ್ತದೆ.

ಯಾಕಂದ್ರೆ ಒಬ್ಬ ರೋಗಿಯ ಬಳಿ ಜಾಸ್ತಿ ಸಂಪರ್ಕದಲ್ಲಿ ಇರೋದು ನರ್ಸ್ ಮತ್ತು ಆಯಾ ಇವರಿಬ್ಬರ ಜವಾಬ್ದಾರಿ ಬಹಳ ದೊಡ್ಡದಿರುತ್ತದೆ, ಜೊತೆಗೆ ಲ್ಯಾಬ್ ಟೆಕ್ನೀಷಿಯನ್‌ಗಳೂ ಕೂಡ ರಕ್ತ, ಮತ್ತು ಗಂಟಲಿನ ದ್ರವವನ್ನು ಅತ್ಯಂತ ಎಚ್ಚರಿಕೆಯಿಂದ ಕ್ರಮವಾಗಿ  ಪರೀಕ್ಷಿಸಿ ರಿಪೋರ್ಟ್ ನೀಡಬೇಕಾಗುತ್ತದೆ, ಪೋಲೀಸರು ಕೂಡ ತಮ್ಮ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರತರಾಗಿ ಹೆಣಗಾಡುತ್ತಿದ್ದಾರೆ. ನಿಮಗಿದೊ ಕೋಟಿ ವಂದನೆಗಳು.

ಅದರೆ ನಮ್ಮ ಪೋಲಿಸ್ ಅಧಿಕಾರಿಗಳಿಗೊಂದು ಚಿಕ್ಕ ಮನವಿ ಸಾರ್ವಜನಿಕರಿಗೆ ಹಿಂದು ಮುಂದು ವಿಚಾರಿಸದೆ ಥಳಿಸಬೇಡಿ, ಅ ಕರೋನಕ್ಕಿಂತ ಘೋರವಾದ ನೋವು ನೀವು ಕೊಡಬೇಡಿ.

ಈ ನಮ್ಮ ಜನರಂತು ಮನೆಯಲ್ಲಿಯೆ ಇರಿ ಅಂದರು ಕೇಳದೆ ಹೊರಗೆ ಬಂದು ಪೋಲೀಸರ ಲಾಟಿ ಏಟಿನ ರುಚಿ ನೋಡುತ್ತಾರೆ, ವಾಟ್ಸಾಪ್, ಟಿಕ್ ಟಾಕ್‌ಗಳಲ್ಲಿ ಆ ಹೊಡೆಯುವ ದೃಶ್ಯಗಳನ್ನು ನೋಡಿ ನೋಡಿ ಸಾಕಾಗಿದೆ, ಸ್ನೇಹಿತರೆ ದಯಮಾಡಿ ಬೇಕಾ ಬಿಟ್ಟಿ ತಿರುಗಾಡದೆ ಮನೆಯಲ್ಲಿದ್ದು ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ, ನಿಮ್ಮಲ್ಲಿ ನೀವು ಜಾಗೃತಿ ಮೂಡಿಸಿಕೊಳ್ಳಿ.

ನಾವು ದುಡಿಯುವುದು, ಶ್ರಮ ಪಡುವುದು ನಮಗಾಗಿ, ನಮ್ಮ ಸಂಸಾರಕ್ಕಾಗಿ ನಾವು ಬದುಕುವುದಕ್ಕಾಗಿ, ಆದರೆ ನಾವಿರುವ, ದುಡಿಯುತ್ತಿರುವ ಸ್ಥಳಗಳಿಂದಲೆ ನಮ್ಮ ನೆಮ್ಮದಿ, ಆರೋಗ್ಯಕ್ಕೆ ಚ್ಯುತಿ ಬಂದರೆ ಇನ್ನೂ ಬದುಕುವುದೇಗೆ? ಸಂಸಾರ ಸಲಹುದೇಗೆ? ಇನ್ನೂ ಒಳ್ಳೆಯ ಆರೋಗ್ಯ ಇಲ್ಲದೆ ಬರಿ ಹಣಗಳಿಸಿ ಫಲವೇನು?

ಜೊತೆಗೆ ಸ್ವಯಂ ಸೇವಕ ಸಂಘಟನೆಗಳು, ಹಾಲು ಮತ್ತು ತರಕಾರಿ ಸರಬರಾಜು ಮಾಡುವ ವಾಹನ ಚಾಲಕರು, ಹೋಂ ಗಾರ್ಡ್‌ಗಳು ಪಾಲಿಕೆಯ ಕಸ ಎತ್ಯೊಯ್ಯುವ ನೌಕರರು, ಸಿಲಿಂಡರ್ ವಿತರಕರು ಕೂಡ ತಮ್ಮ ಶ್ರಮವಹಿಸಿ ನಿತ್ಯ ದುಡಿಯುತ್ತಿದ್ದಾರೆ ಇವರೆಲ್ಲರಿಗೂ ಅಂನತಾನಂತ ಧನ್ಯವಾದಗಳು.

ಯಾವುದೇ ಬೆಳೆಗೆ ರೋಗ ತಗುಲಿದ ತಕ್ಷಣ ಗಮನಿಸಿ ಸೂಕ್ತ ಔಷಧ ಸಿಂಪಡಣೆ ಮಾಡಿದರೆ ರೋಗ ಹತೋಟಿಗೆ ಬರುತ್ತದೆ, ಇಲ್ಲವಾದರೆ ಮಡಿಯಿಂದ ಮಡಿಗೆ, ಬಳ್ಳಿಯಿಂದ ಬಳ್ಳಿಗೆ,  ಗಿಡದಿಂದ ಗಿಡಕ್ಕೆ ಉಲ್ಬಣಗೊಂಡು ಇಡೀ ಬೆಳೆಯೆ  ರೋಗಕ್ಕೆ ತುತ್ತಾಗುತ್ತದೆ, ಹಾಗೆ ಹಬ್ಬಲು ಬಿಡದೆ ಸುರಕ್ಷತೆಯ ಕ್ರಮಗಳನ್ನು ಪಾಲಿಸಿ ವೈರಸ್ ನಿಯಂತ್ರಣ ಮಾಡಲು ಮುಂದಾಗೋಣ, ಸಹಕರಿಸೋಣ.

ಪ್ರಸ್ತುತ ಮನೆಯಲ್ಲಿ ಇರುವುದರಿಂದ ಎಲ್ಲರಿಗೂ ದಿನ ನಿತ್ಯದ ಕೆಲಸಗಳಿಗೆ, ವ್ಯಾಪಾರ, ವಹಿವಾಟುಗಳಿಗೆ ಅಡಚಣೆ, ತೊಂದರೆಯಂತು ಆಗಿದೆ, ಆದರೂ ಸಹಿಸಿಕೊಳ್ಳಲೆ ಬೇಕು, ಇಲ್ಲವಾದರೆ ಅ ವೈರಸ್ ರಾ.. ರಾ… ಅನ್ನುವುದು, ಪಾಪ ಇನ್ನೂ ಕೆಲವರಿಗಂತು ಈ ಬಾರ್‌ಗಳು ಮುಚ್ಚಿ ತಲೆಯೆ ಓಡದಂತಾಗಿದೆ, ಇಷ್ಟೊತ್ತಿಗೆ ಅವರು ಈ ವೈರಸ್‌ಗಳು ಒಂದು ಮದ್ದನ್ನೆ ಕಂಡು ಹಿಡಿಯುತ್ತಿದ್ದರೇನೊ ಗೊತ್ತಿಲ್ಲ.

ಅಂತೂ ದಿನ ನಿತ್ಯ ಕುಡಿದು ಬಂದು ಕಾಟ ಕೊಡುತ್ತಿದ್ದ ತಮ್ಮ ಗಂಡಂದಿರನ್ನು ಸ್ವಲ್ಪ ದಿನಗಳವರೆಗಾದರು ಕುಡಿಯುವುದನ್ನು ಬಿಡಿಸಿ ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಚೆನ್ನಾಗಿರುವಂತೆ ಮಾಡಿದೆ ಈ ಕರೋನ ವೈರಸ್, ಕುಡುಕ ಗಂಡನ ರಂಪಾಟದಿಂದ ಬೇಸತ್ತ ಹೆಂಡತಿಯರಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದೆ, ಅವರು ಯಾವಾಗಲೂ ಹೀಗೆ ಕುಡಿಯದೆ ಇದ್ದರೆ ಬಾಳು ಏಷ್ಟೊಂದು ಚೆಂದ ಅಲ್ವಾ, ಅಂಗಡಿಗಳಲ್ಲಿ ಗುಟುಕಾ-ಸಿಗರೇಟ್ ಕೂಡ ದೊರೆಯುತ್ತಿಲ್ಲ ಈಗ ಗುಟುಕಾ ಪ್ರಿಯರು ತಾಂಬೂಲದತ್ತ ಬಾಯಿ ಮಾಡಿರಬಹುದು.

ಸೂಕ್ಷ್ಮತೆ ಶುಚಿತ್ವವನ್ನು ಕಲಿಸಿದೆ, ಮಾಂಸಹಾರಕ್ಕಾಗಿ ಬಲಿಯಾಗುತಿದ್ದ ಅದೆಷ್ಟೊ  ಜೀವಿಗಳು ಇಂದು ನಿರಾಳವಾಗಿ ಉಸಿರಾಡುತ್ತಿವೆ. ದೂರ ಎಲ್ಲೆಲ್ಲೂ ಇದ್ದವರನ್ನು ತಮ್ಮ ಮನೆಯವರೊಂದಿಗೆ ಒಂದು ಗೂಡಿಸಿದೆ ಈ ವೈರಸ್.

ಈ ಕರೋನ ಕೆಲವೇ ದಿನಗಳಲ್ಲಿ ಎಷ್ಟರ ಮಟ್ಟಿಗೆ ಭಯ ಹುಟ್ಟಿಸಿದೆ ಅಂದರೆ ಈ ಸೋಂಕಿನಿಂದಾಗಿ  ಸ್ವಾಭಾವಿಕವಾಗಿ ಕೆಮ್ಮಿದರು ಕೂಡ ಜನ ಅನುಮಾನಾಸ್ಪದವಾಗಿ ನಮ್ಮನ್ನು ನೋಡುವ ಹಾಗೆ ದಿಗಿಲೆಬ್ಬಿಸಿದೆ.

ಓದಿ ವಿದೇಶದಲ್ಲಿದ್ದವರು ಕೂಡ ಈಗ ತಾಯ್ನಾಡಿಗೆ ಮುಖ ಮಾಡಿದ್ದಾರೆ, ವಿಪರ್ಯಾಸ ನೋಡಿ ಮನೆಯಲ್ಲಿ ಹಿರಿಯರು, ತಂದೆ ತಾಯಿಯರು, ಸಂಬಂಧಿಕರು ಕಷ್ಟದಲ್ಲಿದ್ದಾಗ, ಸತ್ತಾಗ ಬರಲಾಗದವರು ಈಗ ತಾವು ಸಾಯುತ್ತೇವೆಂದು ಪ್ರಾಣ ಉಳಿಸಿಕೊಳ್ಳಲು ತಮ್ಮ ಹುಟ್ಟೂರಿಗೆ, ಮನೆಗೆ ಸೇರುತಿದ್ದಾರೆ.

ನಾವು ದುಡಿಯುವುದು, ಶ್ರಮ ಪಡುವುದು ನಮಗಾಗಿ, ನಮ್ಮ ಸಂಸಾರಕ್ಕಾಗಿ ನಾವು ಬದುಕುವುದಕ್ಕಾಗಿ, ಆದರೆ ನಾವಿರುವ, ದುಡಿಯುತ್ತಿರುವ ಸ್ಥಳಗಳಿಂದಲೆ ನಮ್ಮ ನೆಮ್ಮದಿ, ಆರೋಗ್ಯಕ್ಕೆ ಚ್ಯುತಿ ಬಂದರೆ ಇನ್ನೂ ಬದುಕುವುದೇಗೆ? ಸಂಸಾರ ಸಲಹುದೇಗೆ? ಇನ್ನೂ ಒಳ್ಳೆಯ ಆರೋಗ್ಯ ಇಲ್ಲದೆ ಬರಿ ಹಣಗಳಿಸಿ ಫಲವೇನು?

ಕನ್ನಡಿಗರಾದ ಏಷ್ಟೊ ಶ್ರೀಮಂತರು ವಿದೇಶದಲ್ಲಿ ನೆಲಿಸಿದ್ದಾರೆ. ಪ್ರಪಂಚ ಈಗ ಹೇಗಾಗಿದೆ ವಿದೇಶದ ವ್ಯಾಮೋಹ ಎಷ್ಟಿದೆ ಅಂದರೆ ಹುಡುಗ ಓದಿ ವಿದೇಶದಲ್ಲಿದ್ದಾನೆ ಅಂದರೆ ಸಾಕು ಹೆಣ್ಣು ಕೊಡುವವರು ಮುಂದೆ ಬಿದ್ದು ಬರುತ್ತಾರೆ, ಕೇಳಿದೊಷ್ಟು ಡೌರಿ ಕೊಟ್ಟು ವಿಜೃಂಭಣೆಯಿಂದ ಮದುವೆ ಮಾಡಿ ವಿದೇಶಕ್ಕೆ ಕಳಿಸುತ್ತಾರೆ, ಹುಡುಗ ತುಂಬಾ ಓದಿದ್ದರೂ ಕೂಡ ರೈತ ಅಂದರೆ ಅವನನ್ನು  ಕಡೆಗಣಿಸಿ ನೋಡುವ ಮಟ್ಟಿಗೆ ಆಗಿದೆ.

ಲಕ್ಷ-ಕೋಟಿ ಖರ್ಚು ಮಾಡಿ ತಮ್ಮ ಮಕ್ಕಳನ್ನು ಓದಿಸಿ ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಂಡು, ಕಂತೆ, ಕಂತೆ  ಹಣ ಮಾಡಿಕೊಂಡು ಅಲ್ಲೆ ನೆಲೆಸಿ, ನೆಮ್ಮದಿಯಾಗಿ ಇರಬೇಕಾದ ಸಮಯ ಇಲ್ಲಿಯವರೆಗಿತ್ತೇನೊ ಸರಿ, ವಿದೇಶದಲ್ಲಿ ಈ ಕರೋನ ಎಂಬ ವೈರಸ್ ಜನ್ಮ ತಾಳಿ ಎಲ್ಲರ ಜನ್ಮವನ್ನು ಜಾಲಾಡುವಂತೆ ನಡುಕ ಹುಟ್ಟಿಸಿದೆ, ಸಾಲದೆಂಬಂತೆ ನಮ್ಮ ನಾಡಿಗೂ ಕರೆ ತಂದಿದ್ದಾರೆ.

ಇಂದು ಬಂದೊದಗಿದ ಈ ಪ್ರಸಂಗವನ್ನು  ನೋಡಿದರೆ ಹಳ್ಳಿಯಲ್ಲಿ ಹೊಲ, ಗದ್ದೆ, ತೋಟ ನೋಡಿಕೊಂಡು ರಾಜನಂತೆ ಮೆರೆಯುವ ರೈತನಿಗೆ ಮಗಳನ್ನು ಕೊಟ್ಟು ಮದುವೆ ಮಾಡುವುದೆ ಒಳ್ಳೆಯದೇನೊ ಅನಿಸುತ್ತದೆ.

ಹೌದು ಈ ಪರಿಸ್ಥಿತಿಯಲ್ಲಿ ಏನೊಂದಕ್ಕೂ ಹೆದರದೆ ದೈರ್ಯವಾಗಿರೋದು ನಮ್ಮ ರೈತರು, ಹಳ್ಳಿ ಜನರು, ಈಗ ಸಿಟಿಯಲ್ಲಿರುವವರು ಅಕ್ಕಿ, ಹಾಲು, ಹಣ್ಣು, ಸೊಪ್ಪು ತರಕಾರಿಗಳಿಗಾಗಿ ತುಂಬಾ ಪರದಾಡುತಿದ್ದಾರೆ, ಆದರೆ ರೈತ ತಾನಿರುವಲ್ಲೆ ಅವೆಲ್ಲವನ್ನೂ ಬೆಳೆದು, ಪಡೆದುಕೊಳ್ಳುತಿದ್ದಾನೆ.

ಈಗ ಈ ಸಮಯದಲ್ಲಿ ಅವರ ಜೀವವನ್ನು ಕಾಪಾಡುತ್ತಿರುವುದು ವಿದೇಶವಲ್ಲ, ನೌಕರಿ ಅಲ್ಲ, ಅವರು ಗಳಿಸಿರುವ ದುಡ್ಡು ಕೂಡ ಅಲ್ಲ, ಈ ನಮ್ಮ ತಾಯ್ನಾಡು.ಈ ವೈರಸ್ ವಿದೇಶದಲ್ಲಿ ಹುಟ್ಟಿ, ರೈಲು-ಬಸ್‌ಗಳ ಸಂಚಾರವನ್ನೆ ನಿಲ್ಲಿಸಿ, ಅಂಗಡಿ, ಮಸೀದಿ-ಮಂದಿರಗಳಿಗೆ ಬೀಗ ಹಾಕಿಸಿ ಯಾವ ರಥೋತ್ಸವವು ಉರುಳದಂತೆ ಮಾಡಿದೆ ಅಂದ್ರೆ ಅದೆಷ್ಟು ಭಯಾನಕ, ಬಲಿಷ್ಠವಾಗಿರಬಹುದೆಂದು ಊಹಿಸಿ.

ಇನ್ನೂ ಮತ್ತೆ ಮುಂದೆ ವಿದೇಶಕ್ಕೆ ಹೋಗಲಾದೀತೆ? ಹೋದರು ಈ ವೈರಸ್ ಕಾಟ ತಪ್ಪೀತೆ? ಅ ನೆಮ್ಮದಿ ಸಿಕ್ಕೀತೆ? ಇಲ್ಲಿಯವರೆಗೂ ನೌಕರರು, ದೇಶ, ವಿದೇಶದಲ್ಲಿ ಇರುವ ಹುಡುಗರು ಅಂದ್ರೆ ಹೆಣ್ಣು ಕೊಡುವವರು ದುಂಬಾಲು ಬಿದ್ದು ಬರುತ್ತಿದ್ದರು, ಇಂದಿನ ಹುಡುಗಿಯರು ಕೂಡ  ಕೇಳಬೇಕೆ ಹಳ್ಳಿ ಹುಡುಗ, ರೈತರನ್ನು ಮೂಸಿ ನೋಡದೆ ನೌಕರಿ ಗಂಡು, ಅದು ಇಂಗ್ಲೆಂಡ್, ಅಮೇರಿಕಾದಂತಹ ದೊಡ್ಡ ದೊಡ್ಡ ವಿದೇಶಗಳಲ್ಲೇ ಇರಬೇಕು ಅಂತಹ ಸಂಬಂಧಗಳನ್ನು ಮಾತ್ರ ನೋಡಿ ಒಪ್ಪಿಕೊಳ್ಳುತಿದ್ದರು, ಆದರೆ ಈ ಘಟನೆಯಿಂದ ತುಂಬಾ ವಿಚಾರ ಮಾಡಿ ಮುಂದುವರಿಯಬೇಕಾದ ಪರಿಸ್ಥಿತಿ  ಇಂದು ಬಂದು ತಲುಪಿದೆ.

ಓ ಕನ್ಯಾ ಮಣಿಗಳೆ ನೀವೊಮ್ಮೆ ಯೋಚಿಸಿ, ವಿಚಾರಿಸಿ, ವಿದೇಶದ ವೈರಸ್ ಬೇಕಾ? ತಾಯ್ನಾಡಿನ ಅನ್ನದಾತ ಬೇಕಾ?

ಹೆಣ್ಣು ಹೆತ್ತವರ ಮನಸು ಸ್ವಲ್ಪವಾದರು ಪರಿವರ್ತನೆ ಆಗಿ ನೌಕರಿ ಗಂಡು, ನೌಕರಿಯೆಂದು ಮದುವೆ ಮಾಡಿ ಕಂಡರಿಯದ ದೇಶಕ್ಕೆ ಕಳಿಸಿ ಇಂತಹ ರೋಗ-ರುಜಿನೆಗಳು ಜನ್ಮ ತಾಳಿದಾಗ ಖಾಯಿಲೆ ಅಂಟಿಸಿಕೊಂಡು, ಇದ್ದರೆ ರೋಗ ಪೀಡಿತರಾಗಿ, ಸತ್ತರೆ ಶವವಾಗಿ ಸ್ವದೇಶಕ್ಕೆ ಬರಿಸಿಕೊಳ್ಳವ ಬದಲು, ಹಳ್ಳಿಯಲ್ಲಿರುವ ಸೂಕ್ತ ಹುಡುಗ, ರೈತರಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದರೆ ಕಣ್ಮುಂದೆ ಇರುತ್ತಾಳೆ ಎನ್ನುವ ಮನೋಭಾವ ಬಂದರೆ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವಂತೆ, ನೌಕರರಿಗೊಂದು ಕಾಲ, ರೈತರರಿಗೊಂದು ಕಾಲ ಅನ್ನಬಹುದೇನೊ ಇದೊಂದು ಕಾದು ನೋಡಬೇಕು.

ಈ ಕರೋನ ವೈರಸ್‌ನಿಂದ ಒಳಿತು ಆಗುತ್ತಿದೆ, ಕೆಡುಕು ಆಗುತ್ತಿದೆ, ಎಲ್ಲರಿಗೂ, ಎಲ್ಲಾ ರೀತಿಯಲ್ಲೂ ನೀತಿ ಪಾಠ ಕಲಿಸಲು ಅವತರಿಸಿದಂತಿದೆ ಏನಾದರು ಒಟ್ಟಿನಲ್ಲಿ ಇದು ಚರಿತ್ರೆ ಸೃಷ್ಟಿಸೊ ಅವತಾರ. ಅದೊಷ್ಟು ಬೇಗ ಈ ಮಾರಿ, ಈ ದುಷ್ಟ ಅವತಾರ ಇಲ್ಲಿಂದ ನಿರ್ಮೂಲನೆಯಾಗಿ, ಎಲ್ಲರೂ ನಿಟ್ಟುಸಿರು ಬಿಡುವಂತಾಗಲಿ, ಎಂದಿನಂತೆ ನಗು ನಗುತಾ ಸಹ ಬಾಳ್ವೆ ನೆಡೆಸುವಂತಾಗಲಿ.

error: Content is protected !!