ಕೂದಲ ರಕ್ಷಣೆಗಾಗಿ ಹೆಲ್ಮೆಟ್‌ಗೆ ವಿನಾಯ್ತಿ ನೀಡಿ

ಮಾನ್ಯರೇ, 

ದಾಖಲೆಯ ರಣಬಿಸಿಲು ದಿನದಿಂದ ದಿನಕ್ಕೆ ಏರುತ್ತಿದೆ. ಬಿಸಿಲಿನ ತಾಪಕ್ಕೆ ಇಡೀ ಕರುನಾಡೆ ಕಾದ ಕಾವಲಿಯಂತಾಗಿದೆ. ಜನರು ಆಗಸದತ್ತ ಮುಖ ಮಾಡಿ ಯಾವಾಗಪ್ಪ ಮಳೆಗಾಲ ಶುರುವಾಗುತ್ತದೆ ಎಂದು ಹಪ ಹಪಿಸುತ್ತಿದ್ದಾರೆ.

ದ್ವಿಚಕ್ರ ವಾಹನ ಸವಾರರ ಸುರಕ್ಷತಾ ದೃಷ್ಟಿಯಿಂದ ಚಾಲಕ ಹಾಗೂ ಹಿಂಬದಿ ಸವಾರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ನಿಯಮವನ್ನು ಸರ್ಕಾರ ಕಡ್ಡಾಯ ಮಾಡಿದೆ, ತಪ್ಪಿ ನಡೆದರೆ ದಂಡ ತೆರಬೇಕಾಗುತ್ತದೆ.

ಬಿಸಿಲಿನ ತಾಪಕ್ಕೆ ಚರ್ಮ ಸಂಬಂಧಿ ಕಾಯಿಲೆ, ಉಸಿರಾಟದ ತೊಂದರೆ  ಉಲ್ಬಣವಾಗುವ ಜತೆಗೆ, ಹೆಚ್ಚಿನ ಉಷ್ಣತೆಯಿಂದ ತಲೆಯ ಕೂದಲುಗಳು  ಉದುರಲು ಪ್ರಾರಂಭವಾಗುತ್ತಿವೆ.

ಬೇಸಿಗೆ ಪ್ರಾರಂಭವಾಯಿತೆಂದರೆ ಸಾಕು ಬಹುತೇಕ ಮಂದಿಗೆ ದೇಹದ ಉಷ್ಣಾಂಶ ಹೆಚ್ಚಳದಿಂದ ಕೂದಲು ಉದುರುವ ಸಮಸ್ಯೆ ಪ್ರಾರಂಭವಾಗುತ್ತದೆ. ತಲೆಯ ಕೂದಲೇ ಮನುಷ್ಯನ ಅಂದ ಹೆಚ್ಚಿಸುವ ಒಂದು ಭಾಗವಾಗಿದೆ, ಅಂತಹದ್ದರಲ್ಲಿ ತಲೆಗೂದಲೇ ಇಲ್ಲದಿದ್ದರೆ ಹೇಗೆ? ಎಂಬ ಚಿಂತೆ ಕಾಡುತ್ತಿದೆೆ.

ಅವಿವಾಹಿತರಾದವರಿಗೆ ಕ್ರಮೇಣ ತಲೆಗೂದಲು ಉದುರುತ್ತಿದ್ದರೆ, ಸಂಪೂರ್ಣವಾಗಿ ಬೋಳು ತಲೆಯಾಗಿ ಭವಿಷ್ಯದಲ್ಲಿ ಹೆಣ್ಣು ಸಿಗುವುದೇ ಕಷ್ಟವಾಗುತ್ತದೆ. ಈಗಿನ ಕಾಲದಲ್ಲಿ ಆಸ್ತಿ ಪಾಸ್ತಿ ಎಲ್ಲಾ ಇದ್ದರು, ಹೆಣ್ಣು ಕೊಡುವುದೇ ಕಷ್ಟ. ತಲೆಯಲ್ಲಿ ಕೂದಲು ಇಲ್ಲವೆಂದರೆ ಎಲ್ಲೂ ಹೆಣ್ಣು ಸಿಗದೇ ಜೀವನ ಪೂರ್ತಿ ಬ್ರಹ್ಮಚಾರಿಯಾಗಬೇಕಾಗುತ್ತದೆ.

ರಾಜ್ಯ ಸರ್ಕಾರ ತುರ್ತಾಗಿ ಇತ್ತ ಗಮನ ಹರಿಸಿ ಕನಿಷ್ಠ ಮೂರ್ನಾಲ್ಕು  ತಿಂಗಳುಗಳ ಕಾಲ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ನಿಂದ ವಿನಾಯಿತಿ ನೀಡಬೇಕಾಗಿದೆ.


– ಡಿ. ಮುರುಗೇಶ, ದಾವಣಗೆರೆ

error: Content is protected !!