ಮೇಣದ ಬತ್ತಿ ಬೆಳಗಿಸಿ, ಮತದಾನ ಜಾಗೃತಿ ಜಾಥಾ

ಮೇಣದ ಬತ್ತಿ ಬೆಳಗಿಸಿ, ಮತದಾನ ಜಾಗೃತಿ ಜಾಥಾ

ಕೊಟ್ಟೂರು, ಏ. 3 – ರಾಜ್ಯ ವಿಧಾನ ಸಭೆಗೆ ನಡೆಸಲಿ ರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ಸಂಜೆ ಮೇಣದ ಬತ್ತಿ ಬೆಳಗಿಸಿ, ಬಸ್ ನಿಲ್ದಾಣ ದಿಂದ ಉಜ್ಜಿನಿ ವೃತ್ತದವರೆಗೆ ಜಾಥಾ ನಡೆಸಲಾಯಿತು.

ಜಾಥಾಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸುರುಲ್ಲಾ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜಾಥಾದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿಕೊಳ್ಳಬೇಕು. ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಕರ್ತವ್ಯವಾಗಿದೆ. ಮತದಾನದ ದಿನದಂದು ತಪ್ಪದೇ  ಮತ ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು ಎಂದು ಹೇಳಿದರು.

ಮೇಣದ ಬತ್ತಿ ಜಾಥಾದಲ್ಲಿ ಮತದಾನದ ಮಹತ್ವ ಕುರಿತು ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ತಾಲ್ಲೂಕು ಆಡಳಿತ ಕಚೇರಿಯ ಸಿಬ್ಬಂದಿ, ಪಟ್ಟಣ ಪಂಚಾಯಿತಿಯ ಸಿಬ್ಬಂದಿ, ಪೌರಕಾರ್ಮಿಕರು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದರು. ತಾಲ್ಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಮೈದೂರು ಶಶಿಧರ್ ಮತ್ತಿತರರಿದ್ದರು.

error: Content is protected !!