ನೊಳಂಬ ಸಮುದಾಯ ಭವನ ನಿರ್ಮಾಣಕ್ಕೆ 2.50 ಕೋಟಿ ಅನುದಾನ

ನೊಳಂಬ ಸಮುದಾಯ ಭವನ ನಿರ್ಮಾಣಕ್ಕೆ 2.50 ಕೋಟಿ ಅನುದಾನ

ಅಭಿನಂದನಾ ಸಮಾರಂಭದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ, ಏ. 3- ಕೊಟ್ಟ ಮಾತಿನಂತೆ ನೊಳಂಬ ವೀರಶೈವ ಲಿಂಗಾಯತ ಸಮಾಜದ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 2.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಸೋಮವಾರ ಎಚ್. ಕಡದಕಟ್ಟೆ ಗ್ರಾಮದಲ್ಲಿ ನೊಳಂಬ ವೀರಶೈವ ಲಿಂಗಾಯತ ಸಮಾಜದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನೊಳಂಬ ವೀರಶೈವ ಲಿಂಗಾಯತ ಸಮಾಜದ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಪ್ರಾರಂಭಿಕ ಹಂತವಾಗಿ 2.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನು 2.50 ಕೋಟಿ ನಿಧಾನವಾಗಿ ಬಿಡುಗಡೆಯಾಗಲಿದೆ ಎಂದರು.  ಈಗಾಗಲೇ ಕುಂಚಿಟಿಗ ಸಮುದಾಯ ಭವನಕ್ಕೆ 2.50 ಕೋಟಿ ರೂ ಸೇರಿದಂತೆ, ಹತ್ತೂರಿನ ತಿರುಮಲ ದೇವಸ್ಥಾನದ ಯಾತ್ರಿ ನಿವಾಸಕ್ಕೆ 75 ಲಕ್ಷ, ಎಚ್.ಗೋಪಗೊಂಡನಹಳ್ಳಿ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ 50 ಲಕ್ಷ ರೂ. ಸೇರಿದಂತೆ ಸಾಕಷ್ಟು ಅನುದಾನವನ್ನು ಕೊಟ್ಟ ಮಾತಿನಂತೆ ಹಾಕುವ ಮೂಲಕ ಅದನ್ನು ಉಳಿಸಿಕೊಂಡಿದ್ದೇನೆಂದರು.

518 ಕೋಟಿ ರೂ. ವೆಚ್ಚದಲ್ಲಿ 116 ಕೆರೆಗಳನ್ನು ತುಂಬಿಸುವ ಯೋಜನೆಯ ಕಾಮ ಗಾರಿ ಮುಕ್ತಾಯದ ಹಂತದಲ್ಲಿದ್ದು, ಸದ್ಯದಲ್ಲೇ ಕೆರೆಗಳಿಗೆ ನೀರು ತುಂಬಲಿದೆ ಎಂದರು. ಈ ಭಾಗದ ಹಳ್ಳಿಗಳಿಗೆ ಕೆರೆ ತುಂಬಿಸುವುದು ಮಾತ್ರವಲ್ಲ. ಶಾಶ್ವತ ನೀರಾವರಿ ಸೌಲಭ್ಯ ಮಾಡಬೇಕೆಂಬ ಕನಸು ನನ್ನದಾಗಿದ್ದು, ಈಗಾಗಲೇ 350 ಕೋಟಿ ರೂ. ಡಿಪಿಆರ್ ತಯಾರು ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

  ವೇಳೆ  ನಿ.ಮಿ.ಚಂದ್ರಪ್ಪ, ನಂದಿ ಬ್ಯಾಂಕ್ ಅಧ್ಯಕ್ಷ ಮಲ್ಲೇಶಪ್ಪ, ನೊಳಂಬ ಸಂಘದ ಅಧ್ಯಕ್ಷ ಚನ್ನೇಶ್, ಶಾಂತರಾಜ್ ಪಾಟೀಲ್, ಬಗರ್ ಹುಕ್ಕುಂ ಅಧ್ಯಕ್ಷ  ನಾಗ ರಾಜ್, ಶೇಖರಪ್ಪ ಹುಡೇದ್, ನಿವೃತ್ತ ಶಿಕ್ಷಕ ರಾದ ಜಯಪ್ಪ, ಮಾಜಿ ತಾ.ಪಂ. ಸದಸ್ಯ ಶಿವಾ ನಂದ್ ಸೇರಿದಂತೆ ಸಮಾಜದ ಮುಖಂಡರಿದ್ದರು.

error: Content is protected !!