275 ರಷ್ಟು ಅಭ್ಯರ್ಥಿಗಳೇ ಇಲ್ಲದ ಕಾಂಗ್ರೆಸ್ ಕೇಂದ್ರದಲ್ಲಿ ಆಡಳಿತ ನಡೆಸುವುದು ಹೇಗೆ ?

275 ರಷ್ಟು ಅಭ್ಯರ್ಥಿಗಳೇ ಇಲ್ಲದ ಕಾಂಗ್ರೆಸ್ ಕೇಂದ್ರದಲ್ಲಿ ಆಡಳಿತ ನಡೆಸುವುದು ಹೇಗೆ ?

ರಾಣೇಬೆನ್ನೂರಿನ ಮಹಿಳಾ ಸಮ್ಮೇಳನದಲ್ಲಿ ಚಿತ್ರ ನಟಿ ತಾರಾ ಪ್ರಶ್ನೆ

ರಾಣೇಬೆನ್ನೂರು, ಏ. 25 – ಕೇಂದ್ರದಲ್ಲಿ ಸರ್ಕಾರ ರಚಿಸಲು ಸರಳ ಬಹುಮತಕ್ಕೆ 275 ರಷ್ಟು ಲೋಕಸಭಾ ಸದಸ್ಯರ ಅವಶ್ಯಕತೆ ಇದೆ. ಆದರೆ ಕಾಂಗ್ರೆಸ್ ಸ್ಪರ್ಧೆ ಮಾಡಿರುವುದು ಕೇವಲ 250 ಕ್ಷೇತ್ರಗಳಲ್ಲಿ ಮಾತ್ರ ಹೀಗಿದ್ದು ಅದ್ಹೇಗೆ ರಾಹುಲ್‌ಗಾಂಧಿ ಪ್ರಧಾನಿ ಆಗ್ತಾರೆ ? ಎಂದು  ಪ್ರಶ್ನೆ ಮಾಡುವುದರ ಜೊತೆ ಸುಳ್ಳು ಹೇಳುವವರು ಬಿಜೆಪಿ ನಾಯಕರಲ್ಲ, ಕಾಂಗ್ರೆಸ್ ನಾಯಕರು ಎಂದು ಹಿರಿಯ ಚಿತ್ರ ನಟಿ ತಾರಾ ಸ್ಪಷ್ಟೀಕರಿಸಿದರು.

ರಾಣೇಬೆನ್ನೂರು ಬಿಜೆಪಿ ಕಾರ್ಯಾಲಯದಲ್ಲಿ ಮೊನ್ನೆ ನಡೆದ ಮಹಿಳಾ ಸಮ್ಮೇಳನದಲ್ಲಿ  ನೆರೆದಿದ್ದ ಬೃಹತ್ ಸಂಖ್ಯೆಯ ಮಹಿಳೆಯರನ್ನುದ್ದೇಶಿಸಿ ಅವರು ಮಾತನಾಡಿದರು.

ವಿದೇಶಕ್ಕೆ ತೆರಳಲು ಪ್ರಧಾನ ಮಂತ್ರಿಗಳಿಗೆ ವೀಸಾ ದೊರಕದ ಸ್ಥಿತಿ ಹಿಂದೆ ಭಾರತದಲ್ಲಿತ್ತು. ತಮ್ಮ ದೇಶಕ್ಕೆ ಬರುವ  ಭಾರತದ ಪ್ರಧಾನಿಗಳನ್ನು ವಿದೇಶಿಗರು  ಭಿಕ್ಷುಕರಂತೆ ಕಾಣುತ್ತಿದ್ದರು. ಆದರೆ, ಈಗ ನಮ್ಮ ಪ್ರಧಾನಿಗಳನ್ನು ರತ್ನಗಂಬಳಿ ಹಾಸಿ ಕರೆಯುವಂತಹ ಬದಲಾವಣೆಯನ್ನು ಮೋದಿ ತಂದಿ ದ್ದಾರೆ. ಅಭಿವೃದ್ಧಿ ಹಾಗೂ ಆರ್ಥಿಕ ಸುಭದ್ರತೆಯಲ್ಲಿ 11 ನೇ ಸ್ಥಾನದಲ್ಲಿದ್ದ ಭಾರತವನ್ನು 7 ನೇ ಸ್ಥಾನಕ್ಕೆ ತಂದಿದ್ದಾರೆ. ಈಗ ಮತ್ತೆ ಅಧಿಕಾರ ಕೊಟ್ಟರೆ  3 ನೇ ಸ್ಥಾನಕ್ಕೆ ತರಲಿದ್ದಾರೆ ಎಂದು ತಾರಾ ಹೇಳಿದರು.

ದೇಶದ ಜನತೆ  ಮತ್ತೆ ಬಿಜೆಪಿಗೆ  ಆಶೀರ್ವದಿಸಲಿದ್ದಾರೆ. ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಲಿದ್ದಾರೆ. ಅಭಿವೃದ್ಧಿಯ ಕನಸು ಕಾಣುತ್ತಿರುವ  ಹಾವೇರಿ – ಗದಗ ಲೋಕಸಭೆ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕೇಂದ್ರದಲ್ಲಿ ಮಂತ್ರಿಯಾಗುವುದು  ಸೂರ್ಯೋದಯದಷ್ಟೇ ಸತ್ಯ ಎಂದು ಮಾಜಿ ಮಂತ್ರಿ ಬಿ.ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.  

ಬಸವರಾಜ ಬೊಮ್ಮಾಯಿ ಪತ್ನಿ ಚೆನ್ನಮ್ಮ, ಕಾರವಾರ ಪ್ರಭಾರಿ ಭಾರತಿ ಜಂಬಗಿ, ಜಿ.ಪಂ. ಮಾಜಿ ಸದಸ್ಯರಾದ ಮಂಗಳಗೌರಿ ಪೂಜಾರ, ಜಿಲ್ಲಾ ಅಧ್ಯಕ್ಷರಾದ ಅರುಣಕುಮಾರ ಪೂಜಾರ, ಸೃಷ್ಟಿ ಪಾಟೀಲ, ರಾಜ್ಯ ಕಾರ್ಯದರ್ಶಿ ಶೋಭಾ ನಿಸ್ಸೀ ಮಗೌಡ್ರ,  ಭಾರತಿ ಅಳವಂಡಿ ಮತ್ತಿತರರಿದ್ದರು.

error: Content is protected !!