ನಗರದಲ್ಲಿ ಸಿದ್ಧೇಶ್ವರ ಶ್ರೀಗಳ ಪ್ರವಚನ ನಡೆಸುವಂತೆ ಭಕ್ತರ ಮನವಿ

ದಾವಣಗೆರೆ, ಮಾ.3- ನಗರ ಮತ್ತು ತಾಲ್ಲೂಕಿನ ಭಕ್ತ ವೃಂದದವರ ಅಪೇಕ್ಷೆ ಮೇರೆಗೆ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಅಧ್ಯಾತ್ಮಿಕ ಪ್ರವಚನ ಮತ್ತೊಮ್ಮೆ ನಡೆಯುವಂತಾಗಲಿ ಎಂದು ಭಕ್ತವೃಂದದ ಪರವಾಗಿ ಎಸ್‌.ಟಿ. ಕುಸುಮಶ್ರೇಷ್ಠಿ, ಎನ್‌.ಜಿ. ಪುಟ್ಟಸ್ವಾಮಿ, ಪಲ್ಲಾಗಟ್ಟಿ, ರಾಜಣ್ಣ ಅಜ್ಜಂಪುರ ಶೆಟ್ರು, ಷಡಾಕ್ಷರಿ, ಅಜ್ಜಂಪುರ ಶೆಟ್ರು, ಓಂಕಾರಪ್ಪ, ಆನೆಕೊಂಡದ ಮಹಾದೇವಪ್ಪ, ಎಂ.ಕೆ. ಶಿವಕುಮಾರ ಮತ್ತಿತರರು ನಿಪ್ಪಾಣಿಯಲ್ಲಿ ಭಿನ್ನವಿಸಿಕೊಂಡಿದ್ದಾರೆ.

ಕಳೆದ 7-8 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಪ್ರವಚನ ನಡೆದಿತ್ತು.ಇದೀಗ ಮತ್ತೆ ನಡೆಸಿಕೊಡುವಂತೆ ಶ್ರೀಗಳಲ್ಲಿ ಮನವಿ ಮಾಡಿದ್ದಾರೆ.

error: Content is protected !!