ದೇವಸ್ಥಾನ ಕಟ್ಟುವ ಬದಲು ಮರ ಬೆಳೆಸಿ

ದೇವಸ್ಥಾನ ಕಟ್ಟುವ ಬದಲು ಮರ ಬೆಳೆಸಿ

ಹರಪನಹಳ್ಳಿ: ವಿಶ್ವ ಪರಿಸರ ದಿನಾಚರಣೆಯಲ್ಲಿ ನ್ಯಾ.ಎಂ. ಭಾರತಿ ಸಲಹೆ

ಹರಪನಹಳ್ಳಿ, ಜೂ. 6-  ಒಂದು ದೇವಸ್ಥಾನವನ್ನು ನಿರ್ಮಾಣ ಮಾಡಿದರೆ, ನೂರಾರು ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಅದೇ ಒಂದು ಗಿಡ ಬೆಳೆಸಿದರೆ ನೂರಾರು ಜನರಿಗೆ ಆಮ್ಲಜನಕ ನೀಡುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ಹೇಳಿದರು.

ತಾಲ್ಲೂಕಿನ ಮಾಚಿಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಾಧನಾ ರಂಗಮಂದಿರದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಪರಿಸರದ ಮಹತ್ವವನ್ನು ನಾವುಗಳು ತಿಳಿದುಕೊಳ್ಳಬೇಕು.  ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ. ಅಜ್ಜಣ್ಣ ಮಾತನಾಡಿ, ಪರಿಸರ ಪ್ರತಿಯೊಂದು ಜೀವರಾಶಿಗೆ ಅತ್ಯಮೂಲ್ಯ ಕೊಡುಗೆಯಾ ಗಿದೆ. ಪರಿಸರದಲ್ಲಿನ ಗಾಳಿ, ಮಣ್ಣು, ನೀರು, ಕಾಡುಗಳು, ಸಾಗರಗಳು, ಮರಗಳು ಎಂದೆಂದಿಗೂ ಮನುಷ್ಯ ಹಾಗೂ ಪಶು, ಪಕ್ಷಿಗಳೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿದ್ದು, ಪರಿಸರ ಉಳಿಯಬೇ ಕಾದರೆ ಗಿಡ-ಮರ ಬೆಳೆಸಬೇಕು ಎಂದರು.

ವಲಯ ಅರಣ್ಯಾಧಿಕಾರಿ ಕೆ. ಮಲ್ಲಪ್ಪ ಮಾತನಾಡಿ, ಸಮಾಜದಲ್ಲಿ ಉತ್ತಮ, ಆರೋಗ್ಯಕರ ವಾತಾವರಣ ನಿರ್ಮಿಸಲು ಮರ-ಗಿಡಗಳಿಂದ ಸಾಧ್ಯ. ಗಿಡ-ಮರ ಕಡಿ ನಾಶಗೊಳಿಸದೆ, ಸಸ್ಯ ಸಂಕುಲದ ಮಹತ್ವ ಅರಿತು ಜವಾಬ್ದಾರಿಯುತ ನಾಗರಿಕರಾಗಿ ಸುಂದರ ಪರಿಸರ ಉಳಿಸಿ, ಬೆಳೆಸಬೇಕಾಗಿದೆ. ಪರಿಸರ ಬೆಳೆಸಬೇಕಾದರೆ ಶಾಲಾ ಮಕ್ಕಳಿಂದ ಮಾತ್ರ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ವಿ.ಸಿ. ಅಂಜಿನಪ್ಪ, ಸಾಮಾಜಿಕ ಅರಣ್ಯಾಧಿಕಾರಿ ತೋಷಿತ್ ಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಕೆ. ವಿರೂಪಾಕ್ಷಪ್ಪ, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್‌ಗೌಡ, ವಕೀಲರುಗಳಾದ ಜೆ. ಸೀಮಾ, ಕೆ. ಸಣ್ಣ ನಿಂಗನಗೌಡ, ಎಂ. ನಾಗೇಂದ್ರಪ್ಪ, ಗಿರೀಶ್ ಗೌಡ, ಬಿ. ತಿಪ್ಪೇಶ್, ಸಿದ್ದೇಶ್, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರಾಥೋಡ್, ಮಂಜ್ಯಾನಾಯ್ಕ, ದುರುಗಪ್ಪ, ಬಸವರಾಜ್, ಕಾನೂನು ಸೇವಾ ಸಮಿತಿ ಸಿಬ್ಬಂದಿಗಳಾದ ಕೊಟ್ರೇಶ್, ಬಸವರಾಜ್ ಉಪಸ್ಥಿತರಿದ್ದರು.

error: Content is protected !!