ದಾವಣಗೆರೆ ವಿವಿಯಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹ

ಆಂತರಿಕ ಪರೀಕ್ಷೆ ಬಹಿಷ್ಕರಿಸಿ ಎಂಎಸ್‍ಸಿ ವಿದ್ಯಾರ್ಥಿಗಳ ಧರಣಿ

ದಾವಣಗೆರೆ, ಫೆ.23- ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವಂತೆ ಒತ್ತಾಯಿಸಿ, ತಾಲ್ಲೂಕಿನ ತೋಳಹುಣಸೆಯ ಶಿವಗಂಗೋತ್ರಿಯ ದಾವಣಗೆರೆ ವಿವಿ ಕ್ಯಾಂಪಸ್‍ನಲ್ಲಿ ಎಂಎಸ್‍ಸಿ ಪ್ರಥಮ ವರ್ಷದ ಗಣಿತ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಇಂದು ಆಂತರಿಕ ಪರೀಕ್ಷೆ ಬಹಿಷ್ಕರಿಸಿ, ಪ್ರತಿಭಟನಾ ಧರಣಿ ನಡೆಸಿದರು.

ತರಗತಿಯಲ್ಲಿ ಕುಳಿತುಕೊಳ್ಳಲು ಡಯಾಸ್‍ಗಳಿಲ್ಲ. ಬೋಧಕರಿಗೆ ಪಾಠ ಮಾಡುವುದಕ್ಕೆ ಪೋಡಿಯಂ ಇಲ್ಲ. ಬ್ಲಾಕ್ ಬೋರ್ಡ್ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳೂ ಸರಿಯಾಗಿ ಇಲ್ಲ. ಈ ಬಗ್ಗೆ ಸಾಕಷ್ಟು ಬಾರಿ ದಾವಣಗೆರೆ ವಿಶ್ವ ವಿದ್ಯಾನಿಲಯದ ಆಡಳಿತ ಮಂಡಳಿ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.

ಈಗಾಗಲೇ ತರಗತಿಗಳು ಆರಂಭವಾಗಿ ಎರಡೂವರೆ ತಿಂಗಳೇ ಕಳೆದಿವೆ. ಆಗಿನಿಂದಲೂ ವಿವಿ ಕುಲಪತಿಗಳು ಸೇರಿದಂತೆ, ಅನೇಕರಿಗೆ ಡಯಾಸ್, ಬ್ಲಾಕ್ ಬೋರ್ಡ್, ಪೋಡಿಯಂ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಅನೇಕ ಸಲ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಮೂಲ ಸೌಕರ್ಯಗಳಿಗಾಗಿ ಅನಿವಾರ್ಯವಾಗಿ ಆಂತರಿಕ ಪರೀಕ್ಷೆಗಳನ್ನು ಬಹಿಷ್ಕರಿಸಿ ಹೋರಾಟ ನಡೆಸಿದ್ದೇವೆ ಎಂದರು.

ನಂತರ ವಿವಿಯ ಆಡಳಿತ ವಿಭಾಗದ ಭರವಸೆ ಮೇರೆಗೆ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಹೋರಾಟವನ್ನು ಹಿಂಪಡೆದಿದ್ದಾರೆ.

error: Content is protected !!