ಮೂವರು ಅಂತರಾಜ್ಯ ಕಳ್ಳರ ಸೆರೆ

ದಾವಣಗೆರೆ, ಜ.28- 10 ಮನೆ ಗಳ್ಳತನ ಪ್ರಕರಣಗಳನ್ನು ಬೇಧಿಸಿರುವ ಹರಿಹರ ನಗರ ಪೊಲೀಸರು ಮೂವರು ಅಂತರಾಜ್ಯ ಕಳ್ಳರನ್ನು ಬಂಧಿಸಿ, ಒಟ್ಟು 22 ಲಕ್ಷದ 92 ಸಾವಿರ ರೂ. ಮೌಲ್ಯದ ಚಿನ್ನಾ ಭರಣ, ನಗದು ವಶಪಡಿಸಿಕೊಂಡಿದ್ದಾರೆ.

ಜ.14,2021 ರಂದು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣದ ಬಗ್ಗೆ ತನಿಖೆ ಕೈಗೊಂಡಾಗ, ಮಹಾರಾಷ್ಟ್ರ ಮೂಲದ ಕಳ್ಳರ ತಂಡದ ಬಗ್ಗೆ ಸುಳಿವು ಸಿಕ್ಕಿತ್ತು. ಇದನ್ನು ಆಧರಿಸಿ ಕಳ್ಳರ ಪತ್ತೆಗೆ ಮ ಹಾರಾಷ್ಟ್ರಕ್ಕೆ ತೆರಳಿದ ಪೊಲೀಸ್ ಅಧಿಕಾರಿ ಗಳ ತಂಡ ಮಹಾರಾಷ್ಟ್ರದ ಮೂವರುಳ್ಳ ಈ ತಂಡವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹರಿಹರದ ಮನೆಗಳ್ಳತನ ಪ್ರಕರಣದೊಂದಿಗೆ ನಿಪ್ಪಾಣಿ, ಸಂಕೇಶ್ವರ, ಖಾನಾಪುರ, ಹಾವೇರಿ, ರಾಣೇಬೆನ್ನೂರು ಸೇರಿದಂತೆ ಒಟ್ಟು 10 ಮನೆಗಳ್ಳತನ ಮಾಡಿದ್ದ ಬಗ್ಗೆ ಬಂಧಿತ ಕಳ್ಳರು ಸತ್ಯ ಬಾಯಿ ಬಿಟ್ಟಿದ್ದಾರೆ. ಒಮ್ಮೆಯೂ ಸಹ ಈ ಮೂವರು ಕಳ್ಳರು ಪೊಲೀಸರ ಕೈಗೆ ಸಿಕ್ಕಿ ರಲಿಲ್ಲ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ನಗರದ ಜಿಲ್ಲಾ ಪೊಲೀಸ್ ಕಚೇರಿಯ ಲ್ಲಿಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

16 ಲಕ್ಷದ 84 ಸಾವಿರ ರೂ. ಮೌಲ್ಯದ 421 ಗ್ರಾಂ ಬಂಗಾರದ ಆಭರಣಗಳು, 2 ಲಕ್ಷದ 16 ಸಾವಿರ ರೂ. ಮೌಲ್ಯದ 3,600 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಮತ್ತು 1 ಲಕ್ಷ ನಗದು ಹಾಗೂ 7 ಸಾವಿರ ಮೌಲ್ಯದ ವಾಚ್ ಹಾಗೂ 2 ಲಕ್ಷದ 85 ಸಾವಿರ ಮೌಲ್ಯದ ಒಂದು ಕಾರು ವಶಪಡಿಸಿಕೊಳ್ಳಲಾಗಿದೆ ಎಂದು  ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ, ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್, ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ್, ರುದ್ರೇಶ್ ಮಾರ್ಗದರ್ಶನ ದಲ್ಲಿ ಹರಿಹರ ವೃತ್ತ ಸಿಪಿಐ ಯು. ಸತೀಶ್ 

error: Content is protected !!