ಅಪಾಯಕಾರಿ ಶಬ್ಧಮಾಲಿನ್ಯ ತಡೆಗಟ್ಟಿ..!

ಮಾನ್ಯರೇ

ಶಬ್ದ ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಲಾಗದೆ, ಉತ್ತಮ ಅಂಕಗಳ ಪಡೆಯದೆ, ಖಿನ್ನತೆಗೆ ಒಳಗಾಗುತ್ತಿದ್ದಾರೆ. ಹಿರಿಯ ನಾಗರಿಕರು, ನವಜಾತ ಶಿಶುಗಳು, ತೀವ್ರ ಅನಾರೋಗ್ಯ ಪೀಡಿತರು, ಸೂಕ್ಷ್ಮ ವ್ಯಕ್ತಿಗಳು, ಬಾಣಂತಿಯರು ಈ ಶಬ್ದ ಮಾಲಿನ್ಯದಿಂದ ರೋಸಿ ಹೋಗಿದ್ದಾರೆ. 

ಈ ಶಬ್ದ ಮಾಲಿನ್ಯವು ಮನುಷ್ಯನ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಾ, ನೆಮ್ಮದಿಯ ಬದುಕನ್ನು ಹಾಳು ಮಾಡುತ್ತಿದೆ. ಇತ್ತೀಚೆಗೆ ಕೆಲವು ವರ್ಷಗಳಿಂದ ಜನವಸತಿ ಪ್ರದೇಶದಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರು ಅನಾವಶ್ಯಕವಾಗಿ ಹೆಚ್ಚು ಶಬ್ದವುಳ್ಳ ಮಾಹಿತಿಗಳನ್ನು ಹಾಕಿಕೊಂಡು ವ್ಯಾಪಾರ  ಮಾಡುತ್ತಿದ್ದು, ಬೆಳಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕರಿಗೆ ಬಹಳಷ್ಟು ಕಿರಿಕಿರಿ ಉಂಟಾಗುತ್ತಿದೆ.

ಭಿಕ್ಷಕರೂ ಸಹ ಮೈಕನ್ನು ಹಾಕಿಕೊಂಡು ಭಿಕ್ಷೆಯನ್ನು ಬೇಡುತ್ತಿದ್ದಾರೆ. ರಸ್ತೆಗಳಲ್ಲಿ ವಾಹನ ಸವಾರರು ಅನಾವಶ್ಯಕವಾಗಿ ಹಾರ್ನ್ ಮಾಡುತ್ತಾ ಶಬ್ದ ಮಾಲಿನ್ಯ  ಮಾಡುತ್ತಿ ದ್ದಾರೆ.  ಇದು ಅಪಾಯಕಾರಿ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು  ಇದರ ಬಗ್ಗೆ ಗಮನಹರಿಸಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ. 


– ಹೆಲ್ಪ್‌ಲೈನ್ ಸುಭಾನ್, ದಾವಣಗೆರೆ.

error: Content is protected !!