ಶಿವಸಿಂಪಿ ಸಮಾಜದಿಂದ ‘ಶಿವಸಿಂಪಿ ಸ್ಟಾರ್ 2024’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇಂದು ಸಂಜೆ 5 ಗಂಟೆಗೆ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ಏಕಪಾತ್ರಾಭಿನಯ ಮತ್ತು ತಮಾಷೆಯ ಮನೋರಂಜನಾ ಕಾರ್ಯಕ್ರಮಗಳನ್ನು ಶಿವಸಿಂಪಿ ಪ್ರತಿಭಾವಂತರು ನಡೆಸಿ ಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಶಿವಸಿಂಪಿ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಚಿಂದೋಡಿ ಎಲ್ ಚಂದ್ರಧರ್ ಇವರಿಗೆ ಸೇವಾದೀಕ್ಷೆ ನೀಡಲಾಗುತ್ತದೆ ಎಂದು ಅಧ್ಯಕ್ಷ ಬೂಸ್ನೂರು ಗುರುಬಸಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೂಸ್ನೂರು ತಿಳಿಸಿದ್ದಾರೆ.
July 4, 2024