ನಗರದಲ್ಲಿ ಇಂದಿನಿಂದ `ಶಿಲ್ಪಕಲಾ’ ಪ್ರದರ್ಶನ

ದಾವಣಗೆರೆ, ನ. 26- ದೃಶ್ಯಕಲಾ ಮಹಾವಿದ್ಯಾಲಯದ ಶಿಲ್ಪಕಲಾ ವಿದ್ಯಾರ್ಥಿಗಳಿಂದ `ಶಿಲ್ಪಕಲಾ’ ಶೀರ್ಷಿಕೆಯಡಿ  ಸಮಕಾಲೀನ ಸಮೂಹ ಶಿಲ್ಪಕಲಾ ಪ್ರದರ್ಶನವನ್ನು ನಾಳೆ ದಿನಾಂಕ 27ರಿಂದ ಬರುವ ಡಿಸೆಂಬರ್ 6ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಉಪನ್ಯಾಸಕ ದತ್ತಾತ್ರೇಯ ಎನ್. ಭಟ್ ಹೇಳಿದರು.

ನಾಳೆ ಬುಧವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಪ್ರದರ್ಶನ ಉದ್ಘಾಟಿಸಲಿದ್ದಾರೆ.  

ರಾಜ್ಯ ವಿವಿ ಹಾಗೂ ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಹೆಚ್. ಮುರಿಗೇಂದ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 

ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ, ಡಾ.ಜೈರಾಜ ಎಂ.ಚಿಕ್ಕಪಾಟೀಲ್, ಐ.ಕ್ಯೂ.ಎ.ಸಿ. ಸಂಯೋಜನಾಧಿಕಾರಿ ಡಾ.ಸತೀಶಕುಮಾರ್ ಪಿ.ವಲ್ಲೇಪುರಿ ಉಪಸ್ಥಿತರಿರುವರು.

ಕಲಾವಿದರುಗಳಾದ ಡಾ.ಎಂ.ಕೆ. ಗಿರೀಶ್ ಕುಮಾರ್, ನವೀನ್ ಕುಮಾರ್ ಎ., ಓಂಕಾರಮೂರ್ತಿ ಜಿ.ಬಿ. ಈ ಸಂದರ್ಭದಲ್ಲಿದ್ದರು.

error: Content is protected !!