ಗರ್ಭಿಣಿ, ಬಾಣಂತಿ ಮಹಿಳೆಯರಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ, ಆ. 22- ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಪೌಷ್ಟಿಕ ಮಟ್ಟವನ್ನು ಸುಧಾರಿಸಲು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಮೊದಲನೇ ಮಗುವಿಗೆ ಎರಡು ಕಂತುಗಳಲ್ಲಿ ಒಟ್ಟು ರೂ. 5000 ನೀಡಲಾಗುತ್ತದೆ. ಎರಡನೇ ಮಗುವಿಗೆ, ಹೆಣ್ಣು ಮಗುವಾಗಿದ್ದಲ್ಲಿ, ರೂ. 6000 ಗಳನ್ನು ಒಂದೇ ಕಂತಿನಲ್ಲಿ ನೀಡಲಾಗುತ್ತಿದ್ದು, 2022 ರ ಏಪ್ರಿಲ್ 1 ರ ನಂತರ ಎರಡನೇ ಬಾರಿಗೆ ಹೆರಿಗೆಯಾಗಿ ಹೆಣ್ಣು ಮಗು ಹುಟ್ಟಿದ ತಾಯಂದಿರು ಇದೇ ದಿನಾಂಕ 31 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಆದ್ದರಿಂದ ಅರ್ಹ ಫಲಾನುಭವಿಗಳು ಅಂಗನವಾಡಿ ಕೇಂದ್ರ ಅಥವಾ ಯೋಜನೆಯ ಜಾಲತಾಣ https://pmmvy.nic.in/ ನಲ್ಲಿ ಲಭ್ಯವಿರುವ citizen login (ಸಿಟಿಜನ್ ಲಾಗಿನ್) ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.

error: Content is protected !!