ರಾಣೇಬೆನ್ನೂರು : ಇಂದು ಚೌಡೇಶ್ವರಿ ದೇವಸ್ಥಾನದ ಕಳಸಾರೋಹಣ

ನಗರ ದೇವತೆ ಶ್ರೀ ತುಂಗಾಜಲ ಚೌಡೇಶ್ವರಿ ದೇವಿ ದೇವಸ್ಥಾನದ ನೂತನ ಗೋಪುರಕ್ಕೆ ಕಳಸಾರೋಹಣ ಹಾಗೂ ಸನ್ಮಾನ ಸಮಾರಂಭವು ಇಂದು ಮತ್ತು  ನಾಳೆ ಐವರು ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಸಮಿ ತಿಯ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ತಿಳಿಸಿದ್ದಾರೆ.

ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶ್ರೀ, ದಿಂಡದಹಳ್ಳಿ ಪಶುಪತಿ ಶಿವಾನಂದ ಶ್ರೀ, ಲಿಂಗನಾಯ್ಕನಹಳ್ಳಿ ಚನ್ನವೀರ ಶಿವಯೋಗಿಗಳು, ಶನೇಶ್ಚರ ಮಠದ ಶಿವಯೋಗಿ ಶ್ರೀ ಹಾಗೂ ವಿವೇಕಾನಂದಾಶ್ರಮದ ಪ್ರಕಾಶಾನಂದ ಮಹಾರಾಜರ ಸಾನ್ನಿಧ್ಯದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಅದ್ಯಕ್ಷತೆಯಲ್ಲಿ  ಧರ್ಮಸಭೆ ನಡೆಯಲಿದೆ.

ಸಂಸದ ಶಿವಕುಮಾರ ಉದಾಸಿ, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ್‌, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ್, ಆರ್. ಶಂಕರ್, ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ್‌, ರೂಪಾ ಚಿನ್ನಿಕಟ್ಟೆ, ವರ್ತಕ ಮಲ್ಲೇಶಪ್ಪ ಅರಕೇರಿ, ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ ಮತ್ತಿತರರು ಆಗಮಿ ಸುವರು. ಇಂದು ಕುರುಬಗೇರಿಯ ಶ್ರೀ ಬನಶಂಕರಿ ದೇವಸ್ಥಾನದಿಂದ ಎರಡು ನೂರು ಜನ ಮುತೈದೆಯರ ಕುಂಭ ಮೆರವಣಿಗೆಯಲ್ಲಿ ಕಳಸ ಹಾಗೂ ದೇವಿ ಮೂರ್ತಿಗೆ ಬೆಳ್ಳಿ  ಕವಚ  ತೆಗೆದು ಜಾನಪದ ಕಲಾ ಮೇಳಗಳೊಂದಿಗೆ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದ ಶೇಖಪ್ಪ ಜೊತೆಗೆ ಕಮಿಟಿಯ ಏಕಾಂತ ಮುದಿಗೌಡ್ರ,  ಕರಬಸಪ್ಪ ಜಾಡರ ಮತ್ತಿತರರಿದ್ದರು.