ದಾವಣಗೆರೆ – ಕಲ್ಬುರ್ಗಿಗೆ ನಾಳೆಯಿಂದ ಹವಾ ನಿಯಂತ್ರಿತ ಸಾರಿಗೆ ಸೌಕರ್ಯ

ದಾವಣಗೆರೆ – ಕಲ್ಬುರ್ಗಿಗೆ ನಾಳೆಯಿಂದ ಹವಾ ನಿಯಂತ್ರಿತ ಸಾರಿಗೆ ಸೌಕರ್ಯ

 ದಾವಣಗೆರೆ,  ಮೇ. 23 – ಪ್ರಯಾಣಿಕರ ಅನುಕೂಲಕ್ಕಾಗಿ ಮೇ 25 ರಿಂದ ದಾವಣಗೆರೆ ವಿಭಾಗದಿಂದ ಹೊರಡುವ ಮಾರ್ಗಗಳಿಗೆ ಹವಾ ನಿಯಂತ್ರಿತ ಸಾರಿಗೆ ಸೌಕರ್ಯವನ್ನು ಕಲ್ಪಿಸಲಾಗಿದೆ. ರಾತ್ರಿ 8.30ಕ್ಕೆ ಹೊರಟು ಹರಿಹರ-ಹರಪನಹಳ್ಳಿ-ಹೊಸಪೇಟೆ-ಗಂಗಾವತಿ-ಲಿಂಗಸೂರು ಮಾರ್ಗವಾಗಿ ಬೆಳಿಗ್ಗೆ 5.30 ಕ್ಕೆ ಕಲ್ಬುರ್ಗಿಗೆ  ಮತ್ತು ಕಲ್ಬುರ್ಗಿಯಿಂದ ರಾತ್ರಿ 9.15 ಕ್ಕೆ ಹೊರಟು ಲಿಂಗಸೂರು-ಗಂಗಾವತಿ-ಹೊಸಪೇಟೆ-ಹರಪನಹಳ್ಳಿ-ಹರಿಹರ ಮಾರ್ಗವಾಗಿ ಬೆಳಿಗ್ಗೆ 6.25 ಕ್ಕೆ ದಾವಣಗೆರೆ ತಲುಪುವುದು. ksrtc.karnataka.gov.in  ಜಾಲತಾಣದ ಮೂಲಕ ಮುಂಗಡ ಬುಕ್ಕಿಂಗ್ ಮಾಡಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

error: Content is protected !!