ವೇಗದ ಮಾಹಿತಿಗೆ ಕ್ವಾಂಟಮ್ ತಂತ್ರಜ್ಞಾನ ಅನಿವಾರ್ಯ

ವೇಗದ ಮಾಹಿತಿಗೆ ಕ್ವಾಂಟಮ್ ತಂತ್ರಜ್ಞಾನ ಅನಿವಾರ್ಯ

 ದಾವಿವಿ ವಿಶೇಷ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಮಹೇಶ್

ದಾವಣಗೆರೆ, ಏ.3- ಮಾಹಿತಿ ತಂತ್ರಜ್ಞಾನ, ಜೀವ ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಮಹತ್ವದ ಪಾತ್ರ ನಿರ್ವಹಿಸುವ ಕ್ವಾಂಟಮ್ ಎಂಟ್ಯಾಂಜಲ್‍ಮೆಂಟ್ ಪರಿಮಾಣವು ಭವಿಷ್ಯದ ಅತೀ ವೇಗದ ಮಾಹಿತಿಯ ಅನಿವಾರ್ಯ ಮಾರ್ಗವಾಗಲಿದೆ ಎಂದು ಬೆಂಗಳೂರು ವಿಶ್ವವಿ ದ್ಯಾನಿಲಯ ಎಲೆಕ್ಟ್ರಾನಿಕ್ ವಿಜ್ಞಾನ ವಿಭಾಗದ ಪ್ರೊ.ಎಚ್.ಎಂ.ಮಹೇಶ್ ಅಭಿಪ್ರಾಯಪಟ್ಟರು.

ಕರ್ನಾಟಕ ಅಸೋಸಿಯೇಷನ್ ಫಾರ್ ಅಡ್ವಾನ್ಸ್‍ಮೆಂಟ್ ಆಫ್ ಸೈನ್ಸ್ (ಕೆಎಎಎಸ್) ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶೇಷ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಪ್ಲಿಕೇಷನ್ಸ್ ಆಫ್ ಕ್ವಾಂಟಮ್ ಎಂಟ್ಯಾಂಜಲ್‍ಮೆಂಟ್ ಕುರಿತು ಮಾತನಾಡಿದ ಅವರು, ಇದುವರೆಗೆ ಬೈನರಿ ಬಿಟ್ ತಂತ್ರಜ್ಞಾನವು ಮಾಹಿತಿ ಕ್ಷೇತ್ರದ ಮೂಲ ಆಕರವಾಗಿತ್ತು. ಆದರೆ ಪ್ರಸ್ತುತ ಕ್ವಾಂಟಮ್ ಬಿಟ್ ಆ ಸ್ಥಾನವನ್ನು ಆಕ್ರಮಿಸುತ್ತಿದ್ದು, ನವಪೀಳಿಗೆಯ ತಂತ್ರಜ್ಞಾನವು ಇದನ್ನೇ ಸಂಪೂರ್ಣವಾಗಿ ಅವಲಂಬಿಸಿ, ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರತಿದಿನವೂ ಹೊಸ ಆವಿಷ್ಕಾರಗಳು ಹೊರ ಬರುತ್ತಿವೆ. ಮಾಹಿತಿ ವಿನಿಮಯ, ಜೀವ ರಕ್ಷಕ ವಿಜ್ಞಾನಗಳಿಗೆ ಕ್ವಾಂಟಮ್ ಎಂಟ್ಯಾಂಜಲ್‍ಮೆಂಟ್ ಮಾರ್ಗದರ್ಶಿ ಸೂತ್ರವಾಗಲಿದೆ ಎಂದು ನುಡಿದರು. 

ಬೆಂಗಳೂರಿನ ಐಐಎಸ್‍ಸಿ ಪ್ರಾಧ್ಯಾಪಕ ಡಾ. ಎ.ಟಿ.ಬಿಜು, ಸಾವಯವ ಅಣುಗಳನ್ನು ಉಪಯುಕ್ತ, ಪರಿಣಾಮಕಾರಿ ಮತ್ತು ವ್ಯವಸ್ಥಿತ ರೀತಿಯಲ್ಲಿ ತಯಾರಿಸಲು ಅವಕಾಶ ಮಾಡಿಕೊಡುವ ತಂತ್ರಜ್ಞಾನವಾದ ಕ್ಲಿಕ್ ಕೆಮಿಸ್ಟ್ರಿಯು ಬಹು ಆಯಾಮಗಳ ಅಧ್ಯಯನವಾಗಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚು ಮನ್ನಣೆ ಪಡೆಯುತ್ತಿರುವ ಈ ಕ್ಷೇತ್ರವು ರಾಸಾಯನ ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಹೊಸ ದೃಷ್ಟಿಕೋನವನ್ನು ನಿರ್ಮಿಸಿದೆ ಎಂದು ಹೇಳಿದರು.

ಬೆಂಗಳೂರು ಐಐಎಸ್‍ಸಿಯ ಡಾ.  ಮಾಂಟಾ ಗೇಯನ್ ಅವರು, ಅತಿಮಾನವನ ಮೂಲ ಹಾಗೂ ಅವರಲ್ಲಿರುವ ರೋಗ ನಿರೋಧಕ ಶಕ್ತಿಯ ಕಾರಣಗಳು ಅಧ್ಯಯನ ಯೋಗ್ಯವಾಗಿವೆ. ಈ ಹಿನ್ನೆಲೆಯಲ್ಲಿಯೇ ಅತಿಮಾನವರು ಕೊರೊನಾ ರೋಗಾಣುವಿನ  ನಂತರ ಸಾಂಕ್ರಾಮಿಕದಿಂದ ಯಾವುದೇ ಪರಿಣಾಮವನ್ನು ಎದುರಿಸಲಿಲ್ಲ ಎಂದು ನುಡಿದರು. 

ವಿಶ್ರಾಂತ ಕುಲಪತಿ ಮತ್ತು ಅಧ್ಯಕ್ಷ ಪ್ರೊ.ಕೆ.ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲ ಪತಿ ಪ್ರೊ.ಬಿ.ಡಿ.ಕುಂಬಾರ ಅಧ್ಯಕ್ಷತೆ ವಹಿಸಿದ್ದರು.  ವಿವಿ ವಿಜ್ಞಾನ ನಿಕಾಯದ ಡೀನ್ ಪ್ರೊ.ರಾಮ ಲಿಂಗಪ್ಪ, ಕಾಸ್ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಲಿಂಗರಾಜು ಉಪಸ್ಥಿತರಿದ್ದರು. ಕಾಸ್   ಚಾಪ್ಟರ್ ಕಾರ್ಯದರ್ಶಿ ಪ್ರೊ.ಎಸ್.ಶಿಶುಪಾಲ ಸ್ವಾಗತಿಸಿ ದರು. ಭೌತವಿಜ್ಞಾನ ವಿಭಾಗದ ಅಧ್ಯಕ್ಷ ಡಾ.ಕೆ.ಎಂ.ಈಶ್ವರಪ್ಪ ವಂದಿಸಿದರು.

error: Content is protected !!