ಕಾಯಕದಿಂದ ಬದುಕು ಉಜ್ವಲ

ಕಾಯಕದಿಂದ ಬದುಕು ಉಜ್ವಲ

ಶ್ರೀ ರಂಭಾಪುರಿ ಜಗದ್ಗುರುಗಳು

ಹಾವೇರಿ,  ಮೇ 21- ಕೆಲಸ ಮಾಡಲು ಮನಸ್ಸಿದ್ದರೆ ಮಾರ್ಗಗಳು ಕಾಣುತ್ತವೆ. ಮನಸ್ಸಿಲ್ಲದಿದ್ದರೆ ನೂರಾರು ನೆಪಗಳು ಮುಂದೆ ಬರುತ್ತವೆ. ಕಾಯಕದಿಂದ ಮನುಷ್ಯನ ಬದುಕು ಉಜ್ವಲಗೊಳ್ಳುವುದೆಂದು ಶ್ರೀ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ನಗರದ ಶ್ರೀ ಜಗದ್ಗುರು ರೇಣುಕ ಮಂದಿರದ ಗೋಪುರ ಕಳಸಾರೋಹಣದ ಅಂಗವಾಗಿ ಜರುಗಿದ ಸಂಸ್ಕೃತಿ ಸಂವರ್ಧನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಯಾವುದೇ ಒಂದು ಒಳ್ಳೆಯ ಕೆಲಸ ಮಾಡುವಾಗ ತೊಡಕು, ತೊಂದರೆಗಳು ಬರುವುದು ಸಹಜ. ಸಜ್ಜನರಿಗೆ ಬರುವ ಆಪತ್ತು, ದುರ್ಜನರಿಗೆ ಬರುವ ಸಂಪತ್ತು ಬಹಳ ಕಾಲ ಉಳಿಯುವುದಿಲ್ಲ. ಬೆವರು ಸುರಿಸಿ ದುಡಿಯದ ಹೊರತು ಯಶಸ್ಸು ಸಿಗುವುದಿಲ್ಲ. ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ, ಸತ್ಯದ ಜೊತೆ ದೈವಶಕ್ತಿ ಇರುತ್ತದೆ. 

ಉತ್ತಮ ನಡೆ, ನುಡಿಗಳು ಜೀವನ ವಿಕಾಸಕ್ಕೆ ಸಹಕಾರಿಯಾಗುತ್ತವೆ. ಹುಡುಕುತ್ತಾ ಹೊರಟ ಧರ್ಮರಾಯನಿಗೆ ಕೆಟ್ಟವರು ಕಾಣಲಿಲ್ಲ. ಎಷ್ಟು ಹುಡುಕಿದರೂ ದುರ್ಯೋಧನನಿಗೆ ಒಳ್ಳೆಯವರು ಕಾಣಲಿಲ್ಲ. ದೃಷ್ಟಿಯಂತೆ ಸೃಷ್ಟಿ ಇರುತ್ತದೆ ಎಂಬುದನ್ನು ಯಾರೂ ಮರೆಯಬಾರದು. ಬದು ಕೊಂದು ಕಿಡಕಿ ಇದ್ದಂತೆ. ಕಿಡಕಿ ತೆರೆದರೆ ಬೆಳಕು, ಇಲ್ಲದಿ ದ್ದರೆ ಕತ್ತಲು ಆವರಿಸುತ್ತದೆ. ಶ್ರಮಪಟ್ಟು ದುಡಿದರೆ ಸುಖ, ಇಲ್ಲದಿದ್ದರೆ ದುಃಖ ತಪ್ಪಿದ್ದಲ್ಲ. ಒಳ್ಳೆಯದು, ಕೆಟ್ಟದ್ದು ಎರಡು ನಮ್ಮೊಳಗೇ ಇವೆ. ಯಾವುದನ್ನು ನಾವು ಹೆಚ್ಚು ಬಳ ಸುತ್ತೇವೆಯೋ ಅದು ಬೆಳೆಯುತ್ತಾ ಹೋಗುತ್ತದೆ. ವೀರಶೈವ ಧರ್ಮ ದಲ್ಲಿ ಕಾಯಕ ಜೀವನಕ್ಕೆ ಬಹ ಳಷ್ಟು ಮಹತ್ವ ಕೊಟ್ಟಿದ್ದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಯಲ್ಲಿ ಬೋಧಿಸಿದ್ದಾರೆ ಎಂದು ವಿವರಿಸಿದರು. 

ಹಾವೇರಿ ಹೃದಯ ಭಾಗದಲ್ಲಿರುವ ಶ್ರೀ ಜಗದ್ಗುರು ರೇಣುಕ ಮಂದಿರ ಪುನರ್ ನವೀಕರಣಗೊಂಡು ನಿರ್ಮಾಣಗೊಂಡಿರುವುದು ಮತ್ತು ಸುಂದರ ಗೋಪುರ ನಿರ್ಮಾಣಗೊಂಡು ಕಳಸಾರೋಹಣ ನೆರವೇರಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದು ಜಗದ್ಗುರುಗಳು ಹೇಳಿದರು.  

ಹಾವೇರಿ ಗುರುಪಾದದೇವರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯರು, ಬಂಕಾಪುರ ಅರಳೆಲೆ ಹಿರೇಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಹಾವೇರಿ ಹರಸೂರು ಬಣ್ಣದ ಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು,  ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರು ಉಪದೇಶಾಮೃತವನ್ನಿತ್ತರು. 

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕ ರಿಂದ ವೇದಘೋಷ, ಗಂಗಾಧರಸ್ವಾಮಿ ಅವರಿಂದ ಪ್ರಾರ್ಥನೆ ಜರುಗಿತು. ಶ್ರೀ ಜಗದ್ಗುರು ರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ ಸ್ವಾಗತಿಸಿದರು. ನಡುವಿನಮಠದ ಶ್ರೀ ಚೌಡೇಶ್ವರಿ ಮಹಿಳಾ ಮಂಡಳದ ಸದಸ್ಯರಿಂದ ಪ್ರಾರ್ಥನೆ ನಡೆಯಿತು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

error: Content is protected !!