ರೈತರು ಕೌಶಲ್ಯಾಭಿವೃದ್ಧಿಯಲ್ಲಿ ಕೊಯ್ಲೋತ್ತರ ತಂತ್ರಜ್ಞಾನಗಳ ಮಾಹಿತಿ ಅರಿಯಬೇಕು

ರೈತರು ಕೌಶಲ್ಯಾಭಿವೃದ್ಧಿಯಲ್ಲಿ ಕೊಯ್ಲೋತ್ತರ ತಂತ್ರಜ್ಞಾನಗಳ ಮಾಹಿತಿ ಅರಿಯಬೇಕು

ಹೊನ್ನಾಳಿ, ಮೇ 18 – ಪ್ರಸಕ್ತ ವರ್ಷದ ಮುಂಗಾರು ಹಂಗಾಮಿಗೆ ರೈತರ ಕೃಷಿ ಚಟುವಟಿಕೆಗೆ ಸಹಕರಿಸಲು ಕೃಷಿ ಇಲಾಖೆ ಪೂರ್ವ ಸಿದ್ಧತೆಯೊಂದಿಗೆ ಬಿತ್ತನೆ ಬೀಜ, ರಸಗೊಬ್ಬರಗಳ  ವಿತರಣೆ ಹಾಗು ದಾಸ್ತಾನುಗಳೊಂದಿಗೆ ರೈತರಿಗೆ ಬೇಕಿರುವ ಅಗತ್ಯ ಕೃಷಿ ಪರಿಕರಗಳು ಲಭ್ಯ ವಿರುವಂತೆ ನೊಡಿಕೊಳ್ಳಬೇಕಿದೆ ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿದಿರುಗಡ್ಡೆ ಜಯಣ್ಣ ಹೇಳಿದರು.

2023-24 ನೇ ಸಾಲಿನ ಕೃಷಿ ಇಲಾಖೆಯಲ್ಲಿ ಆತ್ಮಯೋಜನೆಗೆ ಕ್ರಿಯಾ ಯೋಜನೆ ತಯಾರಿಕೆಯ ಬಗ್ಗೆ ಕೃಷಿ ಇಲಾಖೆ ಹಾಗು ಕೃಷಿಕ ಸಮಾಜದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಎ.ಎಸ್. ಪ್ರತಿಮ ಪ್ರಾಸ್ತಾವಿಕವಾಗಿ ಮಾತನಾಡಿ, ಆತ್ಮಯೋಜನೆಯಡಿ ಕೈಗೊಳ್ಳಬಹುದಾದ ಕಾರ್ಯ ಯೋಜನೆಯ ಅಳವಡಿಕೆಯ ಕುರಿತು ಸಹೋದ್ಯೋಗಿ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸುವ ಮೂಲಕ ಯೋಜನೆಯ ಯಶಸ್ಸಿಗೆ ಸಲಹೆ ನೀಡುವಂತೆ ಮನವಿ ಮಾಡಿದರು.

ತೋಟಗಾರಿಕೆ ಇಲಾಖೆಯ ನಿರ್ದೇಶಕ ವೀರಭದ್ರಪ್ಪ ಮಾತನಾಡಿ, ಪಾಲಿಹೌಸ್ ನಲ್ಲಿ ತರಕಾರಿ ಬೆಳೆಗಳನ್ನು ಬೆಳೆಯಲು ಯೋಜನೆ ಅಳವಡಿಕೆ ಮತ್ತು ಹೂವು, ಹಣ್ಣು ತಯಾರಿಕೆ ಬೆಳೆಗಳ ಬಗ್ಗೆ ತರಬೇತಿಗಳ ಆಯೋಜನೆ ಹಾಗು ಇಲಾಖೆಯ ಕೃಷಿ ಬೀಜಗಳ ಬಗ್ಗೆ ವಿವರಿಸಿ ವಿವಿಧ ಬೆಳೆಗಳಿಗೆ ರಸವರಿ ಪದ್ಧತಿ ಅಳವಡಿಕೆ, ಕೌಶಲ್ಯಾ ಭಿವೃದ್ಧಿಯಲ್ಲಿ ಕೊಯ್ಲೋತ್ತರ ತಂತ್ರಜ್ಞಾನಗಳ ಮಾಹಿತಿ ರೈತರು ಅರಿಯಬೇಕೆಂದರು.

ರೇಷ್ಮೆ ಇಲಾಖೆ ನಿರೀಕ್ಷಕ ಜಗದೀಶ್ವರ ಮಾತನಾಡಿ, ರೇಷ್ಮೇ ಬೆಳೆಯುವ ರೈತರಿಗೆ ಇಲಾಖೆಯ ಅನುದಾನದ ಲಭ್ಯತೆಯೊಂದಿಗೆ ಸೋಲಾರ್ ವ್ಯವಸ್ಥೆ ಬಳಕೆ ಮಾಹಿತಿ ನೀಡಿದರು.

ಎಪಿಎಂಸಿ ಸಹಾಯಕ ಅಧಿಕಾರಿ ಹನುಮಂತ ಗೌಡ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನಿಗದಿಯ ಕಾರಣಕ್ಕಾಗಿ ಬೆಳೆ ವರ್ಗೀ ಕರಣದಿಂದ ರೈತರಿಗೆ ಸ್ಪರ್ಧಾತ್ಮಕ ಬೆಳೆಯನ್ನು ಒದಗಿಸಿಕೊಡಲು ಸಹಕರಿಸಲಿದೆ ಎಂದರು.

ವಲಯ ಅರಣ್ಯಾಧಿಕಾರಿ ಡಿ. ಎಂ. ಷಣ್ಮುಖಪ್ಪ ಮಾತನಾಡಿ, ಅರಣ್ಯ ಕೃಷಿ ಪದ್ಧತಿ ಅತಿಮುಖ್ಯವಾದ ಅಂಶವಾಗಿದ್ದರ ಬಗ್ಗೆ  ಇಲಾಖೆ ಜಾಗೃತಿ ಮೂಡಿಸಿ ಪ್ರೋತ್ಸಾಹಿಸಲಿದೆ ಎಂದರು.

ಪಶುವೈದ್ಯಾದಧಿಕಾರಿ ವಿಶ್ವನಟೇಶ್ ಮಾತನಾಡಿ, ಇಲಾಖೆಯಲ್ಲಿ ಬರಡು ರಾಸು ಚಿಕಿತ್ಸಾ ಕಾರ್ಯಕ್ರಮ, ರೈತರಿಗೆ ಸಾರ್ವಜನಿಕರಿಗೆ ಹಸು, ಕರುಗಳ ಪ್ರದರ್ಶನ ಪೌಷ್ಠಿಕ ರಸಮೇವು ತಯಾರಿಕೆ ಕುರಿತು ತರಬೇತಿಗಳ ಆಯೋಜನೆ ಬಗ್ಗೆ ಅಧ್ಯಯನ ಕ್ಷೇತ್ರ ಪ್ರವಾಸದ ಸೌಲಭ್ಯ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷೆ ಆರುಂಡಿ ಜಯಮ್ಮ, ನಿರ್ದೇಶಕರಾದ ಕೆ.ಎಸ್. ರಾಮಲಿಂಗಪ್ಪ, ರುದ್ರಾನಾಯ್ಕ್, ಬೆಳಗುತ್ತಿ ಉಮೇಶ್, ಎನ್‍. ಪಿ.   ಕೃಷ್ಣಮೂರ್ತಿ, ಜೆ. ಬಿ. ಸುರೇಶ್, ಜೆ. ಆರ್. ಬಸವರಾಜಪ್ಪ, ಜಿ. ಎನ್. ಶಿವನಗೌಡ, ಎಂ.  ಹೆಚ್‍. ಕುಮಾರ, ಸೋಮಶೇಖರ್ ಇನ್ನಿತರರಿದ್ದರು.

error: Content is protected !!