ಉಚ್ಚಂಗಿದುರ್ಗದ ಉತ್ಸವಾಂಬೆಗೆ 371 ಕಾಯಿ ಒಡೆದು ಭಕ್ತಿ ಸಮರ್ಪಣೆ

ಉಚ್ಚಂಗಿದುರ್ಗದ ಉತ್ಸವಾಂಬೆಗೆ  371 ಕಾಯಿ ಒಡೆದು ಭಕ್ತಿ ಸಮರ್ಪಣೆ

ಹರಪನಹಳ್ಳಿ, ಮೇ 18- ಶಾಸಕರಾಗಿ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಗೆಲುವು ಸಾಧಿಸಿದ್ದಕ್ಕೆ ಹಾಗೂ 371 ಜೆ ನಾನು ಮಾಡಿಸಿದ್ದು ಎಂದು ಸುಳ್ಳು ಹೇಳಿದವರಿಗೆ ತಕ್ಕ ಪಾಠ ಕಲಿಸಿದ್ದಕ್ಕೆ ದಿ. ಮಾಜಿ ಶಾಸಕ ಎಂ.ಪಿ.ರವೀಂದ್ರ ಅಭಿಮಾನಿ ಬಳಗದಿಂದ ಇತಿಹಾಸ ಪ್ರಸಿದ್ದ ಉಚ್ಚಂಗಿದುರ್ಗದ ಉತ್ಸವಾಂಭ ದೇವಾಲಯದಲ್ಲಿ 371 ತೆಂಗಿನಕಾಯಿ ಒಡೆದು ದೇವಿಗೆ ಭಕ್ತಿ ಸಮರ್ಪಿಸಲಾಯಿತು.

ಪಟ್ಟಣದ ಉಪ್ಪಾರಗೇರಿಯ ಶಿಕ್ಷಕ ಮೇಘರಾಜ ಅವರ ನೇತೃತ್ವದಲ್ಲಿ ಉತ್ಸವಾಂಭ ದೇವಿಗೆ ಪೂಜೆ ಸಲ್ಲಿಸಿ ಪಾದಗಟ್ಟೆ ಬಳಿ ತೆಂಗಿನಕಾಯಿ ಒಡೆದು ಭಕ್ತಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಮೇಘರಾಜ ಅವರು ಹೂವಿನ ಹಡಗಲಿಯ ಮಾಜಿ ಶಾಸಕರು ಉಚ್ಚಂಗಿದುರ್ಗದಲ್ಲಿ ವಿಧಾನ ಪರಿಷತ್ತು ಚುನಾವಣಾ ಪ್ರಚಾರದಲ್ಲಿ 371 ಜೆ ಕಲ್ಪಿಸಿದ್ದು ನಾನು ಎಂದಾಗ ಮಧ್ಯ ಪ್ರವೇಶಿಸಿದ ನಾನು ನೀವಲ್ಲ, ದಿ. ಎಂ.ಪಿ.ರವೀಂದ್ರ ಎಂದು ಹೇಳಿದ್ದೆ ಹಾಗೂ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡು ದೇವಿ ಎಂದು ಬೇಡಿಕೊಂಡಿದ್ದೆ, ಅದರಂತೆ ದೇವಿ ಹರಪನಹಳ್ಳಿ ಹಾಗೂ ಹೂವಿನ ಹಡಗಲಿ ಕ್ಷೇತ್ರದಲ್ಲಿ ಉತ್ತರ ಕೊಟ್ಟಿದ್ದಾಳೆ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಗುಡಿ ನಾಗರಾಜ್, ಜಕಾತಿ ಆನಂದ್, ಗುಡಿಕಟ್ಟೆಕೇರಿ ಅಂಜಿನಪ್ಪ, ಶಿಕಾರಿ ಅಂಜಿನಪ್ಪ, ಮಟ್ಟೇರಿ ಮಂಜುನಾಥ್, ಕಡಬಗೇರಿ ಕಾರ್ತಿಕ ಸೇರಿದಂತೆ ಇತರರು ಹಾಜರಿದ್ದರು.