ಹಜ್ ಯಾತ್ರಿಗಳಿಗೆ ಚುಚ್ಚುಮದ್ದು

ಹಜ್ ಯಾತ್ರಿಗಳಿಗೆ ಚುಚ್ಚುಮದ್ದು

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದ ಡಾ. ಪ್ರಭಾ

ದಾವಣಗೆರೆ, ಮೇ 18- ನಗರದಿಂದ ಹಜ್‌ಯಾತ್ರೆಗೆ ತೆರಳುವ ಪ್ರವಾಸಿಗರಿಗೆ ಸ್ಥಳೀಯ ಕೆ.ಆರ್.ರಸ್ತೆಯ ಗುಲ್‌ಷನ್ ಮಾಲ್‌ನಲ್ಲಿ ಇಂದು ಚುಚ್ಚುಮದ್ದು ನೀಡಲಾಯಿತು.

ಕಾರ್ಯುಕ್ರಮಕ್ಕೆ ಚಾಲನೆ ನೀಡಿದ ಬಾಪೂಜಿ ವಿದ್ಯಾಸಂಸ್ಥೆ  ಆಡಳಿತ ಮಂಡಳಿ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಆರೋಗ್ಯವಾಗಿ ಹೋಗಿ ದೇವರ ದರ್ಶನ ಮಾಡಿಕೊಂಡು ಮರಳಿ ಬನ್ನಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ದಾವಣಗೆರೆಯಿಂದ ಹಜ್‌ಗೆ ತೆರಳುವ 186 ಜನರಿಗೆ ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ತಿಳಿಸಿದರು. ಧಾರ್ಮಿಕ ಯಾತ್ರೆ ಸಂತೋಷದಿಂದ ಕೂಡಿರಲಿ ಎನ್ನುವ ಆಶಯದೊಂದಿಗೆ ಜಿಲ್ಲಾ ಖಾದಿಮುಲ್ ಹುಜ್ಜಾಜ್ ಕಮಿಟಿಯಿಂದ ಈ  ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ. ನೀವೆಲ್ಲರೂ ದೇಶದ ಪ್ರತಿಯೊಬ್ಬ ನಾಗರಿಕನ ಪರವಾಗಿ ದೇವರಲ್ಲಿ ಬೇಡಿಕೊಂಡು ಆರೋಗ್ಯಪೂರ್ಣರಾಗಿ ಮರಳಿರಿ ಎಂದು ಆಶಿಸಿದರು. 

ಕಾರ್ಯಕ್ರಮದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಅಯೂಬ್ ಪೈಲ್ವಾನ್, ಹಬೀಬ್ ಸಾಬ್, ಸೈಯ್ಯದ್ ನಾಸೀರ್, ಸೈಯ್ಯದ್ ಖಾಜಿ ರಹಮತ್ ವುಲ್ಲಾ, ಇನಾಯತ್ ಸಾಬ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ, ದೊಡ್ಡಪೇಟೆಯಲ್ಲಿರುವ ನಗರ ಕುಟುಂಬ ಕಲ್ಯಾಣ ಕೇಂದ್ರ-1ರ ವೈದ್ಯಾಧಿಕಾರಿ ಡಾ.ಜೆ.ಎಸ್.ನಾಗರಾಜ್, ಸಿಬ್ಬಂದಿಗಳಾದ ಎಚ್.ಜಿ.ಸವಿತಾ, ವಾಸಂತಿ, ಬಿ.ಸವಿತಾ, ರಂಜಿತಾ, ಗಣೇಶ್, ಭರಮನಗೌಡ, ಸುಧಾಕರ್, ಪ್ರವೀಣ್, ವಿನಯ್ ಇತರರು ಉಪಸ್ಥಿತರಿದ್ದರು.

error: Content is protected !!