ನಾಳೆ ಪ್ರೊ. ರಂಗನಾಥ್ ಕೃತಿ ಬಿಡುಗಡೆ

ನಾಳೆ ಪ್ರೊ. ರಂಗನಾಥ್ ಕೃತಿ ಬಿಡುಗಡೆ

ದಾವಣಗೆರೆ, ಜ.9- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ  ಪ್ರೊ. ಎಸ್. ಬಿ. ರಂಗನಾಥ್ ಅವರ ನೂತನ ಅನುವಾದಿತ ಕೃತಿ ‘ಮಾವೋನಿಂದ ಮಹರ್ಷಿವರೆಗೆ- ಕಾಮನಬಿಲ್ಲನು ಬೆಂಬತ್ತಿ’ ನಾಡಿದ್ದು ದಿನಾಂಕ 11  ರ ಗುರುವಾರ ರಾಯಚೂರಿ ನಲ್ಲಿ ಬಿಡುಗಡೆಯಾಗಲಿದೆ. 

ಇದು,  ಟಿಪ್ಪು ಸುಲ್ತಾನನ ಖಡ್ಗ, ಭುವನ್ ಸೋಮ್, ರಣಹದ್ದುಗಳ  ಮಧ್ಯೆ, ಎಲೆಲೆ ಮಧುಬಾಲೆ ಮುಂತಾದ  ಕೃತಿಗಳನ್ನು ಪ್ರಕಟಿಸಿರುವ ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತರೂ ಆಗಿರುವ ರಂಗನಾಥ್ ಅವರ ಹತ್ತನೆಯ ಕೃತಿ.

ಇದರ ಮೂಲ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಐ.ಎ.ಎಸ್. ಅಧಿಕಾರಿ ಎಂ.ಮದನ್ ಗೋಪಾಲ್ ಅವರ  ಎರಡನೆಯ ಕೃತಿ ‘ದಿ ರೇನ್ ಬೋ ಇಯರ್ಸ್- ಕಾನ್ಫ್ಲಿಕ್ಟ್ ಟು ಕಂಟೆಂಟ್ಮೆಂಟ್’.  ಇದು ಅವರ ವಿಶಿಷ್ಟ ಅರೆ ಆತ್ಮಚರಿತ್ರಾತ್ಮಕ ಕಾದಂಬರಿ. ‘ಕಾಂಚನ ಗಂಗಾ ಡೈರಿ’ಯು ಅವರ ಮೊದಲ ಕೃತಿಯಾಗಿದ್ದು ಅಪಾರ ಜನ ಮನ್ನಣೆ ಗಳಿಸಿದೆ.

ನಾಳೆ ಗುರುವಾರ ಸಂಜೆ 6 ಗಂಟೆಗೆ ರಾಯಚೂರಿನ ಐ.ಎಂ.ಎ. ಸಭಾಂಗಣ ದಲ್ಲಿ ಹಿರಿಯ ಹೋರಾಟಗಾರ ಬಂಡೂರನ್ ಚಾಗಿ ‘ಮಾವೋನಿಂದ ಮಹರ್ಷಿ ವರೆಗೆ’  ಕೃತಿ ಬಿಡುಗಡೆಗೊಳಿಸುವರು. ಹಿರಿಯ ಪತ್ರಕರ್ತ ಶ್ರೀನಿವಾಸ ಶಿರನೂರ ಕರ್ ಪುಸ್ತಕ ಪರಿಚಯ ಮಾಡುವರು. ರಾಯಚೂರು ಜಿಲ್ಲಾಧಿಕಾರಿ ಚಂದ್ರ ಶೇಖರ ಎಲ್. ನಾಯ್ಕ್, ಎಂ.ಮದನ್ ಗೋಪಾಲ್ ಮುಖ್ಯ ಅತಿಥಿಗಳಾಗಿದ್ದಾರೆ.

error: Content is protected !!