ಆನ್ ಲೈನ್ ಪ್ರೀತೀಲಿ ಆಳ ಇರುತ್ತಾ !!!?

ಹಲೋ ಬ್ರೋ, ಹೇಗಿದೆ ಕೋವಿಡ್ ಸಮಾಚಾರ?

ಒಂದು ರೀತಿ ಜೋರಾಗಿ ಸ್ಪ್ರೆಡ್ ಆಗ್ತಾ ಇದೆ ಬಾಸು. ಸಮಾಧಾನದ ವಿಷಯ ಅಂದ್ರೆ ಇನ್ ಫೆಕ್ಟ್ ಆಗ್ತಾ ಇರೋರಿಗಿಂತ ರಿಕವರ್ ಆಗ್ತಾ ಇರೋರ ಸಂಖ್ಯೆ ಜಾಸ್ತಿ ಆಗ್ತಿದೆ.

ನಾನು ಮೊದಲೇ ಹೇಳಿರಿಲ್ವಾ. ಇಂಡಿಯಾದಲ್ಲಿ ಜನರಿಗೆ ಇಮ್ಯೂನಿಟಿ ಪವರ್ ಜಾಸ್ತಿ ಇರುತ್ತೆ. ಕೋವಿಡ್ ತಡೆದುಕೊಳ್ಳೋ ಶಕ್ತಿ ನಮ್ಮಲ್ಲಿ ಇರುತ್ತೆ ಅಂತ. ಈ ಹಿಂದೆ ಕೊಟ್ರೇಶ್ ಅಂಕಲ್ ಹೇಳಿದ್ರು? ಕೊರೊನಾ ಒಂದು ಕೆಮ್ಮು ಅಷ್ಟೇ ಅಂತ.

ನಿಜಾ ಅನ್ಸುತ್ತೆ ಬ್ರೋ. ಎರಡೂವರೆ ತಿಂಗಳ ಮಗು ರಿಕವರ್ ಆಗಿದೆ ! ಮೊನ್ನೆ ಹಂಡ್ರೆಡ್ ವರ್ಷದ ಅಜ್ಜಿ ರಿಕವರಿ ಆಗಿದ್ದಾರಂತೆ. ಹೊರಗೆ ಬಂದ ಮೇಲೆ ಏನು ಬೇಕು ಅಂತಾ ಕೇಳಿದ್ರೆ ಬಿಯರ್ ಕುಡಿಬೇಕು ಅಂತಾ ಹೇಳಿದೆ ಆ ವಜ್ಜಿ! ನಮ್ಮ ದೇಶದಲ್ಲಿ ಈ ಕೊರೊನಾ ಪವರ್ ಜಾಸ್ತಿ ಇಲ್ಲಾ ಅನ್ಸುತ್ತೆ. ವ್ಹಾಟ್ ಯೂ ಸೇ?

ಗುರೂ ನೀನು ವಾಟ್ಸ್ಯಾಪ್‌ನಲ್ಲಿ ಗಮನಿಸಿದ್ದೀಯಾ? ಮೊದಲು ಒಬ್ಬರಿಗೆ ಫೋಟೋ ಅಥವಾ ವಿಡಿಯೋ ಕಳುಹಿಸಿದಾಗ ಅದರ ರೆಸುಲ್ಯೂಷನ್ ಜಾಸ್ತಿ ಇರುತ್ತೆ. ಕ್ಲೀಯರ್ ಆಗಿ ಕಾಣುತ್ತೆ. ಆಮೇಲೆ ಅದನ್ನು ಒಬ್ಬರಿಂದ ಇನ್ನೊಬ್ಬರಿಗೆ ಫಾರ್ ವರ್ಡ್ ಮಾಡ್ತಾ ಒಂದು ನಲವತ್ತು ಜನಕ್ಕೆ ರೀಚ್ ಆಗೋ ಅಷ್ಟು ಹೊತ್ತಿಗೆ ರೆಸುಲ್ಯೂಷನ್ ಕಡಿಮೆ ಆಗಿರುತ್ತೆ. ಅಷ್ಟು ಕ್ಲೀಯರ್ ಆಗಿ ಕಾಣೋದಿಲ್ಲ.

ಹೌದು!

ಆನ್ ಲೈನ್ ಪ್ರೀತೀಲಿ ಆಳ ಇರುತ್ತಾ !!!? - Janathavani

ಹಾಗೇನೇ ಈ ಕೋವಿಡ್. ಮೊದಲು ಚೈನಾದಿಂದ ಮತ್ತು ಬೇರೆ ದೇಶಗಳಿಂದ ಅಂಟಿಸಿಕೊಂಡು ಬಂದವರಲ್ಲಿ ಸ್ವಲ್ಪ ಸ್ಟ್ರಾಂಗ್ ಇತ್ತು. ಒಬ್ಬರಿಂದ ಇನ್ನೊಬ್ಬರಿಗೆ ಸ್ಪ್ರೆಡ್ ಆಗ್ತಾ ಆಗ್ತಾ ಅದರ ಪವರೂ ಕಡಿಮೆ ಆಗಿದೆ ಅನ್ಸುತ್ತೆ.

ನೀನು ಹೇಳೋದು ಕರೆಕ್ಟ್. ಹೋಗಲಿ ಆ ಕೋವಿಡ್ ವಿಷಯ ಬಿಡು. ಈ ಆನ್‌ಲೈನ್ ಕ್ಲಾಸಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?

ನೋಡು ಬ್ರದರ್, ಚಿಕ್ಕ ಮಕ್ಕಳಿಗೆ ಅದರಲ್ಲೂ ಹತ್ತನೆಯ ಕ್ಲಾಸ್ ವರೆಗೂ ಈ ಆನ್ ಲೈನ್ ಕ್ಲಾಸ್ ಮಾಡೋದು ಸರಿಯಲ್ಲ. ಪ್ರೌಢ ಶಿಕ್ಷಣದ ಬಗ್ಗೆ ಯೋಚಿಸೋರಿಗೆ ಪ್ರೌಢತೆ ಇರಬೇಕು. ಐ ಮೀನ್ ಮೆಚ್ಯುರಿಟಿ.

ಅದು ಹೆಂಗೆ ಹೇಳ್ತಿಯಾ? ವ್ಹಾಟ್ ಈಸ್ ರಾಂಗ್ ವಿತ್ ಆನ್ ಲೈನ್ ಕ್ಲಾಸಸ್?

ಇದು ರೈಟು, ರಾಂಗೂ ಅಂತಾ ಹೇಳ್ತಿಲ್ಲಾ. ಇಫೆಕ್ಟಿವ್ ನೆಸ್ ಬಗ್ಗೆ ಯೋಚಿಸಬೇಕು. ಮೊನ್ನೆ ದೇವಸ್ಥಾನ ಓಪನ್ ಆಯ್ತು ಅಂತಾ, ನೀನು ದುಗ್ಗಮ್ಮನ ದೇವಸ್ಥಾನಕ್ಕೆ ಹೋಗಿದ್ದೀ ಅಲ್ವಾ.

ಹೌದು ಹೋಗಿದ್ದೆ.

ಯಾಕೆ ಮನೆಯಲ್ಲಿಯೇ ದುರ್ಗಮ್ಮ ದೇವಿ ಫೋಟೋಗೆ ನಮಸ್ಕಾರ ಮಾಡಬಹುದಿತ್ತಲ್ಲ! ದೇವಸ್ಥಾನಕ್ಕೆ ಯಾಕೆ ಹೋಗಬೇಕಿತ್ತು?

ದೇವಸ್ಥಾನದಲ್ಲಿ ದೇವರಿಗೆ ಕೈ ಮುಗಿಯುವುದಕ್ಕೂ, ಮನೆಯಲ್ಲಿ ಫೋಟೋಗೆ ಕೈ ಮುಗಿಯುವುದಕ್ಕೂ ವ್ಯತ್ಯಾಸ ಅನಿಸಲ್ವಾ?

ಹಾಗೇನೇ ಇದು. ಆನ್ ಲೈನ್ ನಲ್ಲಿ ಪಾಠ ಕೇಳೋದಕ್ಕೂ, ಶಾಲೆಯಲ್ಲಿ ಪಾಠ ಕೇಳೋದಕ್ಕೂ ವ್ಯತ್ಯಾಸ. ಇನ್ನೊಂದು ಬೆಸ್ಟ್ ಎಕ್ಸಾಂಪಲ್ ಅಂದ್ರೆ ನೇರ ನೋಟದ ಪ್ರೀತಿಯ ಆಳಕ್ಕೂ ಸ್ಕ್ರೀನ್ ಮೇಲೆ ನೋಡಿ ಲವ್ ಮಾಡೋ ಆಳಕ್ಕೂ ಇರೋ ವ್ಯತ್ಯಾಸ.

ಸರಿ. ಈಗಲೇ ಶಾಲೆಗಳನ್ನು ಓಪನ್ ಮಾಡಬಾರ್ದು ಅಂತಾ ಬಹಳ ಜನ ಅಂತಾರಲ್ಲಾ, ಮಕ್ಕಳು ಹಿಂದೆ ಉಳಿಯಲ್ವಾ?

ಗುರೂ, ಶಿಕ್ಷಣ ಮತ್ತು ಜೀವನ ಯಾವತ್ತೂ ರೇಸ್ ಆಗಬಾರದು. ಹೆಲ್ದೀ ವಾತಾವರಣ ಸೃಷ್ಟಿಯಾಗುವವರೆಗೂ ಮಕ್ಕಳಿಗೆ ಸ್ಕೂಲ್ ಆರಂಭಿಸೋದು ಸರಿಯಲ್ಲ. ಮಕ್ಕಳು ಆಟ ಆಡೋದನ್ನ, ಒಬ್ಬರಿಗೊಬ್ರು ಮುಟ್ಟೋದನ್ನ ಕಂಟ್ರೋಲ್ ಮಾಡೋದು ಕಷ್ಟ. ಸೋಷಿಯಲ್ ಡಿಸ್ಟೆನ್ಸ್ ಅಂದ್ರೆ, ವೈರಸ್ ಅಂದ್ರೆ ಮಕ್ಕಳಿಗೆ ಸೀರಿಯಸ್ ನೆಸ್ ಇರೋಲ್ಲ. ಈಗಲೇ ಸ್ಕೂಲ್ ಶುರು ಮಾಡಿದ್ರೆ ಅವುಗಳಿಗೆ ಹೊಸ ಆಟ, ಕಾಟ ಬೇರೆ ಶುರು ಆಗುತ್ತೆ.

ಯಾವ ಆಟ?

ಕೊರೊನಾ ಜೂಟಾಟ !!!

ಆನ್ ಲೈನ್ ಪ್ರೀತೀಲಿ ಆಳ ಇರುತ್ತಾ !!!? - Janathavani

ಆರ್.ಟಿ. ಅರುಣ್‌ಕುಮಾರ್
[email protected]

error: Content is protected !!