ಗುಮ್ಮ ಬಂದಿದೆ ಗುಮ್ಮಾ!

ಭೂಂ! ಬೌ!!

ಹ್ಞಾಂ! ಹೇ…ಯಾರು!? ಯಾರದು!?

ನಾನು ಬ್ರೋ, ನಾನು. ಏನು ಇಷ್ಟೊಂದು ಹೆದರಿಕೊಂಡು ಬಿಟ್ಟೆ!

ಅಬ್ಬಾ!! ಒಂದು ಮೂರು ನಿಮಿಷಾ!!! ಏನಾಯ್ತು ಅಂತಾನೇ ಗೊತ್ತಾಗಲಿಲ್ಲ. ಯಾರು? ದೆವ್ವನೋ, ಗುಮ್ಮಾನೋ ಅಂತ ಹೆದರಿಕೊಂಡು ಬಿಟ್ಟಿದ್ದೆ.

ನೋಡಿದಿಯಾ? ನಾವು ಸುಮ್ಮನೇ ನಮ್ಮ ಪಾಡಿಗೆ ನಾವು ಇದ್ದಾಗ, ಯಾವುದೋ ಅಪರಿಚಿತವಾದ ಶಬ್ದ, ಅಪರಿಚಿತ ವ್ಯಕ್ತಿ ಅಥವಾ ವಸ್ತು ಇದ್ದಕ್ಕಿದ್ದ ಹಾಗೆ ಗೋಚರಿಸಿದರೆ ಕಕ್ಕಾಬಿಕ್ಕಿಯಾಗಿ ಬಿಡ್ತೀವಿ. ಯು ನೋ ಇಟ್ ಈಸ್ ಎ ಸಡ್ಡನ್ ಫೀಯರ್. ಇದೊಂದು ರೀತಿ ಫೋಬಿಯಾ ಕ್ರಿಯೇಟ್ ಮಾಡಿಬಿಡುತ್ತೆ. ಈ ಅಪರಿಚಿತರು ಯಾರು? ಅಥವಾ ವಸ್ತು ಯಾವುದು? ಇದು ನಮಗೆ ಏನು ಮಾಡುತ್ತೆ, ಮಾಡಬಹುದು ಅನ್ನೊದನ್ನ ತಿಳಿಯೋದಿಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ. ನಿನಗೆ ಇದ್ದಕಿದ್ದ ಹಾಗೆ ಹೆದರಿಸಿದ್ದು ನಾನು ಅಂಥಾ ಗೊತ್ತಾಗೋದಿಕ್ಕೆ ಮೂರು ನಿಮಿಷ ಬೇಕಾಯ್ತು ಅಲ್ವಾ?

ಹೌದು! ಅಲ್ಲಿ ತನಕಾ ಹೆದರಿಕೊಂಡು ಬಿಟ್ಟಿದ್ದೆ!

ಅದೇ ರೀತಿ ಬಾಸು. ನಾವೆಲ್ಲಾ ಈ ಕೋವಿಡ್ ಗೆ ಹೆದರಿ ಮೂರು ತಿಂಗಳು ಮನೆಯಲ್ಲಿ ಮುದುರಿಕೊಂಡು ಬಿದ್ದುಕೊಂಡಿದ್ವಿ. ಈಗ ಈ ಕೊರೊನಾ ಯಾವ ರೀತಿಯ ವೈರಸ್ಸು? ಇದು ಏನು ಪರಿಣಾಮ
ಬೀರುತ್ತೆ ? ಯಾರಿಗೆ ಇದರಿಂದ ಹೆಚ್ಚಿಗೆ ತೊಂದರೆ ಆಗುತ್ತೆ, ಅನ್ನೋದು ಒಂದೊಂದಾಗಿ ಗೊತ್ತಾಗ್ತಾ ಇದೆ. ನಾವು ಕೇರ್ ಫುಲ್ ಆಗಿ ಹೆದರಿಕೆಯಿಂದ ಹೊರಗೆ ಬರ್ತಾ ಇದ್ದೀವಿ.

ನೀನು ಹೇಳೋದು ಕರೆಕ್ಟ್. ಹೌದೂ ಬ್ರೋ, ನೀನು ಇದ್ದಕಿದ್ದ ಹಾಗೆ ಬಂದು ನನಗೆ ಹೆದರಿಸಿಬಿಟ್ಟಿಯಲ್ಲಾ! ನನಗೆ ಹಾರ್ಟ್ ಅಟ್ಯಾಕ್ ಅಥವಾ ಶಾಕ್ ಆಗಿ ಏನಾದ್ರೂ ಹೆಚ್ಚು ಕಮ್ಮಿ ಆಗಿದ್ದಿದ್ರೇ?

ಗುಮ್ಮ ಬಂದಿದೆ ಗುಮ್ಮಾ! - Janathavani

ಕಮಾನ್ ಬ್ರೋ. ನೀನು ನನ್ನಷ್ಟೇ ಯಂಗ್. ಸ್ಪೋರ್ಟ್ಸ್ ಪರ್ಸನ್ ಬೇರೆ. ನಿನಗೇನೂ ಆಗೋದಿಲ್ಲ ಅನ್ನೋ ಕಾನ್‌ಫಿಡೆನ್ಸ್ ಇದ್ದಿದ್ದರಿಂದ ಹಾಗೆ ಮಾಡಿದೆ. ಅಫ್ ಕೋರ್ಸ್ ನಿನ್ನ ಜಾಗದಲ್ಲಿ ಬೇರೆ ಯಾರಾದ್ರೂ ವಯಸ್ಸಾದವರು, ಹಾರ್ಟ್ ಪೇಷೆಂಟ್ಸ್ ಅಥವಾ ಬೇರೆ ಯಾವುದಾದ್ರೂ ಸೀರಿಯಸ್ ಡಿಸೀಸ್ ಇದ್ದವರು ಇದ್ದಿದ್ರೇ? ಸೀನೇ ಬೇರೆ ಆಗಿರುತ್ತಿತ್ತು. ಹೆಚ್ಚು ಕಡಿಮೆ ಏನು. ಅವರು ಮೇಲೆ ರೈಟ್ ಹೇಳಿದ್ರೂ ಸರ್ ಪ್ರೈಸ್ ಏನು ಇರ್ತಿರ್ಲಿಲ್ಲ.

ನೀನು ಹೇಳೋದು ನಿಜ. ಈ ಕೋವಿಡ್ ವಿಷಯದಲ್ಲೂ ಹಾಗೇ ಆಗಿದೆ. ಇದರ ಇನ್ ಫೆಕ್ಷನ್ ಅದವರಲ್ಲಿ ಯಂಗ್ ಸ್ಟರ್ಸ್‌ಗೆ ಮತ್ತು ಇಮ್ಯೂನಿಟಿ ಅಂದ್ರೇ ಪ್ರತಿರೋಧಕ ಶಕ್ತಿ ಇರೋ ವ್ಯಕ್ತಿಗಳಿಗೆ ಏನೂ ಆಗಿಲ್ಲ. ವಯಸ್ಸಾದವರು, ಡಯಾಬಿಟಿಕ್ ಅಥವಾ ಬೇರೆ ಕಾಯಿಲೆ ಇದ್ದವರಿಗೆ ಬಹಳ ತೊಂದರೆ ಆಗಿದೆ. ಹೌದೂ ಈ ಕೊರೊನಾ ಮನುಷ್ಯನಲ್ಲಿ ಹುಟ್ಟಿದ್ದಾದರೂ ಹೆಂಗೆ? ವಾಟ್ ಈಸ್ ದಿ ಸಿಕ್ರೇಟ್ ಆಫ್ ಇಟ್ಸ್ ಬರ್ತ್ ಯಾರ್?

ನೋಡಪಾ. ನೀನು ಚಿಕ್ಕೋನಿದ್ದಾಗ ಈ ಎ,ಬಿ,ಸಿ,ಡಿ ಓದಿದ್ದೀ ತಾನೆ. ಕಮಾನ್ ‘ಎ’ ಫಾರ್? ಮತ್ತು ‘ಬಿ’ ಫಾರ್ ಹೇಳು ನೋಡೋಣಾ?

‘ಎ’ ಫಾರ್ ಆಪಲ್, ‘ಬಿ’ ಫಾರ್ ಬ್ಯಾಟ್.

ಹ್ಞಾಂ! ‘ಎ’ ಫಾರ್ ಆಪಲ್ ಅಂದ್ರೇ ಸೇಬು ಹಣ್ಣು. ‘ಬಿ’ ಫಾರ್ ಬ್ಯಾಟ್ ಅಂದ್ರೇ….

ಅದೇ ಕ್ರಿಕೆಟ್, ಬ್ಯಾಡ್ಮಿಂಟನ್ ಆಡ್ತೀವಲ್ಲಾ ಆ ಬ್ಯಾಟು.

ನೋ, ನೋ, ನೋ ಅಲ್ಲಾ ಇದು ಬಾವಲಿ. ರಾತ್ರಿ ಹಾರಾಡುತ್ತಲ್ಲಾ ಆ ಬ್ಯಾಟು!

ಹ್ಞೂಂ. ಅರ್ಥ ಆಯ್ತು.

ಮನುಷ್ಯರು ಹುಟ್ಟಿದ್ದು ಆಡಮ್ ಆಪಲ್ ತಿಂದಿದ್ದಕ್ಕೆ.

ಮತ್ತೆ ಕೊರೊನಾ ಹುಟ್ಟಿದ್ದೂ?

ಮನುಷ್ಯ ಬ್ಯಾಟ್ ತಿಂದಿದ್ದಕ್ಕೇ !!!

ಗುಮ್ಮ ಬಂದಿದೆ ಗುಮ್ಮಾ! - Janathavani

ಆರ್.ಟಿ. ಅರುಣ್‌ಕುಮಾರ್
[email protected]

error: Content is protected !!