ಶೇ.100 ಮತದಾನಕ್ಕೆ ಮನವಿ ಅಲಂಕೃತಗೊಂಡಿರುವ ಮತಗಟ್ಟೆಗಳು

ಶೇ.100 ಮತದಾನಕ್ಕೆ ಮನವಿ   ಅಲಂಕೃತಗೊಂಡಿರುವ ಮತಗಟ್ಟೆಗಳು

ಹರಪನಹಳ್ಳಿ, ಮೇ 9- ಪಟ್ಟಣದ ಪುರಸಭೆ ವ್ಯಾಪ್ತಿಗೆ ಸೇರುವ 39 ಮತಗಟ್ಟೆಗಳಲ್ಲಿ  3 ಮತಗಟ್ಟೆಗಳನ್ನು ಸಖೀ (ಪಿಂಕ್‌ ಬೂತ್),  3 ಯುವ ಮತದಾರರ,  3 ಮಾದರಿ, ಒಂದು ವಿಶೇಷ ವಿಕಲಚೇತನ ಮತಗಟ್ಟೆಗಳಾಗಿ ಗುರುತಿಸಿದ ಒಟ್ಟು 10 ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕೃತಗೊಳಿಸಲಾಗಿದೆ. ಅಲ್ಲದೆ 39 ಮತಗಟ್ಟೆಯ ಮತದಾರರು ತಪ್ಪದೇ ಕಡ್ಡಾಯವಾಗಿ ಶೇ 100ರಷ್ಟು ಮತದಾನ ಮಾಡುವಂತೆ ಹರಪನಹಳ್ಳಿ ಪುರಸಭೆಯ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್  ಮನವಿ ಮಾಡಿದ್ದಾರೆ. 

ಪಟ್ಟಣದ ವ್ಯಾಪ್ತಿಯಲ್ಲಿ ಸಿಬ್ಬಂದಿಯೊಂದಿಗೆ 27 ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಮತದಾರರ ಮನವೊಲಿಸಿ ಸಂವಿಧಾನಿಕ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಲು ತಿಳಿಸಿದ್ದು, ಅಲ್ಲದೇ ಪಟ್ಟಣದ  90, 106 ಹಾಗೂ 114 ಸಂಖ್ಯೆಯ ಮತಗಟ್ಟೆಗಳಲ್ಲಿ ಹೆಚ್ಚಾಗಿ ಮಹಿಳಾ ಮತದಾರರಿರುವ ಕಾರಣ ಸಖಿ ಮತಗಟ್ಟೆಗಳೆಂದು ಗುರುತಿಸಿ ಪಿಂಕ್ ಬಣ್ಣದಿಂದ ಅಲಂಕೃತಗೊಳಿಸಲಾಗಿದೆ ಅಲ್ಲದೆ ಇಲ್ಲಿನ ಮತಗಟ್ಟೆ ಅಧಿಕಾರಿಗಳು ಸೇರಿದಂತೆ, ಇತರೆ ಸಿಬ್ಬಂದಿ ಮಹಿಳೆಯರೇ ಇರುವುದು ವಿಶೇಷವಾಗಿದೆ. 

ಪಟ್ಟಣದ 89,  93 ಹಾಗೂ 123 ಸಂಖ್ಯೆಯ  ಮತಗಟ್ಟೆಗಳಲ್ಲಿ ಯುವ ಮತದಾರರೇ ಹೆಚ್ಚಾಗಿರುವ ಕಾರಣ ಯುವ ಮತ ದಾರರ ಮತಗಟ್ಟೆ ಗಳಾಗಿ ಅಲಂಕೃತ ಗೊಳಿಸಲಾಗಿದೆ. ನಂತರವಾಗಿ ಪಟ್ಟಣದ 97, 98 ಹಾಗೂ 116 ಸಂಖ್ಯೆಯ ಮೂರು ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳೆಂದು  ಗುರುತಿಸಿ ಅವುಗಳನ್ನು ಸಹ ವಿಶೇಷವಾಗಿ ಅಲಂಕೃತಗೊಳಿಸಲಾಗಿದೆ.  ಪಟ್ಟ ಣದ ತಾಲ್ಲೂಕು ಪಂಚಾಯಿತಿ ಕಛೇರಿಯ ಮತಗಟ್ಟೆ ಸಂಖ್ಯೆ : 95 ಸಂಖ್ಯೆಯ ಕೇಂದ್ರವನ್ನು ವಿಶೇಷ ವಿಕಲ ಚೇತನ ಮತಗಟ್ಟೆಯಾಗಿ ಗುರುತಿಸಿ ಇಲ್ಲಿಯೂ ಸಹ ವಿಶೇಷ ಚೇತನರಿರುವ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಈ ಮತಗಟ್ಟೆಯನ್ನು ಸಹ ಅಲಂಕೃತಗೊಳಿಸಿ ಮತದಾರರನ್ನು ಸೆಳೆದು ತಪ್ಪದೇ ಮತದಾನ ಮಾಡಲು ಸಜ್ಜುಗೊಳಿಸಲಾಗಿದೆ.

error: Content is protected !!