ರಾಣೇಬೆನ್ನೂರು ಕ್ಷೇತ್ರದಲ್ಲಿ 266 ಮತಗಟ್ಟೆ ಸ್ಥಾಪನೆ

ರಾಣೇಬೆನ್ನೂರು ಕ್ಷೇತ್ರದಲ್ಲಿ 266 ಮತಗಟ್ಟೆ ಸ್ಥಾಪನೆ

1192 ಜನ ಚುನಾವಣಾ ಸಿಬ್ಬಂದಿ ನೇಮಕ 

ರಾಣೇಬೆನ್ನೂರು, ಮೇ 9- ಇಲ್ಲಿನ ಹಳೇ ಪಿ.ಬಿ.ರಸ್ತೆಯ ರೋಟರಿ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಮಸ್ಟ ರಿಂಗ್ ಕೇಂದ್ರದಲ್ಲಿ ಮಂಗಳವಾರ ವಿಧಾನಸಭೆ ಚುನಾವಣೆಗೆ ನಿಯೋ ಜಿಸಲಾಗಿರುವ ಸಿಬ್ಬಂದಿಗೆ ಮತ   ಯಂತ್ರಗಳನ್ನು ನೀಡಿ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಯಿತು.

ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿ ಗಾಗಿ 5 ಸಖಿ ಮತಗಟ್ಟೆ,  1 ಯುವ ಅಧಿಕಾರಿಗಳ ಮತಗಟ್ಟೆ, ವಿಶೇಷ ಚೇತನರ ಮತಗಟ್ಟೆ ಸೇರಿದಂತೆ ಒಟ್ಟು 266 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಆ ಪೈಕಿ 18 ಸೂಕ್ಷ್ಮ,  2 ಅತಿ ಸೂಕ್ಷ್ಮ ಹಾಗೂ 246 ಸಾಮಾನ್ಯ ಮತಗಟ್ಟೆಗಳಿವೆ. ಪ್ರತಿ ಯೊಂದು ಮತಗಟ್ಟೆಯಲ್ಲಿ ಒಬ್ಬರು ಪಿಆರ್‍ಒ, ಒಬ್ಬರು ಎಪಿಆರ್‍ಒ ಹಾಗೂ ಇಬ್ಬರು ಪಿಒ ಸೇರಿದಂತೆ 266 ಪಿಆರ್‍ಓ, 266 ಎಪಿಆರ್‍ಓ, 532 ಹಾಗೂ 128 ಕಾಯ್ದಿರಿಸಿದ ಸಿಬ್ಬಂದಿ ಸೇರಿದಂತೆ ಒಟ್ಟು 1192 ಜನರನ್ನು ಚುನಾವಣೆ ಕರ್ತವ್ಯಕ್ಕೆ ನೇಮಿಸಲಾಗಿದೆ.

ಮತದಾನ ಸಮಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 1 ಡಿ.ವೈ.ಎಸ್.ಪಿ, 3 ಸಿಪಿಐ, 09 ಪಿಎಸ್‍ಐ, 10 ಎಎಸ್‍ಐ, 88 ಎಚ್‍ಸಿ, 121 ಪೇದೆ, 91 ಹೋಮ್‌ಗಾರ್ಡ್ಸ್‌,  ಒಂದು ಬೆಟಾಲಿಯನ್ ಸೆಂಟ್ರಲ್ ಪ್ಯಾರಾಮಿಲಿಟರಿ ಫೋರ್ಸ್, ಒಂದು ಬೆಟಾಲಿಯನ್ ಸಿಎಪಿಆರ್, 02 ಬೆಟಾಲಿಯನ್ ಕೆಎಸ್‍ಆರ್‍ಪಿ ಹಾಗೂ 100 ಗುಜರಾತ್ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಚುನಾವಣಾ ಸಿಬ್ಬಂದಿ ಹಾಗೂ ಸಾಮಗ್ರಿಗಳನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗಿಬರುವ ಸಲುವಾಗಿ 37 ಬಸ್,  3 ಮಿನಿಬಸ್ ಹಾಗೂ  9 ಟೆಂಪೋ ಸೇರಿದಂತೆ 49 ವಾಹನಗಳನ್ನು ನಿಯೋಜಿಸಲಾಗಿದೆ. 

23 ಸೆಕ್ಟರ್ ಅಧಿಕಾರಿಗಳ ಸಂಚಾರಿ ದಳ ಎಲ್ಲ ಮತಗಟ್ಟೆಗಳಿಗೂ ಸಂಚರಿಸಿ ಚುನಾವಣೆ ಉಸ್ತುವಾರಿ ನೋಡಿಕೊಳ್ಳಲಿದೆ. ಕ್ಷೇತ್ರದ 133 ಮತಗಟ್ಟೆಗಳಲ್ಲಿ ವೆಬ್‍ಕ್ಯಾಸ್ಟಿಂಗ್ ಕೇಂದ್ರಗಳನ್ನು ತೆರೆಯಲಾಗಿದ್ದು, ಇಲ್ಲಿಂದಲೇ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ಮಾಹಿತಿ ರವಾನಿಸಲಾಗುತ್ತದೆ. 

ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ 1,19,657 ಪುರುಷ, 1,17,383 ಮಹಿಳೆ ಯರು ಹಾಗೂ 15 ಇತರೆ ಮತದಾರರು ಸೇರಿದಂತೆ ಒಟ್ಟು 2,37,055 ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 

ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡಿ ರುವ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಸಿಬ್ಬಂದಿ ಮತಗಟ್ಟೆಗೆ ತೆರಳುವ ಸಲುವಾಗಿ ಮಸ್ಟರಿಂಗ್ ಕೇಂದ್ರದಲ್ಲಿ    ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.   ಚುನಾವಣಾಧಿಕಾರಿ ಇಬ್ರಾಹಿಂ ದೊಡ್ಮನಿ ಹಾಗೂ ನಗರಸಭೆ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ ಎಲ್ಲ ಪ್ರಕ್ರಿಯೆಗಳ ಉಸ್ತು ವಾರಿ ವಹಿಸಿದ್ದರು. ಕಂದಾಯ ಇಲಾಖೆ ಸಿಬ್ಬಂದಿ ಗಳಾದ ಎಂ.ಎಸ್. ಕಡೂರ, ಮಂಜುನಾಥ ಕೆಂಚರಡ್ಡಿ, ವಾಗೀಶ ಮಳೇಮಠ, ಅಶೋಕ ಅರಳೇಶ್ವರ ಮುಂತಾದವರು ಉಪಸ್ಥಿತರಿದ್ದು, ಅಧಿಕಾರಿಗಳಿಗೆ ನೆರವಾದರು.

error: Content is protected !!