ನಗರದಲ್ಲಿ ಇಂದು ‘ನನ್ನರಿವಿನ ಪ್ರವಾದಿ’ ಪುಸ್ತಕ ಬಿಡುಗಡೆ

ದಾವಣಗೆರೆ, ಅ.25- ಪ್ರವಾದಿ ಮಹಮ್ಮದ್ ಅವರ ಜೀವನ ಮತ್ತು ಸಂದೇಶ ಕುರಿತ ವಿಚಾರ ಗೋಷ್ಠಿ ಹಾಗೂ ಸಾಹಿತಿ ಯೋಗೇಶ್‌ ಮಾಸ್ಟರ್ ಅವರ ‘ನನ್ನರಿವಿನ ಪ್ರವಾದಿ’ ಪುಸ್ತಕ ಬಿಡುಗಡೆ ಸಮಾರಂಭವನ್ನು  ನಾಳೆ ದಿನಾಂಕ 26ರ ಗುರು ವಾರ ಸಂಜೆ 6.45ಕ್ಕೆ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ  ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ವಜೀರ್ ಅಹ್ಮದ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸುವರು. ಸಾಹಿತಿ ಯೋಗೇಶ್ ಮಾಸ್ಟರ್, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮ ಚಂದ್ರಪ್ಪ,  ಶಿಕ್ಷಕಿ ನಾಗವೇಣಿ ಎ.ಎಲ್. ಅತಿಥಿ ಗಳಾಗಿ ಪಾಲ್ಗೊಳ್ಳುವರು. ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಇ ಅಧ್ಯಕ್ಷತೆ ವಹಿಸುವರು ಎಂದರು.

ವಿವಿಧ ಸಂಘಟನೆಗಳ ಪ್ರಮುಖರಾದ ಎಂ. ಗುರುಸಿದ್ಧಸ್ವಾಮಿ, ಆವರಗೆರೆ ರುದ್ರಮುನಿ, ಬ್ರಹ್ಮಾಕುಮಾರಿ ಲೀಲಾಜೀ, ಸುರೇಶ್ ಗಂಡಗಾಳೆ, ಹೆಗ್ಗೆರೆ ರಂಗಪ್ಪ, ದಾದಾಪೀರ್ ಸೇಟ್, ಜಸ್ಟಿನ್ ಡಿಸೌಜ, ಹೆಚ್. ಮಲ್ಲೇಶ್, ಬಿ.ಟಿ. ಜಾಹ್ನವಿ, ಕುಂದವಾಡ ಮಂಜುನಾಥ್, ಪ್ರೊ. ದಾದಾಪೀರ್ ನವಲೇಹಾಳ್, ಜಸ್ಟಿನ್ ಜಯಕುಮಾರ್, ಕೆ.ಜಾವೀದ್, ವೀರೇಶ್  ಒಡೆಯನಪುರ, ಡಿ. ಅಬ್ದುಲ್ ರಜಾಕ್, ಸರಸ್ವತಿ ಕೆ. ಇನ್ನಿತರರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.

ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಪ್ರಮುಖರಾದ ಅಯೂಬ್‌ಖಾನ್, ಮುಹ್ಮದ್ ಖಾಲಿದ್, ನಿಜಾಮುದ್ದೀನ್ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!