ಹುಂಡೈ ಗ್ರ್ಯಾಂಡ್ ಐ 10 ಎನ್ಐಒಎಸ್ ಕಾರಿನ ಪ್ರಚಾರ ಅಭಿಯಾನಕ್ಕೆ ಚಾಲನೆ

ಹುಂಡೈ ಗ್ರ್ಯಾಂಡ್ ಐ 10 ಎನ್ಐಒಎಸ್ ಕಾರಿನ ಪ್ರಚಾರ ಅಭಿಯಾನಕ್ಕೆ ಚಾಲನೆ

ದಾವಣಗೆರೆ,ಮೇ 24- ಹುಂಡೈ ಮೋಟಾರ್ ಕಂಪನಿಯ ಗ್ರ್ಯಾಂಡ್  ಐ 10 ಎನ್ಐಒಎಸ್ ಕಾರಿನ ಪ್ರಚಾರ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಮೂರು ಡಿಜಿಟಲ್ ಫ್ಲೋಟ್ ವ್ಯಾನ್‌ಗಳ ಮೂಲಕ ರಾಜ್ಯಾದ್ಯಂತ ಎರಡು ತಿಂಗಳ ಕಾಲ ಪ್ರಚಾರ ಅಭಿಯಾನ ನಡೆಸಲಾಗುವುದು.  ಅಭಿಯಾನದ ಉದ್ಘಾಟನೆ ಸಂದರ್ಭದಲ್ಲಿ ಹುಂಡೈ ಕಂಪನಿಯ ಅಧಿಕಾರಿಗಳಾದ ರಮಣ್ ಭಾಟಿಯಾ, ಕ್ವಾನ್ ಹೀ ಹ್ಯಾನ್, ಶಾಹೇಬರಾವ್, ಧೀರಜ್ ಖತ್ರಿ, ಶರತ್ ವಿ. ತುಳಸಗಿರಿ, ಅದ್ವೈತ್ ಹುಂಡೈ ಡೀಲರ್ ಎಸ್‌ವಿಎಸ್ಎಸ್ ಗುಪ್ತ, ಬ್ಲೂ ಹುಂಡೈ ಡೀಲರ್ ಲತೀಫ್ ಹುಸೇನ್, ಮಹೀಂದ್ರ ಫೈನಾನ್ಸ್ ಪ್ರತಿನಿಧಿಗಳಾದ ಸುನೀಲ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.